ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್
Team Udayavani, Mar 7, 2021, 12:41 PM IST
ನಟ ದರ್ಶನ್ ಅವರ “ರಾಬರ್ಟ್’ ಚಿತ್ರ ಮಾರ್ಚ್ 11ರಂದು ತೆರೆಕಾಣುತ್ತಿದೆ. ಈ ನಡುವೆಯೇ ಅವರ ಹೊಸ ಸಿನಿಮಾದ ಸುತ್ತ ಚರ್ಚೆ ಶುರುವಾಗಿದೆ. ಈಗಾಗಲೇ ಅವರು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ “ರಾಜವೀರ ಮದಕರಿ ನಾಯಕ’ ಚಿತ್ರ ಆರಂಭಿಸಿದ್ದಾರೆ.
ಆದರೆ, ಈ ಚಿತ್ರದ ಚಿತ್ರೀಕರಣವನ್ನು ಚಿತ್ರತಂಡ ಮುಂದಕ್ಕೆ ಹಾಕಿದ್ದು, ಅದಕ್ಕೂ ಮೊದಲು ದರ್ಶನ್ ಮತ್ತೂಂದು ಕಮರ್ಷಿಯಲ್ ಸಿನಿಮಾ ಮಾಡಲಿದ್ದಾರೆ. ದರ್ಶನ್ ಅವರು ರಾಕ್‌ಲೈನ್ ಬ್ಯಾನರ್‌ನಲ್ಲಿ ಚಿತ್ರ ಮಾಡಲಿದ್ದು, ಈ ಚಿತ್ರದ ಟೈಟಲ್ ಅಂತಿಮವಾಗಿದೆ.
ಇದನ್ನೂ ಓದಿ:ಸೂಸೈಡ್ ಸುತ್ತ ಸಾಯಿಪ್ರಕಾಶ್ ಚಿತ್ರ
ಚಿತ್ರಕ್ಕೆ “ಗೋಲ್ಡ್ ರಿಂಗ್’ ಎಂಬ ಟೈಟಲ್ ಇಡಲಾಗಿದೆ. ದರ್ಶನ್ ಕೂಡಾ ಈ ಟೈಟಲ್ ಅನ್ನು ಇಷ್ಟಪಟ್ಟಿದ್ದಾರೆ. ಈ ಬಗ್ಗೆ ಮಾತನಾಡುವ ಯತೀಶ್ ರಾಕ್‌ಲೈನ್, “ಚಿತ್ರಕ್ಕೆ “ಗೋಲ್ಡ್ ರಿಂಗ್’ ಎಂದು ಟೈಟಲ್ ಇಟ್ಟಿದ್ದೇವೆ. ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಶೀಘ್ರದಲ್ಲಿಯೇ ಅಂತಿಮವಾಗಲಿದೆ. ಚಿತ್ರ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದನವನದ ನವದಂಪತಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್’ಗೆ ಕೋವಿಡ್ ಸೋಂಕು ದೃಢ
ಮಾಸ್-ಕ್ಲಾಸ್ಗೆ ಒಪ್ಪುವ ಹೂರಣ: ಪ್ರಜ್ವಲ್ ದೇವರಾಜ್ ರ ‘ಅರ್ಜುನ್ ಗೌಡ’ ಟ್ರೇಲರ್
ವೀಲ್ಚೇರ್ನಲ್ಲಿ ಒಂದು ವಿಭಿನ್ನ ಪ್ರೇಮಕಥೆ
ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್
‘ಕೋಟಿಗೊಬ್ಬ-3’ ಪೊಸ್ಟರ್ ಡಿಸೈನರ್ ಸಾಯಿ ಕೃಷ್ಣನನ್ನು ಕೈಬಿಟ್ಟ ನಿರ್ಮಾಣ ಸಂಸ್ಥೆ