ಶಾರುಖ್ ಖಾನ್ ಪಾರ್ಟಿಗಳಲ್ಲಿ ಡ್ರಗ್ಸ್ ಇರುತ್ತಿತ್ತು : ನಟಿ ಶೆರ್ಲಿನ್ ಚೋಪ್ರಾ
Team Udayavani, Oct 7, 2021, 3:31 PM IST
ಮುಂಬೈ: ಡ್ರಗ್ಸ್ ಸೇವನೆ ಆರೋಪದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವಾಗಿರುವ ಬೆನ್ನಲ್ಲೆ ನಟಿ ಶರ್ಲಿನ್ ಚೋಪ್ರಾ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಇದೀಗ ಮುನ್ನೆಲೆಗೆ ಬಂದಿದೆ. ಮಾಧ್ಯಮವೊಂದಕ್ಕಡ ನೀಡಿದ ಸಂದರ್ಶನದಲ್ಲಿ “ಬಾಲಿವುಡ್ ಡ್ರಗ್ಸ್ ಪಾರ್ಟಿ” ಬಗ್ಗೆ ಶೆರ್ಲಿನ್ ಬಾಯಿ ಬಿಟ್ಟಿದ್ದಾರೆ.
ಅಕ್ಟೋಬರ್ 2 ರಂದು ಶಾರುಖ್ ಖಾನ್ ಪುತ್ರನ ಬಂಧನವಾಗಿದೆ. ಅದಾದ ಎರಡು ದಿನಗಳ ಬಳಿಕ ಶೆರ್ಲಿನ್ ತಮ್ಮ ಸಂದರ್ಶನದ ವಿಡಿಯೋ ಹಂಚಿಕೊಂಡಿದ್ದಾರೆ.
ಶೆರ್ಲಿನ್ ಹೇಳಿದ್ದೇನು ?
ಶಾರುಖ್ ಖಾನ್ ಪುತ್ರ ಆರ್ಯನ್ ಬಂಧನದ ಬಳಿಕ ಹಳೆ ಸಂದರ್ಶನದ ವಿಡಿಯೊವನ್ನು ಶೆರ್ಲಿನ್ ಚೋಪ್ರಾ ಮತ್ತೆ ಶೇರ್ ಮಾಡಿದ್ದಾರೆ. ಅದರಲ್ಲಿ ಐಪಿಎಲ್‌ನ ಕೆಕೆಆರ್ ಪಾರ್ಟಿಯಲ್ಲಿ ನಾನು ಡ್ಯಾನ್ಸ್ ಮಾಡುತ್ತಿದ್ದೆ. ಪಾರ್ಟಿಯ ಮಧ್ಯದಲ್ಲಿ ಶೌಚಾಲಯಕ್ಕೆ ಹೋದಾಗ ಅಲ್ಲಿ ಬಾಲಿವುಡ್‌ನ ಸ್ಟಾರ್ ನಟರ ಪತ್ನಿಯರು ಕೊಕೇನ್ ಸೇವಿಸಿ ಮತ್ತಿನಲ್ಲಿದ್ದರು. ಅವರನ್ನು ನೋಡಿ ನನಗೆ ಶಾಕ್ ಆಯಿತು.
शाहरुख़ की KKR वाली पार्टी के बारे में, मैं ने ये इंटरव्यू पिछले साल दिया था..https://t.co/WMNTfeyy7A pic.twitter.com/5JTV3dNncz
— Sherlyn Chopra 🇮🇳 (@SherlynChopra) October 4, 2021
ಶಾರುಖ್ ಅವರ ಪ್ರತಿ ಪಾರ್ಟಿಯಲ್ಲಿ ನಶೆ ಇರುತ್ತಿತ್ತು. ನಾನು ನಿಧಾನವಾಗಿ ಕೆಕೆಆರ್ ಪಾರ್ಟಿಗಳಿಂದ ದೂರವಾದೆ. ಬಾಲಿವುಡ್‌ನಲ್ಲಿ ಇಂತಹ ಪಾರ್ಟಿಗಳು ಇರುತ್ತವೆ ಎಂಬುದು ನನಗೆ ಆಗ ಅರ್ಥವಾಯಿತು ಎಂದು ಶೆರ್ಲಿನ್ ಹೇಳಿದ್ದಾರೆ.
ಕಳೆದ ವರ್ಷ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಪ್ರಕರಣದಿಂದ ಬಾಲಿವುಡ್ ಜೊತೆ ಡ್ರಗ್ಸ್ ನಶೆಯ ನಂಟು ಅಂಟಿಕೊಂಡಿದ್ದು, ಇದುವರೆಗೆ ಸಾಕಷ್ಟು ಪೆಡ್ಲರ್ ಹಾಗೂ ಕೆಲವು ಸೆಲೆಬ್ರಿಟಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅಕ್ಟೋಬರ್ 2 ರಂದು ಮುಂಬೈನ ಐಷಾರಾಮಿ ಶಿಪ್‍ವೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಶಾರುಖ್ ಪುತ್ರ ಆರ್ಯನ್ ಖಾನ್ ಕೂಡ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ
ಹಿಂದಿ ಕಿಚ್ಚಿಗೆ ಅರ್ಜುನ್ ರಾಮ್ಪಾಲ್ ತುಪ್ಪ
ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ