ಆ “ಸತ್ಯ ಹರಿಶ್ಚಂದ್ರ’ ಎಲ್ಲಿ, ಈ “ಸತ್ಯ ಹರಿಶ್ಚಂದ್ರ’ ಎಲ್ಲಿ?

Team Udayavani, Nov 8, 2017, 4:40 PM IST

Sa.ra_.-Govind.jpg

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ! ಅವರ ಅಸಮಾಧಾನಕ್ಕೆ ಕಾರಣ, ಕನ್ನಡ ಚಿತ್ರಗಳಿಗೆ ಹಳೆಯ ಮತ್ತು ಜನಪ್ರಿಯ ಹೆಸರುಗಳನ್ನು ಪುನಃ ಇಡುತ್ತಿರುವುದು. ಈ ಕುರಿತು ಅವರು “ಜನ ಗಣ ಮನ’ ಚಿತ್ರದ ಆಡಿಯೋ ಸಿಡಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಮರುಶೀರ್ಷಿಕೆ ಕುರಿತು ಮಾತನಾಡಿದರು.

ಅದಕ್ಕೆ ಕಾರಣವಾಗಿದ್ದು, ಶರಣ್‌  ಅಭಿನಯದ “ಸತ್ಯ ಹರಿಶ್ಚಂದ್ರ’. ಈ ಶೀರ್ಷಿಕೆ ಕುರಿತಂತೆ ಸಾ.ರಾ.ಗೋವಿಂದು ಮಾತನಾಡಿದರು. “ವರನಟ ಡಾ.ರಾಜ್‌ಕುಮಾರ್‌ ಅಭಿನಯದ “ಸತ್ಯ ಹರಿಶ್ಚಂದ್ರ’ ದಾಖಲೆ ಬರೆದ ಚಿತ್ರ. ಅಂತಹ ಅದ್ಭುತ ಚಿತ್ರದ ಶೀರ್ಷಿಕೆಯನ್ನೇ ಪುನಃ ಶರಣ್‌ ಅಭಿನಯದ ಚಿತ್ರಕ್ಕೆ “ಸತ್ಯಹರಿಶ್ಚಂದ್ರ’ ಅಂತ ಮರುಬಳಕೆ ಮಾಡಿದ್ದು ಎಲ್ಲರಿಗೂ ಗೊತ್ತು.

ಆರಂಭದಲ್ಲಿ “ಸತ್ಯ ಹರಿಶ್ಚಂದ್ರ’ ಶೀರ್ಷಿಕೆ ಇಟ್ಟು ಚಿತ್ರ ಮಾಡುತ್ತಿರುವ ಬಗ್ಗೆ ಸುದ್ದಿ ಹೊರ ಬರುತ್ತಿದ್ದಂತೆಯೇ ರಾಜ್‌ಕುಮಾರ್‌ ಅಭಿಮಾನಿಗಳು, ಸಂಘದ ಪದಾಧಿಕಾರಿಗಳು, ಆ ಶೀರ್ಷಿಕೆ ಕೊಡಬೇಡಿ ಅಂತ ಆಕ್ಷೇಪಿಸಿದ್ದರು. ಒಂದು ಸಂದೇಶವುಳ್ಳ, ಮೌಲ್ಯ ಇರುವಂತಹ ರಾಜ್‌ಕುಮಾರ್‌ ಅವರ “ಸತ್ಯಹರಿಶ್ಚಂದ್ರ’ ಚಿತ್ರದ ಶೀರ್ಷಿಕೆಯನ್ನು, ಕೇವಲ ಒಂದು ಕಾಮಿಡಿ ಕಥೆಗೆ ಇಟ್ಟು ಅವಮಾನಿಸಬೇಡಿ ಎಂದು ಮನವಿ ಮಾಡಿದ್ದರು.

ಆದರೆ, ಅದೇ ಶೀರ್ಷಿಕೆಯಡಿ ಆ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ನೋಡಿದ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.ಇನ್ನು ಮುಂದೆ ಅಣ್ಣಾವ್ರ ಸಿನಿಮಾಗಳ ಶೀರ್ಷಿಕೆ ಮರುಬಳಸುವ ಮುನ್ನ ಗಂಭೀರವಾಗಿ ಯೋಚಿಸಬೇಕು ಎಂಬ ಮನವಿಯನ್ನು ಇಟ್ಟಿದ್ದಾರೆ’ ಎಂದರು ಸಾ.ರಾ. ಗೋವಿಂದು. “ಡಾ ರಾಜ್‌ಕುಮಾರ್‌ ಅಭಿನಯಿಸಿದ ಆ “ಸತ್ಯ ಹರಿಶ್ಚಂದ್ರ’ ಎಲ್ಲಿ, ಈ “ಸತ್ಯ ಹರಿಶ್ಚಂದ್ರ’ ಎಲ್ಲಿ? ದೊಡ್ಡ ಯಶಸ್ಸು ಪಡೆದ ಚಿತ್ರದ ಶೀರ್ಷಿಕೆ ಬಳಸಿ, ನಿರೀಕ್ಷೆ ಹುಸಿಗೊಳಿಸುವ ಮೂಲಕ ಅಭಿಮಾನಿಗಳ ಕೋಪಕ್ಕೆ ಚಿತ್ರತಂಡ ಗುರಿಯಾಗಿದೆ.

ಇನ್ನು ಮುಂದೆ ಅಣ್ಣಾವ್ರು ಅಭಿನಯಿಸಿದ “ಬಬ್ರುವಾಹನ’, “ಮಯೂರ’, “ಭಕ್ತ ಕುಂಬಾರ’ ಸೇರಿದಂತೆ ಇತರೆ ಮೌಲ್ಯವುಳ್ಳ ಚಿತ್ರಗಳ ಶೀರ್ಷಿಕೆ ಮರುಬಳಕೆ ಮಾಡಲು ಬಿಡದಿರಲು ಮಂಡಳಿ ನಿರ್ಧರಿಸಲಿದೆ. ಅಲ್ಲದೆ, ಸೂಕ್ತ, ಕಥೆ, ನಟ, ನಿರ್ದೇಶಕ ಮತ್ತು ಒಳ್ಳೆಯ ತಂಡವಿದ್ದರೆ ಮಾತ್ರ, ಆ ಶೀರ್ಷಿಕೆಗೆ ಅವರು ಅರ್ಹರೋ ಇಲ್ಲವೋ ಎಂಬುದನ್ನು ಅರಿತು, ಆ ಬಳಿಕ ಮಂಡಳಿ ಗಂಭೀರವಾಗಿ ಶೀರ್ಷಿಕೆಗೆ ಅನುಮತಿ ಕೊಡಬೇಕೋ ಬೇಡವೋ ಎಂದು ಪರಿಗಣಿಸಲಿದೆ’ ಎನ್ನುತ್ತಾರೆ ಸಾ.ರಾ.ಗೋವಿಂದು.

ಟಾಪ್ ನ್ಯೂಸ್

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.