ಯಶ್‌ ಜಗತ್ತು ಆಳೋ ಹುಡುಗಿ ಇವಳು …

ಮಗಳ ಫೋಟೋ ರಿವೀಲ್‌ ಮಾಡಿದ ಯಶ್‌

Team Udayavani, May 8, 2019, 3:00 AM IST

ಯಶ್‌ ಮಗಳು ಹೇಗಿದ್ದಾಳೆ, ರಾಧಿಕಾ ತರಹ ಇರಬಹುದೋ ಅಥವಾ ಯಶ್‌ ತರಹನೋ … ಯಶ್‌ಗೆ ಮಗಳು ಹುಟ್ಟಿದ ದಿನದಿಂದಲೂ ಅಭಿಮಾನಿಗಳಲ್ಲಿ ಇಂತಹದ್ದೊಂದು ಕುತೂಹಲ ಇದ್ದೇ ಇತ್ತು. ಅಭಿಮಾನಿಗಳಂತೂ ಮಗಳ ಫೋಟೋ ತೋರಿಸುವಂತೆ ಯಶ್‌ ಅವರನ್ನು ಕೇಳಿಕೊಳ್ಳುತ್ತಲೇ ಇದ್ದರು.

ಅದಕ್ಕೆ ಯಶ್‌, “ಸಮಯ ಬಂದಾಗ ನಾನೇ ತೋರಿಸುತ್ತೇನೆ’ ಎನ್ನುತ್ತಲೇ ಬಂದಿದ್ದರು. ಈಗ ಆ ಸಮಯ ಬಂದಿದೆ. ಮಂಗಳವಾರ ಅಕ್ಷಯ ತೃತೀಯ ದಿನ ಯಶ್‌ ತಮ್ಮ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ.

“ನನ್ನ ಜಗತ್ತನ್ನು ಆಳೋ ಹುಡುಗಿ ಇವಳು ನಿಮ್ಮ ಮುಂದೆ … ಆಕೆಗೆ ಇನ್ನು ಹೆಸರಿಟ್ಟಿಲ್ಲ. ಹಾಗಾಗಿ ಬೇಬಿ “ವೈಆರ್‌’ ಎಂದು ಕರೆಯೋಣ … ನಿಮ್ಮ ಪ್ರೀತಿ, ಆರೈಕೆ ಆಕೆಯ ಮೇಲೂ ಇರಲಿ…’ ಎಂದು ಟ್ವೀಟ್‌ ಮಾಡಿದ್ದಾರೆ.

ಯಶ್‌ ತಮ್ಮ ಮಗಳ ಫೋಟೋ ಅಪ್‌ಲೋಡ್‌ ಮಾಡುತ್ತಿದ್ದಂತೆ ಅಭಿಮಾನಿಗಳು ಖುಷಿಯಿಂದ ರೀಟ್ವೀಟ್‌, ಶೇರ್‌ ಮಾಡುತ್ತಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ. “ಕೆಜಿಎಫ್’ ಯಶಸ್ಸಿನ ಬಳಿಕ ಸ್ವಲ್ಪ ದಿನ ಬಿಡುವಿನಲ್ಲಿದ್ದ ಯಶ್‌ ಈಗ “ಕೆಜಿಎಫ್ ಚಾಪ್ಟರ್‌-2’ಗೆ ರೆಡಿಯಾಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ