ದುಬೈನಲ್ಲಿ “ಅಸತೋಮ ಸದ್ಗಮಯ’ ಟ್ರೇಲರ್‌ ಬಿಡುಗಡೆ

Team Udayavani, Mar 27, 2018, 2:47 PM IST

“ಅಸತೋಮ ಸದ್ಗಮಯ’ ಎಂಬ ರಾಧಿಕಾ ಚೇತನ್‌ ಅಭಿನಯದ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಚಿತ್ರದ ಟ್ರೇಲರ್‌ಗಳು ಗಾಂಧಿನಗರದಲ್ಲಿನ ಯಾವುದೋ ಹೋಟೆಲ್‌ನಲ್ಲೋ ಅಥವಾ ಯಾರಾದರೂ ಸ್ಟಾರ್‌ ಮನೆಯಲ್ಲೋ ಆಗುವುದು ವಾಡಿಕೆ. ಆದರೆ, “ಅಸತೋಮ ಸದ್ಗಮಯ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಇಲ್ಲೆಲ್ಲೂ ಅಲ್ಲ. ದೂರದ ದುಬೈನಲ್ಲಿ.

ಹೌದು, “ಅಸತೋಮ ಸದ್ಗಮಯ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ದೂರದ ದುಬೈನಲ್ಲಿ. ಇದಕ್ಕಿಂತ ಮುನ್ನ ಕೆಲವು ಚಿತ್ರಗಳು ಇಲ್ಲಿ ಬಿಡುಗಡೆಯಾಗುವುದಕ್ಕಿಂತ ಮುನ್ನ, ಬೇರೆ ದೇಶದಲ್ಲಿ ಪ್ರೀಮಿಯರ್‌ ಆಗಿದ್ದವು. ಕೆಲವು ದಿನಗಳ ಹಿಂದೆ “ಕಿಸ್‌’ ಚಿತ್ರದ ಮೊದಲ ನೋಟವನ್ನು ಯಶ್‌ ಹಾಗೂ ರಾಧಿಕಾ ಪಂಡಿತ್‌ ಚಿಕಾಗೋದಲ್ಲಿ ಬಿಡುಗಡೆ ಮಾಡಿದ್ದರು. ಈಗ “ಅಸತೋಮ ಸದ್ಗಮಯ’ ಚಿತ್ರದ ಟ್ರೇಲರ್‌ ದುಬೈನಲ್ಲಿ ಬಿಡುಗಡೆಯಾಗಿದೆ. ಫಾರ್ಚೂನ್‌ ಗ್ರೂಪ್‌ ಆಫ್ ಹೋಟೆಲ್ಸ್‌ನ ಮಾಲೀಕರಾದ ಪ್ರವೀಣ್‌ ಶೆಟ್ಟಿ ಈ ಟ್ರೇಲರ್‌ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ದುಬೈನಲ್ಲಿ ನೆಲೆಸಿರುವ ಸಾಕಷ್ಟು ಕನ್ನಡಿಗರು ಹಾಆಜರಿದ್ದರು.

“ಅಸತೋಮ ಸದ್ಗಮಯ’ ಚಿತ್ರವನ್ನು ಅಶ್ವಿ‌ನ್‌ ಪಿರೇರಾ ನಿರ್ಮಿಸಿದರೆ, ರಾಜೇಶ್‌ ವೇಣೂರು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಸಹ ಅವರದ್ದೇ. ಈ ಚಿತ್ರಕ್ಕೆ ವಹಾಬ್‌ ಸಲೀಂ ಅವರು ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದರೆ, ಕಿಶೋರ್‌ ಕುಮಾರ್‌ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ರಾಧಿಕಾ ಚೇತನ್‌ ಜೊತೆಗೆ ಕಿರಣ್‌ ರಾಜ್‌, ಲಾಸ್ಯ ನಾಗರಾಜ್‌ ಮುಂತಾದವರು ನಟಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಜಗ್ಗೇಶ್‌ ಅಭಿನಯದ "ಪ್ರೀಮಿಯರ್‌ ಪದ್ಮಿನಿ' ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ಗೊತ್ತೇ ಇದೆ. ಆ ಚಿತ್ರ ಈಗ 25ದಿನ ಪೂರೈಸಿ ಮುನ್ನುಗ್ಗುತ್ತಿದೆ....

  • ಶಿವರಾಜಕುಮಾರ್‌ ದೊಡ್ಡ ಗ್ಯಾಪ್‌ನ ಬಳಿಕ ಒಪ್ಪಿಕೊಂಡ ರೀಮೇಕ್‌ ಚಿತ್ರ "ಕವಚ'. ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಲ್ಲದೇ, ಪಾತ್ರಕ್ಕೆ ನ್ಯಾಯ ಒದಗಿಸಿದ್ದರು....

  • -ಕುರುಕ್ಷೇತ್ರ ಕನ್ನಡ ವರ್ಶನ್‌ ಟಿವಿ ರೈಟ್ಸ್‌ - 9 ಕೋಟಿ -ಹಿಂದಿ ಡಬ್ಬಿಂಗ್‌ ರೈಟ್ಸ್‌ -9.5 ಕೋಟಿ -ಕುರುಕ್ಷೇತ್ರ ಕನ್ನಡ ವರ್ಶನ್‌ ಆಡಿಯೋ ರೈಟ್ಸ್‌ -1.5 ಕೋಟಿ ಇದು...

  • ಯುವ ನಿರ್ದೇಶಕ ವಿಠಲ್‌ ಭಟ್‌ ನಿರ್ದೇಶನದ "ಹ್ಯಾಂಗೋವರ್‌' ಈಗ ಮತ್ತೆ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ ಚಿತ್ರ ಬಿಡುಗಡೆ ತಯಾರಿಯಲ್ಲಿದ್ದ ಚಿತ್ರತಂಡ, ಈಗ ಪ್ರೇಕ್ಷಕರ...

  • ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿರುವ ಬಹು ನಿರೀಕ್ಷಿತ ಮುನಿರತ್ನ "ಕುರುಕ್ಷೇತ್ರ' ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. "ಕುರುಕ್ಷೇತ್ರ'...

ಹೊಸ ಸೇರ್ಪಡೆ