ಲಕ್ಷ ವೀಕ್ಷಣೆ ಪಡೆದ ರೊಮ್ಯಾಂಟಿಕ್ ಸಾಂಗ್
ಮೈ ನೇಮ್ ಈಸ್ ರಾಜಾ ರಿಲೀಸ್ಗೆ ರೆಡಿ
Team Udayavani, Dec 22, 2019, 7:00 AM IST
ಕನ್ನಡದಲ್ಲಿ “ಮೈ ನೇಮ್ ಈಸ್ ರಾಜಾ’ ಚಿತ್ರ ಬರುತ್ತಿರುವುದು ಗೊತ್ತೇ ಇದೆ. ಆ ಚಿತ್ರ ಈಗಾಗಲೇ ಹಾಡು, ಪೋಸ್ಟರ್ ಮೂಲಕ ಒಂದಷ್ಟು ಕುತೂಹಲ ಮೂಡಿಸಿದ್ದು ಗೊತ್ತು. ಈಗ ಹೊಸ ಸುದ್ದಿಯೆಂದರೆ, ಇತ್ತೀಚೆಗಷ್ಟೇ ಚಿತ್ರದ ರೊಮ್ಯಾಂಟಿಕ್ ಟೀಸರ್ ಬಿಡುಗಡೆಯಾಗಿದ್ದು, ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆಯುವ ಮೂಲಕ ಪಡ್ಡೆಗಳ ಮನಗೆದ್ದಿದೆ.
ಪಕ್ಕಾ ಯೂಥ್ಗೆಂದೇ ಮಾಡಿರುವ ಈ ಸಿನಿಮಾದಲ್ಲಿ ನಾಯಕ ರಾಜ್ ಸೂರ್ಯನ್ ಅವರಿಗೆ ಮೂರು ಶೇಡ್ ಇದೆ. ಕ್ಲೈಮ್ಯಾಕ್ಸ್ ಹೈಲೈಟ್ ಆಗಿದ್ದು, ಚಿತ್ರದುದ್ದಕ್ಕೂ ಸಾಕಷ್ಟು ತಿರುವುಗಳಿವೆ.ಇಲ್ಲಿ ಥ್ರಿಲ್ಲರ್, ಹಾರರ್, ಕಾಮಿಡಿ, ರೊಮ್ಯಾನ್ಸ್, ಆ್ಯಕ್ಷನ್ ಜೊತೆಗೊಂದು ಸಂದೇಶವೂ ಇಲ್ಲಿದೆ. ಇನ್ನು, ರಾಜ್ಸೂರ್ಯನ್ ಜೊತೆಗೆ ಆಕರ್ಷಿಕಾ ಹಾಗು ನಸ್ರಿನ್ ನಟಿಸಿದ್ದಾರೆ.
ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆಶ್ವಿನ್ ಚಿತ್ರ ನಿರ್ದೇಶಿಸಿದ್ದು, ಪ್ರಭು ಸೂರ್ಯ ನಿರ್ಮಾಣವಿದೆ. ಬೆಂಗಳೂರು, ಕೇರಳ, ಚಿಕ್ಕಮಗಳೂರು, ಹೈದರಾಬಾದ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲ್ವಿನ್ ಜೋಶ್ವ ಸಂಗೀತ ಮತ್ತು ವೆಂಕಟ್ ಛಾಯಾಗ್ರಹಣ ಚಿತ್ರಕ್ಕಿದೆ.