24 ಗಂಟೆಯೊಳಗೆ21 ಮಿಲಿಯನ್ ವೀಕ್ಷಣೆ ಪಡೆದ ಅಕ್ಷಯ್ ಕುಮಾರ್ “ಲಕ್ಷ್ಮೀ ಬಾಂಬ್” ಮೋಷನ್ ಪಿಚ್ಚರ್
Team Udayavani, Sep 18, 2020, 3:21 PM IST
ಮುಂಬಯಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ “ಲಕ್ಷ್ಮೀ ಬಾಂಬ್” ಚಿತ್ರದ ಮೋಷನ್ ಪಿಚ್ಚರ್ ಗುರುವಾರ ಬಿಡಗಡೆಯಾಗಿದ್ದು, ಇದೀಗ 24 ಗಂಟೆಯೊಳಗೆ ಅತೀ ಹೆಚ್ಚು ವೀಕ್ಷಿಲ್ಪಟ್ಟ ಮೋಷನ್ ಪಿಚ್ಚರ್ ಎನ್ನುವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಚಿತ್ರ ತಂಡ 30 ಸೆಕೆಂಡ್ ಗಳನ್ನೊಂಡ ಮೋಷನ್ ಪಿಚ್ಚರ್ ನಲ್ಲಿ ಹಿನ್ನಲೆ ಸಂಗೀತದೊಟ್ಟಿಗೆ ಮುಖ್ಯ ಪಾತ್ರಧಾರಿಯಾಗಿರುವ ಲಕ್ಷ್ಮಣ್ ಲಕ್ಷ್ಮೀಯಾಗಿ ಬದಲಾಗುವ ಡೈಲಾಗ್ ನೊಂದಿಗೆ ಅಕ್ಷಯ್ ಕುಮಾರ್ ಮಂಗಳ ಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮೋಷನ್ ಪಿಚ್ಚರ್ ನಲ್ಲಿ ತೋರಿಸಲಾಗಿದೆ. ಈ ಸಣ್ಣ ಮೋಷನ್ ಪಿಚ್ಚರ್ ಝಲಕ್ ಇದೀಗ ಹೆಚ್ಚು ವೀಕ್ಷಣೆಯನ್ನು ಪಡೆದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಅಕ್ಷಯ್ ಹಿಂದೆಂದು ಕಾಣಿಸಿಕೊಳ್ಳದ ಮಂಗಳಮುಖಿಯ ಪಾತ್ರಧಾರಿಯಾಗಿ ಕಾಣಸಿಕೊಳ್ಳಲಿದ್ದಾರೆ. ಚಿತ್ರದ ಮೋಷನ್ ಪಿಚ್ಚರ್ ಹಾಗೂ ಹಿನ್ನಲೆ ಸಂಗೀತ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು, ಯೂಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ 24 ಗಂಟೆಯೊಳಗೆ 21 ಮಿಲಿಯನ್ ಜನ ವೀಕ್ಷಿಸಿದ್ದು ಇದು ಮೋಷನ್ ಪಿಚ್ಚರ್ ಯೊಂದಕ್ಕೆ ಸಿಕ್ಕ ಅತ್ಯಧಿಕ ವೀಕ್ಷಣೆ ಆಗಿದೆ.
ಲಕ್ಷ್ಮೀ ಬಾಂಬ್ ಚಿತ್ರವನ್ನುರಾಘವ ಲಾರೆನ್ಸ್ ನಿರ್ದೇಶನ ಮಾಡಿದ್ದು,ಅಕ್ಷಯ್ ಕುಮಾರ್ ಜೊತೆ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಿದ್ದಾರೆ. ಚಿತ್ರ ಇದೇ ಬರುವ ನವೆಂಬರ್ 9 ರಂದು ದೀಪಾವಳಿ ಹಬ್ಬದಂದು ಡಿಸ್ನಿ+ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಕೇಪ್ ಆಫ್ ಗುಡ್ ಫಿಲ್ಮ್ಸ್, ತುಷಾರ್ ಎಂಟೇಟ್ಮೆಂಟ್ ಹೌಸ್,ಶಬಿನಾ ಎಂಟೇಟ್ಮೆಂಟ್ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ
ಹಿಂದಿ ಕಿಚ್ಚಿಗೆ ಅರ್ಜುನ್ ರಾಮ್ಪಾಲ್ ತುಪ್ಪ
ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ