ಯುವರತ್ನನ “ಊರಿಗೊಬ್ಬ ರಾಜ..” ಡ್ಯಾನ್ಸ್‌ ನಂಬರ್‌ಗೆ ಮೆಚ್ಚುಗೆ


Team Udayavani, Feb 28, 2021, 8:32 AM IST

ಯುವರತ್ನನ “ಊರಿಗೊಬ್ಬ ರಾಜ..” ಡ್ಯಾನ್ಸ್‌ ನಂಬರ್‌ಗೆ ಮೆಚ್ಚುಗೆ

ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿರುವ “ಯುವರತ್ನ’ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. “ಊರಿಗೊಬ್ಬ ರಾಜ…’ ಎಂಬ ಡ್ಯಾನ್ಸ್‌ ನಂಬರ್‌ ಹಾಡಿಗೆ ಪುನೀತ್‌ ರಾಜಕುಮಾರ್‌, ನಾಯಕಿ ಸಯೇಷಾ ಸೈಗಲ್‌ ಭರ್ಜರಿಯಾಗಿ ಸ್ಟೆಪ್ಸ್‌ ಹಾಕಿದ್ದಾರೆ. ಜಾನಿ ಮಾಸ್ಟರ್‌ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿನ ಸ್ಟೆಪ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಪವರ್‌ಸ್ಟಾರ್ ಫ್ಯಾನ್ಸ್‌ ಗಮನ ಸೆಳೆಯುತ್ತಿದೆ. ಇನ್ನು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಸಾಹಿತ್ಯ ರಚಿಸಿರುವ ಈ ಹಾಡಿಗೆ ಎಸ್‌. ಎಸ್‌ ತಮನ್‌ ಸಂಗೀತ ಸಂಯೋಜಿಸಿದ್ದು, ಪುನೀತ್‌ ರಾಜಕುಮಾರ್‌ ಮತ್ತು ರಮ್ಯಾ ಬೆಹರಾ ಧ್ವನಿಯಾಗಿದ್ದಾರೆ.

ಈ ಹಾಡು ಕನ್ನಡದ ಜೊತೆಗೆ ತೆಲುಗಿನಲ್ಲೂ ತೆರೆ ಕಂಡಿದೆ. ತೆಲುಗು ಅವತರಣಿಕೆಯಲ್ಲಿ ಈ ಹಾಡಿಗೆ ಗಾಯಕಿ ರಮ್ಯಾ ಬೆಹರಾ ಜೊತೆ ದಿನಕರ್‌ ಧ್ವನಿ ಗೂಡಿಸಿದ್ದಾರೆ. ಉಳಿದಂತೆ ಕನ್ನಡದ ಜೊತೆ ತೆಲುಗಿನಲ್ಲೂ “ಯುವರತ್ನ’ನನ್ನು ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಸದ್ಯಕ್ಕೆ ಎರಡೂ ಭಾಷೆಗಳಲ್ಲೂ ಜೋರಾಗಿ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದೆ. ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌, ಸಯೇಷಾ ಅವರೊಂದಿಗೆ ಸೋನು ಗೌಡ, ರಾಧಿಕಾ ಶರತ್‌ ಕುಮಾರ್‌, ಕಾವ್ಯಾ ಶೆಟ್ಟಿ, ಧನಂಜಯ್, ಪ್ರಕಾಶ್‌ ರೈ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಹಟ್ಟಿ ಗೋಲ್ಡ್‌ ಮೈನ್ಸ್‌ನಿಂದ ಇನ್ನು ಆಭರಣ: ವಾರ್ಷಿಕ 5000 ಕೆ.ಜಿ. ಬಂಗಾರ ಉತ್ಪಾದನೆ ಯೋಜನೆ

ಈಗಾಗಲೇ ಕರ್ನಾಟಕದ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಸಿರುವ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಜೇಮ್ಸ್‌’ ಚಿತ್ರತಂಡ, ಬಾಕಿ ಉಳಿದ ಚಿತ್ರೀಕರಣಕ್ಕಾಗಿ ಕಾಶ್ಮೀರದತ್ತ ಮುಖ ಮಾಡಿದೆ. ಕೊರೆಯುವ ಚಳಿಯ ನಡುವೆಯೂ, ಕಳೆದ ಕೆಲ ದಿನಗಳಿಂದ ಕಾಶ್ಮೀರದಲ್ಲೇ ಬೀಡು ಬಿಟ್ಟಿರುವ “ಜೇಮ್ಸ್‌’ ಚಿತ್ರತಂಡ, ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ನಿರತವಾಗಿದೆ.

ಇದರ ನಡುವೆಯೇ “ಜೇಮ್ಸ್‌’ ಚಿತ್ರತಂಡ ಚಿತ್ರೀಕರಣದ ಕೆಲವು ಫೋಟೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. “ಜೇಮ್ಸ್’ ಚಿತ್ರೀಕರಣ ನಡುವೆ ಚಿತ್ರದ ನಾಯಕ ನಟ ಪುನೀತ್‌ ರಾಜಕುಮಾರ್‌, ಕಾಶ್ಮೀರದ ಜನರನ್ನು ಮಾತನಾಡಿಸುತ್ತಿರುವ ಫೋಟೋಗಳು, ಪುಟ್ಟ ಮಗುವಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಜೋರಾಗಿ ಹರಿದಾಡುತ್ತಿತ್ತು.

ಪುನೀತ್‌ ರಾಜಕುಮಾರ್‌ ಅವರೊಂದಿಗೆ ನಟ ರಂಗಾಯಣ ರಘು, ನಿರ್ದೇಶಕ ಚೇತನ್‌ ಕೂಡ ಫೋಟೋಗೆ ಭರ್ಜರಿಯಾಗಿ ಪೋಸ್‌ ಕೊಟ್ಟಿದ್ದರು. ಇದರ ನಡುವೆಯೇ ಇದೀಗ ಪುನೀತ್‌ ರಾಜಕುಮಾರ್‌ ಆರ್ಮಿ ಆಫೀಸರ್‌ ಲುಕ್‌ನಲ್ಲಿರುವ ಮತ್ತಷ್ಟು ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. “ಜೇಮ್ಸ್‌’ ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ ಆರ್ಮಿ ಆಫೀಸರ್‌ ಗೆಟಪ್‌ನಲ್ಲಿ ಏನಾದರೂ ಕಾಣಿಸಿಕೊಳ್ಳಲಿದ್ದಾರಾ? ಅನ್ನೋ ಗುಟ್ಟನ್ನು ಮಾತ್ರ ಸದ್ಯಕ್ಕೆ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಅಂದಹಾಗೆ, ಸದ್ಯ ಕಾಶ್ಮೀರದ ಸುಂದರ ಪರಿಸರದಲ್ಲಿ ನಡೆಯುತ್ತಿರುವ “ಜೇಮ್ಸ್‌’ ಚಿತ್ರದ ಚಿತ್ರೀಕರಣದಲ್ಲಿ ಚಿತ್ರದಲ್ಲಿ ಬರುವ ಹಾಡು ಮತ್ತು ಆ್ಯಕ್ಷನ್‌ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ ಎನ್ನಲಾಗಿದೆ. “ಜೇಮ್ಸ್‌’ ಹಾಡಿಗೆ ಎ. ಹರ್ಷ ನೃತ್ಯ ಸಂಯೋಜನೆ ಮಾಡಿದರೆ, ಆ್ಯಕ್ಷನ್‌ ದೃಶ್ಯಗಳಿಗೆ ವಿಜಯ್‌ ಸಾಹಸ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್‌ ಜೋಡಿಯಾಗಿದ್ದಾರೆ.

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.