ಯೋಗರಾಜ್ ಭಟ್ಟರ ಕೈಯಲ್ಲಿ ಗಿರಿಕಥೆ ಹಾಡು
Team Udayavani, May 24, 2022, 4:22 PM IST
ರಿಷಭ್ ಶೆಟ್ಟಿ ನಾಯಕ ನಟನಾಗಿ ನಟಿಸಿರುವ “ಹರಿಕಥೆ ಅಲ್ಲ ಗಿರಿ ಕಥೆ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಬಿಡುಗಡೆಯ ಅಂಗವಾಗಿ ಚಿತ್ರತಂಡ ಹಾಡೊಂದನ್ನು ರಿಲೀಸ್ ಮಾಡಿದೆ.
ನಿರ್ದೇಶಕ ಯೋಗರಾಜ್ ಭಟ್ ಅವರು “ಹರಿ ಕಥೆ ಅಲ್ಲ ಗಿರಿಕಥೆ’ ಚಿತ್ರದ ಜೂ ಮೊನಾಲಿಸಾ ಹಾಡನ್ನು ಅನಾವರಣಗೊಳಿಸಿದರು. ತ್ರಿಲೋಕ್ ತ್ರಿವಿಕ್ರಮ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.
ಈ ಚಿತ್ರವನ್ನು ಸಂದೇಶ್ ನಿರ್ಮಿಸಿದ್ದಾರೆ. ಸಹಾಯಕ ನಿರ್ದೇಶಕರ ಬಗ್ಗೆ ಸುಂದರ ಕ್ಷಣಗಳನ್ನು ಮೆಲಕು ಹಾಕಿಕೊಂಡ ಯೋಗರಾಜ್ ಭಟ್ ಅವರು, ಆ ಕುರಿತು ಕಥೆಯೊಂದನ್ನು ಹೇಳಿದರು. ತಾವು ಕೂಡ ಈ ಚಿತ್ರಕ್ಕೆ ಹಾಡು ಬರೆದಿದ್ದು, ಜೊತೆಗೆ ನಿರ್ದೇಶಕನ ಪಾತ್ರವನ್ನು ಸಹ ಮಾಡಿರುವುದಾಗಿ ಹೇಳಿದರು. ಬಿಡುಗಡೆಯಾಗಿರುವ ಈ ಹಾಡು ಚೆನ್ನಾಗಿದೆ. ಒಳ್ಳೆಯದಾಗಲಿ ಎಂದು ಯೋಗರಾಜ್ ಭಟ್ ಹಾರೈಸಿದರು