ಎಸ್ಆರ್ಕೆ ಬ್ಯಾನರ್ನಿಂದ ವೆಬ್ಸೀರಿಸ್ ಶುರು
Team Udayavani, Jun 3, 2018, 11:51 AM IST
ಶಿವರಾಜಕುಮಾರ್ ಅವರು ಎಸ್ಆರ್ಕೆ ಬ್ಯಾನರ್ ಶುರು ಮಾಡಿರುವುದು ಎಲ್ಲರಿಗೂ ಗೊತ್ತು. ಆ ಬ್ಯಾನರ್ ಮೂಲಕ ಕಿರುತೆರೆಯಲ್ಲಿ ಈಗಾಗಲೇ “ಮಾನಸ ಸರೋವರ’ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವುದೂ ಗೊತ್ತು. ಇನ್ನು, ಈ ಹಿಂದೆ ತಮ್ಮ ಬ್ಯಾನರ್ ಮೂಲಕ ವೆಬ್ಸೀರಿಸ್ ನಿರ್ಮಾಣಕ್ಕೂ ಮುಂದಾಗುವುದಾಗಿ ಹೇಳಿದ್ದರು. ಈಗ ಹೊಸ ಸುದ್ದಿ ಅಂದರೆ, ಅದಕ್ಕೀಗ ಜೋರು ತಯಾರಿ ನಡೆದಿದೆ.
ಹೌದು, ಶಿವರಾಜಕುಮಾರ್ ಅವರು ತಮ್ಮ ಎಸ್ಆರ್ಕೆ ಬ್ಯಾನರ್ ಮೂಲಕ ಇದೇ ಮೊದಲ ಬಾರಿಗೆ ವೆಬ್ಸೀರಿಸ್ ನಿರ್ಮಾಣಕ್ಕೆ ಅಣಿಯಾಗಿದ್ದು, ವಿದೇಶದಲ್ಲಿ ಚಿತ್ರೀಕರಣ ಮಾಡುವ ಖುಷಿಯಲ್ಲಿದ್ದಾರೆ. ಅದರಂತೆ ಅವರು, ಜುಲೈನಲ್ಲಿ ವಿಯೇಟ್ನಾಂನಲ್ಲಿ ಚಿತ್ರೀಕರಣ ನಡೆಸುತ್ತಿರುವುದು ವಿಶೇಷ. ಈ ಹಿಂದೆ ಆರ್.ಜೆ. ಪ್ರದೀಪ್ ಅವರು ತಮ್ಮ ಸಖತ್ ಸ್ಟುಡಿಯೋ ಬ್ಯಾನರ್ ಮೂಲಕ “ಲೂಸ್ ಕನೆಕ್ಷನ್’ ವೆಬ್ಸೀರಿಸ್ ನಿರ್ಮಿಸಿದ್ದರು.
ಆ “ಲೂಸ್ ಕನೆಕ್ಷನ್’ ಸಂಚಿಕೆ ವೀಕ್ಷಿಸಿದ್ದ ಶಿವರಾಜಕುಮಾರ್, ಈಗ ತಮ್ಮ ಎಸ್ಆರ್ಕೆ ಬ್ಯಾನರ್ನಲ್ಲಿ ವೆಬ್ಸೀರಿಸ್ ಮಾಡುತ್ತಿದ್ದಾರೆ. ಅಂದಹಾಗೆ, “ಲೂಸ್ ಕನೆಕ್ಷನ್’ ತಂಡವನ್ನೇ ಇಟ್ಟುಕೊಂಡು ಹೊಸ ರೀತಿಯ ವೆಬ್ಸೀರಿಸ್ ಪ್ಲಾನ್ ಮಾಡುತ್ತಿದ್ದಾರೆ ಶಿವರಾಜಕುಮಾರ್. ಈ ವೆಬ್ಸೀರಿಸ್ ನಿರ್ಮಾಣದ ಜವಾಬ್ದಾರಿಯನ್ನು ಶಿವರಾಜಕುಮಾರ್ ಅವರ ಎರಡನೇ ಪುತ್ರಿ ನಿವೇದಿತಾ ಶಿವರಾಜಕುಮಾರ್ ಅವರು ವಹಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಕಥೆ ಸಿದ್ದಗೊಂಡಿದ್ದು, ಕಲಾವಿದರು ಸಹ ಆಯ್ಕೆಯಾಗಿದ್ದಾರೆ. ನಿವೇದಿತಾ ಶಿವರಾಜಕುಮಾರ್ ಅವರು ಧಾರಾವಾಹಿ ನಿರ್ಮಾಣದಲ್ಲಿ ಅನುಭವ ಪಡೆದಿರುವುದರಿಂದ ವೆಬ್ಸೀರಿಸ್ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಅವರಿಗೆ ತುಂಬಾ ಇಷ್ಟವಾಗಿರುವ ಹಿನ್ನೆಲೆಯಲ್ಲಿ ವೆಬ್ಸೀರಿಸ್ ಶುರುಮಾಡಲಾಗುತ್ತಿದೆ ಎಂಬುದು ಶಿವರಾಜಕುಮಾರ್ ಅವರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…