ಸಲ್ಮಾನ್‌ ಖಾನ್‌ ‘ಟೈಗರ್‌ ಜಿಂದಾ ಹೈ’ಬಿಡುಗಡೆಗೆ ಬೆದರಿಕೆ


Team Udayavani, Dec 21, 2017, 3:57 PM IST

544.jpg

ಮುಂಬಯಿ: ಬಾಲಿವುಡ್‌ನ‌ ಸೂಪರ್‌ಸ್ಟಾರ್‌  ಸಲ್ಮಾನ್‌ ಖಾನ್‌  ನಾಯಕ ನಟರಾಗಿ  ಅಭಿನಯಿಸಿರುವ  ಯಶ್‌ ರಾಜ್‌ ಫಿಲಂಸ್‌  ಅವರ “ಟೈಗರ್‌ ಜಿಂದಾ ಹೈ’ಸಿನೆಮಾ ಇದೇ  ಶುಕ್ರವಾರದಂದು  ಬಿಡುಗಡೆಯಾಗಲಿದ್ದು  ಸಾಮಾನ್ಯ ಥಿಯೇಟರ್‌ಗಳಲ್ಲಿ  ಈ  ಚಿತ್ರದ  ಪ್ರದರ್ಶನಕ್ಕೆ  ತಡೆಯೊಡ್ಡುವ  ಬೆದರಿಕೆಯನ್ನು  ಮಹಾರಾಷ್ಟ್ರ  ನವ ನಿರ್ಮಾಣ ಸೇನೆ  ಒಡ್ಡಿದೆ.  

ಡಿ.22ರ ಶುಕ್ರವಾರದಂದು  ಮರಾಠಿ ನಟ ಅಂಕುಶ್‌ ಚೌಧರಿ ಅಭಿನಯದ  ಸಿನೆಮಾ “ದೇವಾ’ ತೆರೆಗೆ  ಅಪ್ಪಳಿಸಲಿದ್ದು  ಥಿಯೇಟರ್‌ಗಳಲ್ಲಿ  ಪ್ರೈಮ್‌  ಟೈಮ್‌ನಲ್ಲಿ  ಈ  ಚಿತ್ರದ  ಪ್ರದರ್ಶನಕ್ಕೆ  ಅವಕಾಶ ನೀಡದೇ  ಹೋದಲ್ಲಿ  ಸಲ್ಮಾನ್‌  ಅಭಿನಯದ  ಸಿನೆಮಾದ  ಪ್ರದರ್ಶನಕ್ಕೆ  ತಡೆಯೊಡ್ಡುವುದಾಗಿ  ಎಂಎನ್‌ಎಸ್‌ನ  ಸಿನೇಮಾ ಘಟಕದ  ಮುಖ್ಯಸ್ಥರಾದ  ಅಮೇಯ ಖೋಪ್ಕರ್‌ ಅವರು ಸಿನೆಮಾ ಪ್ರದರ್ಶಕರಿಗೆ ಬರೆದಿರುವ ಪತ್ರದಲ್ಲಿ  ಎಚ್ಚರಿಕೆ ನೀಡಿದ್ದಾರೆ. 

ಮರಾಠಿ  ಚಲನಚಿತ್ರ “ದೇವಾ’ದ  ಪ್ರದರ್ಶನಕ್ಕೆ  ಸಲ್ಮಾನ್‌ ಅಭಿನಯದ  “ಟೈಗರ್‌ ಜಿಂದಾ ಹೈ’ ಸಿನೆಮಾ ಅಡ್ಡಿಯುಂಟು ಮಾಡಿದ್ದೇ ಆದಲ್ಲಿ  ಈ ಸಿನೆಮಾದ ಪ್ರದರ್ಶನಕ್ಕೆ  ಅವಕಾಶ  ನೀಡಲಾಗದು. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ  ಸಲ್ಮಾನ್‌  ಖಾನ್‌ ಅಭಿನಯದ  ಚಿತ್ರದ  ಪ್ರದರ್ಶನಕ್ಕೆ  ಎಂಎನ್‌ಎಸ್‌  ಕಾರ್ಯಕರ್ತರು  ಯಾವುದೇ  ಅಡ್ಡಿ ಉಂಟು ಮಾಡಲಾರರು ಎಂದವರು  ತಮ್ಮ  ಪತ್ರದಲ್ಲಿ  ಸ್ಪಷ್ಟಪಡಿಸಿದ್ದಾರೆ. 

ಇನ್ನೊಂದು  ಮರಾಠಿ ಸಿನೇಮಾವಾದ  “ಗಚ್ಚಿ’ಯ ಬಿಡುಗಡೆ ಕೂಡಾ  ಥಿಯೇಟರ್‌ಗಳ  ಅಭಾವದ  ಕಾರಣದಿಂದಾಗಿ  ಮುಂದೂಡಲ್ಪಟ್ಟಿದೆ. ಯಶ್‌ ರಾಜ್‌  ಫಿಲಂಸ್‌ ನಗರದಲ್ಲಿ  ಎಲ್ಲ  ಸಿನೇಮಾ ಹಾಲ್‌ಗ‌ಳನ್ನು  ಮುಂಗಡವಾಗಿ  ಕಾದಿರಿಸಿರುವುದರಿಂದ  “ದೇವಾ’ ಸಿನೆಮಾವನ್ನು  ಪ್ರದರ್ಶಿಸಲು  ಯಾವೊಂದೂ  ಥಿಯೇಟರ್‌ಗಳೂ  ಮುಂದೆ  ಬರುತ್ತಿಲ್ಲ. ಮರಾಠಿ  ಭಾಷೆಯ  ಉಳಿವಿಗಾಗಿ  ಪಕ್ಷ ಹೋರಾಟ ನಡೆಸುತ್ತಾ ಬಂದಿದೆ.  ಮರಾಠಿ  ಚಿತ್ರ ನಿರ್ಮಾಪಕರೊಂದಿಗೆ  ಸಮನ್ವಯತೆಯಿಂದ  ಕಾರ್ಯನಿರ್ವಹಿಸುವಂತೆ  ಖೋಪ್ಕರ್‌ ತಮ್ಮ ಪತ್ರದಲ್ಲಿ  ಸಿನೆಮಾ ಪ್ರದರ್ಶಕರಿಗೆ  ಮನವಿ ಮಾಡಿಕೊಂಡಿದ್ದಾರೆ.  ಒಂದು  ವೇಳೆ ಈ  ಮನವಿಯನ್ನು ಧಿಕ್ಕರಿಸಿದ್ದೇ ಆದಲ್ಲಿ  ಎಂಎನ್‌ಎಸ್‌  ತನ್ನದೇ  ಆದ  ಭಾಷೆಯಲ್ಲಿ  ಪ್ರತ್ಯುತ್ತರ ನೀಡಬೇಕಾದೀತು ಎಂದವರು  ಇದೇ ವೇಳೆ  ಎಚ್ಚರಿಕೆ  ನೀಡಿದ್ದಾರೆ. 

ಸಚಿವ ತಾಬ್ಡೆಗೂ  ಪತ್ರ
ಇದೇ  ವಿಚಾರವಾಗಿ ಅಮೇಯ ಖೋಪ್ಕರ್‌ ಅವರು ರಾಜ್ಯದ  ಸಂಸ್ಕೃತಿ ಸಚಿವ ವಿನೋದ್‌ ತಾಬ್ಡೆ ಅವರಿಗೂ  ಪತ್ರವೊಂದನ್ನು ಬರೆದಿದ್ದು ರಾಜ್ಯ ಸರಕಾರ ಮರಾಠಿ ಸಿನೆಮಾ ನಿರ್ಮಾಪಕರ  ಸಂಕಷ್ಟಕ್ಕೆ  ಸ್ಪಂದಿಸಬೇಕು ಎಂದು  ಆಗ್ರಹಿಸಿದ್ದಾರೆ. ಒಂದು ವೇಳೆ ಸರಕಾರ  ಯಾವುದೇ  ಕ್ರಮ ಕೈಗೊಳ್ಳದೇ ಹೋದಲ್ಲಿ  ಎಂಎನ್‌ಎಸ್‌ “ಟೈಗರ್‌ ಜಿಂದಾ ಹೈ’ ಚಿತ್ರದ ನಿರ್ಮಾಪಕರ ವಿರುದ್ಧ ತನ್ನದೇ ಶೈಲಿಯಲ್ಲಿ  ಪ್ರತಿಭಟನೆ ನಡೆಸಲಿದೆ ಎಂದವರು  ಎಚ್ಚರಿಕೆ  ನೀಡಿದ್ದಾರೆ. 

ಥಿಯೇಟರ್‌ಗಳಲ್ಲಿ ಪ್ರೈಮ್‌ ಟೈಮ್‌ನಲ್ಲಿ  ಮರಾಠಿ ಸಿನೆಮಾದ  ಪ್ರದರ್ಶನಕ್ಕೆ  ಸಂಬಂಧಿಸಿದಂತೆ  ಸರಕಾರ  ಈಗಾಗಲೇ  ನಿಯಮಾವಳಿಯನ್ನು  ರೂಪಿಸಿದ್ದು ಈ ನಿಯಾಮವಳಿಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು  ಸರಕಾರದ  ಜವಾಬ್ದಾರಿಯಾಗಿದೆ ಎಂದು ಎಂಎನ್‌ಎಸ್‌ನ  ನಾಯಕರೋರ್ವರು  ತಿಳಿಸಿದರು. 

ವರ್ಷದ  ಕೊನೆಯಲ್ಲಿ  ಸಲ್ಮಾನ್‌ ಅಭಿನಯದ ಸಿನೆಮಾ ಬಿಡುಗಡೆಗೊಳ್ಳುತ್ತಿರುವುದು  ಥಿಯೇಟರ್‌ಗಳ  ಮಾಲಕರಲ್ಲಿ  ಹೊಸ  ಆಶಾವಾದವನ್ನು ಮೂಡಿಸಿದೆ. ಸಲ್ಮಾನ್‌ ಅಭಿನಯದ ಸಿನೆಮಾ ಬಿಡುಗಡೆಯಾದ  ಮೊದಲ ಮೂರು ದಿನಗಳ  ಅವಧಿಯಲ್ಲಿ  ಥಿಯೇಟರ್‌ಗಳಲ್ಲಿ  ಗರಿಷ್ಠ  ಆದಾಯ ಸಂಗ್ರಹವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ  ಸಲ್ಮಾನ್‌ ಅಭಿನಯದ  ಸಿನೆಮಾವನ್ನು  ಪ್ರದರ್ಶಿಸಲು  ಅವಕಾಶ ನೀಡದಿರುವ ಎಂಎನ್‌ಎಸ್‌ನ ಬೆದರಿಕೆ  ಸರಿಯಲ್ಲ.  ಅಲ್ಲದೆ  ಕಳೆದ  2-3ತಿಂಗಳುಗಳಿಂದೀಚೆಗೆ ಯಾವೊಂದೂ  ಚಲನಚಿತ್ರವೂ ಥಿಯೇಟರ್‌ಗಳಿಗೆ ಉತ್ತಮ ಆದಾಯವನ್ನು ತಂದುಕೊಟ್ಟಿಲ್ಲ.  

ಬಲುನಿರೀಕ್ಷಿತ “ಪದ್ಮಾವತಿ’ ಸಿನೇಮಾ  ಡಿ.1ರಂದು  ಬಿಡುಗಡೆಗೊಳ್ಳುವ  ನಿರೀಕ್ಷೆ  ಇತ್ತಾದರೂ  ಸಿನೆಮಾ ವಿವಾದದಲ್ಲಿ  ಸಿಲುಕಿದ  ಪರಿಣಾಮ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ಸಲ್ಮಾನ್‌ ಖಾನ್‌ ಅಭಿನಯದ  ಸಿನೆಮಾ ಪ್ರದರ್ಶನಕ್ಕೆ  ತಡೆಯೊಡ್ಡುವ ಎಂಎನ್‌ಎಸ್‌ ಬೆದರಿಕೆ ಥಿಯೇಟರ್‌ಗಳ  ಮಟ್ಟಿಗೆ  ಆತಂಕಕಾರಿ  ಬೆಳವಣಿಗೆಯಾಗಿದೆ.  “ಟೈಗರ್‌ ಜಿಂದಾ ಹೈ’ ಸಿನೆಮಾವನ್ನು ಪ್ರದರ್ಶಿಸಿದಲ್ಲಿ  ಹಿಂಸಾಚಾರ  ನಡೆಸುವ  ಎಂಎನ್‌ಎಸ್‌ ಬೆದರಿಕೆ  ಕುರಿತಂತೆ  ಪೊಲೀಸರು  ಮತ್ತು ರಾಜ್ಯ ಸರಕಾರ  ಸೂಕ್ತ  ನಿರ್ಧಾರವನ್ನು  ಕೈಗೊಳ್ಳಲಿದೆ ಎಂದು  ಮುಂಬಯಿ ಉಪನಗರದ ಥಿಯೇಟರ್‌  ಒಂದರ ಮೆನೇಜರ್‌ ಓರ್ವರು ಹೇಳಿದರು. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.