ಥಿಯೇಟರ್ ಗೆ ಎಂಟ್ರಿಕೊಟ್ಟ ‘ವಿಕ್ರಾಂತ್ ರೋಣ’


Team Udayavani, Jul 28, 2022, 10:19 AM IST

ಥಿಯೇಟರ್ ಗೆ ಎಂಟ್ರಿಕೊಟ್ಟ ವಿಕ್ರಾಂತ್ ರೋಣ

ನಟ ಕಿಚ್ಚ ಸುದೀಪ್‌ ಅಭಿಮಾನಿಗಳು ಬಹು ಕಾತುರದಿಂದ ಕಾಯುತ್ತಿದ್ದ, ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ “ವಿಕ್ರಾಂತ್‌ ರೋಣ’ ಇಂದು ದೇಶ-ವಿದೇಶಗಳಲ್ಲಿ ತೆರೆ ಕಾಣುತ್ತಿದೆ. ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್‌, ಫ‌ಸ್ಟ್‌ಲುಕ್‌, ಟೀಸರ್‌, ಹಾಡುಗಳು ಮತ್ತು ಟ್ರೇಲರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ “ವಿಕ್ರಾಂತ್‌ ರೋಣ’ ತೆರೆಮೇಲೆ ಹೇಗಿರಲಿದ್ದಾನೆ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಸದ್ಯ ಸೌಥ್‌ನಿಂದ ನಾರ್ತ್‌ವರೆಗೂ ಸೌಂಡ್‌ ಮಾಡುತ್ತಿರುವ “ವಿಕ್ರಾಂತ್‌ ರೋಣ’ನ ವಿಶೇಷತೆಗಳ ಬಗ್ಗೆ ಒಂದಷ್ಟು ಹೈಲೈಟ್ಸ್‌ ಇಲ್ಲಿದೆ…

ಮತ್ತೂಂದು ಪ್ಯಾನ್‌ ಇಂಡಿಯಾ ಸಿನಿಮಾ

ಈ ವರ್ಷದ ಆರಂಭದಿಂದಲೂ ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈಗ ಈ ಅಬ್ಬರದ ಸರದಿ “ವಿಕ್ರಾಂತ್‌ ರೋಣ’ ಸಿನಿಮಾದ್ದು. ಕನ್ನಡದ ಜೊತೆಗೆ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಹೀಗೆ ವಿವಿಧ ಭಾಷೆಗಳಲ್ಲಿ “ವಿಕ್ರಾಂತ್‌ ರೋಣ’ ಏಕಕಾಲಕ್ಕೆ ಆಯಾಯ ರಾಜ್ಯಗಳಲ್ಲಿ ತೆರೆ ಕಾಣುತ್ತಿದೆ. ಎಲ್ಲ ಭಾಷೆಗಳ ಸಿನಿಮಂದಿಯ ಚಿತ್ತ “ವಿಕ್ರಾಂತ್‌ ರೋಣ’ನತ್ತ ನೆಟ್ಟಿದೆ.

ಕಿಚ್ಚನ ಸಿನಿಮಾಕ್ಕೆ ಸಲ್ಮಾನ್‌ ಖಾನ್‌ ಸಾಥ್‌

ಇನ್ನು “ವಿಕ್ರಾಂತ್‌ ರೋಣ’ ಸಿನಿಮಾದ ಹಿಂದಿ ಅವತರಣಿಕೆಗೆ ಬಾಲಿವುಡ್‌ ನಟ ಕಂ ನಿರ್ಮಾಪಕ ಸಲ್ಮಾನ್‌ ಖಾನ್‌ ಸಾಥ್‌ ನೀಡುತ್ತಿದ್ದಾರೆ. ಈಗಾಗಲೇ “ವಿಕ್ರಾಂತ್‌ ರೋಣ’ ಸಿನಿಮಾದ ಟೀಸರ್‌, ಟ್ರೇಲರ್‌ ಮೆಚ್ಚಿಕೊಂಡಿರುವ ಸಲ್ಮಾನ್‌ ಖಾನ್‌, ಹಿಂದಿಯಲ್ಲಿ “ವಿಕ್ರಾಂತ್‌ ರೋಣ’ ಸಿನಿಮಾವನ್ನು, ತಮ್ಮ “ಸಲ್ಮಾನ್‌ ಖಾನ್‌ ಫಿಲಂಸ್‌’ ಬ್ಯಾನರ್‌ನಲ್ಲಿ ಅರ್ಪಿಸುತ್ತಿದ್ದಾರೆ.

ಮಸ್ತ್ ಸ್ಟೆಪ್ಸ್‌ನಲ್ಲಿ ಕಿಕ್ಕೇರಿಸಿದ ರಕ್ಕಮ್ಮ ಜಾಕ್ವೆಲೀನ್‌

ಬಾಲಿವುಡ್‌ನ‌ ಹಾಟ್‌ ಆ್ಯಂಡ್‌ ಗ್ಲಾಮರಸ್‌ ಬೆಡಗಿ, ನಟಿ ಜಾಕ್ವೆಲೀನ್‌ ಫ‌ರ್ನಾಂಡಿಸ್‌ “ವಿಕ್ರಾಂತ್‌ ರೋಣ’ ಸಿನಿಮಾದಲ್ಲಿ ತೆರೆಮೇಲೆ ಬೋಲ್ಡ್‌ ಆ್ಯಂಡ್‌ ಬ್ಯುಟಿಫ‌ುಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಜಾಕ್ವೆಲಿನ್‌ ಮಸ್ತ್ ಸ್ಟೆಪ್ಸ್‌ ಹಾಕಿರುವ “ರ.. ರ… ರಕ್ಕಮ್ಮ’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸೌಂಡ್‌ ಮಾಡುತ್ತಿದೆ.

ಕಿಚ್ಚನ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ

ಇಲ್ಲಿಯವರೆಗೆ ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌, ಫ್ಯಾಮಿಲಿ ಎಂಟರ್‌ ಟೈನ್ಮೆಂಟ್‌ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ಕಿಚ್ಚ ಸುದೀಪ್‌, ಇದೇ ಮೊದಲ ಬಾರಿಗೆ ಔಟ್‌ ಆ್ಯಂಡ್‌ ಔಟ್‌ ಸಸ್ಪೆನ್ಸ್‌-ಥ್ರಿಲ್ಲರ್‌, ಫ್ಯಾಂಟಸಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್‌ ಲುಕ್‌ ಮತ್ತು ಪಾತ್ರ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಸಹಜವಾಗಿಯೇ “ವಿಕ್ರಾಂತ್‌ ರೋಣ’ನ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ದುಬೈನಲ್ಲಿ ಅದ್ಧೂರಿ ಪ್ರೀಮಿಯರ್‌

ಬಿಡುಗಡೆಗೂ ಮುನ್ನ ಭರ್ಜರಿಯಾಗಿ “ವಿಕ್ರಾಂತ ರೋಣ’ ಸಿನಿಮಾದ ಪ್ರಚಾರ ಕಾರ್ಯಗಳನ್ನು ನಡೆಸಿರುವ ಚಿತ್ರತಂಡ, ದೇಶ-ವಿದೇಶಗಳಲ್ಲೂ ಸಿನಿ ಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದೆ. ಇತ್ತೀಚೆಗೆ ದುಬೈ ಸೇರಿದಂತೆ ಹಲವೆಡೆ ಅದ್ಧೂರಿಯಾಗಿ “ವಿಕ್ರಾಂತ್‌ ರೋಣ’ನ ಪ್ರೀಮಿಯರ್‌ ಶೋ ನಡೆ ದಿದ್ದು, ನಿರೀಕ್ಷೆಗೂ ಮೀರಿದ ಪ್ರತಿ ಕ್ರಿಯೆ ಸಿಕ್ಕಿದ ಖುಷಿಯಲ್ಲಿದೆ ಚಿತ್ರತಂಡ

ರಾಜ್ಯದ 400ಕ್ಕೂ ಅಧಿಕ ಸ್ಕ್ರೀನ್ಸ್‌ನಲ್ಲಿ ತೆರೆಗೆ

ಕರ್ನಾಟಕ ರಾಜ್ಯದಾದ್ಯಂತ ಸುಮಾರು 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ “ವಿಕ್ರಾಂತ್‌ ರೋಣ’ನನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ತಾಲೂಕು ಕೇಂದ್ರಗಳಲ್ಲಿರುವ ಪ್ರಮುಖ ಚಿತ್ರಮಂದಿರಗಳಲ್ಲಿ “ವಿಕ್ರಾಂತ್‌ ರೋಣ’ನ ಬೃಹತ್‌ ಕಟೌಟ್ಸ್‌ ರಾರಾಜಿಸುತ್ತಿದ್ದು, ಇಂದಿನಿಂದ ಕಿಚ್ಚನ ಅಭಿಮಾನಿಗಳಿಗೆ “ವಿಕ್ರಾಂತ್‌ ರೋಣ’ನ ದರ್ಶನವಾಗಲಿದೆ.

3ಡಿ ಮತ್ತು 2ಡಿ ಎರಡರಲ್ಲೂ ರಿಲೀಸ್‌

“ವಿಕ್ರಾಂತ್‌ ರೋಣ’  ಸಸ್ಪೆನ್ಸ್‌-ಥ್ರಿಲ್ಲರ್‌, ಫ್ಯಾಂಟಸಿ ಸಿನಿಮಾವಾಗಿದ್ದು ಸಿನಿಮಾದ ತಾಂತ್ರಿಕ ಕಾರ್ಯಗಳು ಸಿನಿಮಾದ ದೊಡ್ಡ ಹೈಲೈಟ್ಸ್‌. ಸಿನಿಮಾದ ಕಲರಿಂಗ್‌, ಸೌಂಡ್‌ ಡಿಸೈನ್ಸ್‌, ವಿಎಫ್ ಎಕ್ಸ್‌ನಂತಹ ಕಾರ್ಯಗಳಿಗೆ ಚಿತ್ರ ಸಾಕಷ್ಟು ಸಮಯ ತೆಗೆದುಕೊಂಡಿದೆ. ಇನ್ನು “ವಿಕ್ರಾಂತ್‌ ರೋಣ’ 3ಡಿ ಮತ್ತು 2ಡಿ ಎರಡೂ ವರ್ಶನ್‌ನಲ್ಲೂ ರೆಡಿಯಾಗಿದ್ದು, ಲಭ್ಯವಿರುವ ಚಿತ್ರಮಂದಿರಗಳಲ್ಲಿ 3ಡಿ, ಉಳಿದೆಡೆ 2ಡಿಯಲ್ಲಿ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

1-adasasd

ಬಿಜಾಪುರ್: ಇಬ್ಬರು ಮಹಿಳಾ ನಕ್ಸಲರು ಸೇರಿ ನಾಲ್ವರ ಎನ್ ಕೌಂಟರ್

tdy-20

ಮೋದಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ: ಡಾ.ಸುಬ್ರಮಣಿಯನ್ ಸ್ವಾಮಿ

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

web exclusive vada pavu suhan

ಕೆಲಸ ಕಳೆದುಕೊಂಡು ತಲೆ ಮೇಲೆ ಕೈಯಿಟ್ಟುಕೊಂಡಿದ್ದವರು ʼವಡಾ ಪಾವ್‌ʼ ಮಾರಿ ಕೋಟ್ಯಧಿಪತಿಯಾದರು

Karnataka enters quarter final of the vijay hazare trophy 2022

ವಿಜಯ್ ಹಜಾರೆ: ಜಾರ್ಖಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

dr-sudhakar

ಆಯುಷ್ಮಾನ್ ಭಾರತ್ ನೋಂದಣಿಯಲ್ಲಿ ಕರ್ನಾಟಕ ನಂ.1: ಡಾ.ಕೆ.ಸುಧಾಕರ್

d-Y-chandrachood

ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಸವಾಲು: ಸಿಜೆಐಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyamani starer 56 movie ready to release

ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’

not-out

ಅಜಯ್ ಪೃಥ್ವಿ ನಟನೆಯ ‘ನಾಟ್ಔಟ್’ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್

1-wassadsd

ಕಾಂತಾರದ ‘ವರಾಹ ರೂಪಂ’ವಿರುದ್ಧದ ನಿಷೇಧ ತೆಗೆದುಹಾಕಿದ ಕೋರ್ಟ್

trailer of Vidhi 370 released

ಟ್ರೇಲರ್‌ನಲ್ಲಿ ‘ವಿಧಿ 370’:  ಡಿಸೆಂಬರ್‌ನಲ್ಲಿ ತೆರೆಗೆ

aditi prabhudeva

ವರ್ಷಪೂರ್ತಿ ‘ಅದಿತಿ’ ಮಿಂಚು: ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಲ್ಲಿ ಮದುಮಗಳು

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

1-adasasd

ಬಿಜಾಪುರ್: ಇಬ್ಬರು ಮಹಿಳಾ ನಕ್ಸಲರು ಸೇರಿ ನಾಲ್ವರ ಎನ್ ಕೌಂಟರ್

tdy-20

ಮೋದಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ: ಡಾ.ಸುಬ್ರಮಣಿಯನ್ ಸ್ವಾಮಿ

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

web exclusive vada pavu suhan

ಕೆಲಸ ಕಳೆದುಕೊಂಡು ತಲೆ ಮೇಲೆ ಕೈಯಿಟ್ಟುಕೊಂಡಿದ್ದವರು ʼವಡಾ ಪಾವ್‌ʼ ಮಾರಿ ಕೋಟ್ಯಧಿಪತಿಯಾದರು

Karnataka enters quarter final of the vijay hazare trophy 2022

ವಿಜಯ್ ಹಜಾರೆ: ಜಾರ್ಖಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.