ಸದ್ದು ಮಾಡುತ್ತಿದೆ ‘ವಿಜಯಾನಂದ’ ಚಿತ್ರದ ಟ್ರೇಲರ್‌

Team Udayavani, Nov 21, 2022, 3:49 PM IST

vijayanand movie trailer

ಉದ್ಯಮಿ ವಿಜಯ್‌ ಸಂಕೇಶ್ವರ ಜೀವನಾಧಾರಿತ “ವಿಜಯಾನಂದ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರದ ಕನ್ನಡ ಟ್ರೇಲರ್‌ ಬಿಡುಗಡೆ ಮಾಡಿದರೆ, ಆರೋಗ್ಯ ಸಚಿವ ಸುಧಾಕರ್‌ ಹಿಂದಿ ಟ್ರೇಲರ್‌ ಬಿಡುಗಡೆಗೊಳಿಸಿದರು.

ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ವಿಜಯ ಸಂಕೇಶ್ವರ ಅವರನ್ನು 1980ರಿಂದ ನೋಡಿದ್ದೇನೆ. ಸಂಕೇಶ್ವರ ಕೇವಲ ವೆಂಚರ್‌ ಅಲ್ಲ, ಅವರು ಅಡ್ವೆಂಚರ್‌ ವ್ಯಕ್ತಿ. ಯಾರು ಆಗಲ್ಲ ಆ ದಾರಿ ಸುಲಭ ಅಲ್ಲ ಅಂತ ಹೇಳುತ್ತಾರೋ ಅದೇ ದಾರಿ, ಅದೇ ಕಷ್ಟದ ಕೆಲಸವನ್ನು ಮಾಡಿ ಜಯಗಳಿಸುತ್ತಾರೆ. ಅವರಲ್ಲಿ ಗೆಲುವಿನ ಹಸಿವಿದೆ. ವಯಸ್ಸು ಅವರ ದೇಹಕ್ಕೆ ಹೊರತು ಅವರ ಜಯಕ್ಕಲ್ಲ. ಅಸಾಧ್ಯವನ್ನು ಸಾಧ್ಯ ಮಾಡುವ ವ್ಯಕ್ತಿ ಅವರು. ಅವರ ಹೆಸರಲ್ಲೇ ವಿಜಯವಿದೆ. ಈ ಚಿತ್ರ ಎಲ್ಲ ಯುವಕರಿಗೂ ಮಾದರಿಯಾಗಲಿ ಎಂದು ಶುಭಕೋರಿದರು. ಸಚಿವ ಸುಧಾಕರ ಮಾತನಾಡಿ ಕೂಡಾ ಶುಭ ಹಾರೈಸಿದರು.

ಚಿತ್ರದ ನಾಯಕ ನಿಹಾಲ್‌ ಮಾತನಾಡಿ, “ನಾನು ಮೂಲತಃ ಹುಬ್ಬಳ್ಳಿಯವನು. ನಮ್ಮ ತಂದೆಯ ಬಾಯಲ್ಲಿ ವಿಜಯ್‌ ಸಂಕೇಶ್ವರ ಅವರ ಬಗ್ಗೆ ಕೇಳಿದ್ದೆ. ಈಗ ಅವರ ಪಾತ್ರ ಮಾಡುತ್ತಿರುವುದು ಸಂತಸದ ವಿಷಯ. ಚಿತ್ರ ಆರಂಭ ಮಾಡುವ ಮುನ್ನ 6 ತಿಂಗಳುಗಳ ಕಾಲ ರಿಸರ್ಚ್‌ ಮಾಡಿದ್ದೇವೆ. ವಿಜಯಾನಂದ ಕನ್ನಡದ ಮೊದಲ ಬಯೋಪಿಕ್‌ ಆಗಲಿದೆ. ಇನ್ನು ಮುಂದಿನ ದಿನಗಳಲ್ಲಿ ನಾನು ಸಾಕಷ್ಟು ಚಿತ್ರ ಮಾಡಬಹುದು. ಆದರೆ ವಿಜಯಾನಂದ ಚಿತ್ರ ಮಾಡಿದಷ್ಟು ಸಂತೋಷ ಬೇರೊಂದಿಲ್ಲ. ನಿಮ್ಮ ಬದುಕಿನಲ್ಲಿ ಒಂದು ಬದಲಾವಣೆ, ಒಂದು ಬೆಳಕು ಮೂಡಲು ಈ ಚಿತ್ರ ನೋಡಬೇಕು. ವಿಜಯಾನಂದ ತಂದೆ -ಮಗ ಇಬ್ಬರ ಸೇರಿ ಆದಂತ ಹೆಸರು’ ಎಂದರು.

ನಿರ್ದೇಶಕಿ ರಿಷಿಕಾ ಶರ್ಮಾ ಮಾತನಾಡಿ, ಇದು ಕೇವಲ ಬಯೋಪಿಕ್‌ ಅಲ್ಲ. ಮೊದಲನೇದಾಗಿ ಇದು ಕನ್ನಡದ ಮೊದಲ ಬಯೋಪಿಕ್‌ ಅನ್ನುವುದು ಹೆಮ್ಮೆ. ಕೇವಲ ಬಯೋಪಿಕ್‌ ಆಗಿರದೆ ಒಂದು ಕಮರ್ಷಿಯಲ್‌ ಬಯೋಪಿಕ್‌ ಆಗಿದೆ. ಯಾರಾದರೂ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು. ಏನನ್ನಾದರೂ ಗಳಿಸಬೇಕು ಎನ್ನುವವರು ಈ ಚಿತ್ರವನ್ನು ನೋಡಲೇಬೇಕು. ಸಾಧಿಸುವ ಛಲ, ಹುಮ್ಮಸ್ಸು ಈ ಚಿತ್ರ ನೀಡಲಿದೆ. ಚಿತ್ರದ ಕೊನೆಯಲ್ಲಿ ನಾನು ಸಾಧಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ನಿಮಿಗೆ ಅನಿಸುತ್ತದೆ. ತಾಯಿ ಅಂದಾಗ ಎಲ್ಲರೂ ಎಮೋಷನಲ್‌ ಆಗ್ತಿವಿ, ಕ್ರೆಡಿಟ್‌ ನೀಡುತ್ತೇವೆ. ಆದರೆ ನಮ್ಮ ಜೀವನದ ನಿಜವಾದ ಹೀರೊ ಅಪ್ಪನಿಗೆ ಯಾವುದೇ ಕ್ರೆಡಿಟ್‌ ನೀಡಲ್ಲ. ಇದು ಒಂದು ಅಪ್ಪ ಮಗನ ಜರ್ನಿ ಕೂಡಾ ಆಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಹಂಚಿಕೆದಾರರಾಗಿ ಜಾಕ್‌ ಮಂಜು ಹಾಗೂ ಇತರ ಭಾಷೆಗಳ ಹಂಚಿಕೆದಾರರಾಗಿ ಯು ಎಫ್ಓ ಮುಂದೆ ಬಂದಿದ್ದಾರೆ. ಡಿಸೆಂಬರ್‌ 9 ರಂದು ದೇಶಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅನಂತ್‌ ನಾಗ್‌, ನಿಹಾಲ್‌, ಸಿರಿ, ಭರತ್‌ ಬೋಪಣ್ಣ, ರವಿಚಂದ್ರನ್‌,ಪ್ರಕಾಶ್‌ ಬೆಳವಾಡಿ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಗೋಪಿ ಸುಂದರ್‌ ಸಂಗೀತ, ರವಿ ವರ್ಮ ಸಾಹಸ, ಇಮ್ರಾನ್‌ ಸರ್ದಾರಿಯ ನೃತ್ಯ ಸಂಯೋಜನೆ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ

ಟಾಪ್ ನ್ಯೂಸ್

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.