ಸುಶಾಂತ್ ಪ್ರಕರಣ; ಇ.ಡಿ. ಅಧಿಕಾರಿಗಳಿಂದ 2ನೇ ಬಾರಿ ಗೆಳೆಯ ಸಿದ್ದಾರ್ಥ್ ಪಿಥಾನಿ ವಿಚಾರಣೆ
ಸುಶಾಂತ್ ಸಿಂಗ್ ಜತೆಗಿನ ಸಂಪರ್ಕ ಹಾಗೂ ಸಾಲದ ಹಣದ ಪಾವತಿ ಹೇಗೆ ನಡೆಯುತ್ತಿತ್ತು
Team Udayavani, Aug 12, 2020, 3:25 PM IST
ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಶಾಂತ್ ಗೆಳೆಯ, ರೂಂಮೇಟ್ ಸಿದ್ಧಾರ್ಥ್ ಪಿಥಾನಿಯನ್ನು 2ನೇ ಬಾರಿ ವಿಚಾರಣೆಗೊಳಪಡಿಸಿರುವುದಾಗಿ ವರದಿ ತಿಳಿಸಿದೆ.
ಸಿದ್ದಾರ್ಥ್ ಜಾರಿ ನಿರ್ದೇಶನಾಲಯ ಕಚೇರಿಗೆ ಮಧ್ಯಾಹ್ನಕ್ಕೂ ಮೊದಲೇ ಆಗಮಿಸಿದ್ದು 2ಗಂಟೆವರೆಗೂ ತೀವ್ರ ವಿಚಾರಣೆ ನಡೆಸಿರುವುದಾಗಿ ವರದಿ ವಿವರಿಸಿದೆ. ಸಿದ್ಧಾರ್ಥ್ ಗೆ ಸಂಬಂಧಪಟ್ಟ ಬ್ಯಾಂಕ್ ಸ್ಟೇಟ್ ಮೆಂಟ್ ಮತ್ತು ಆದಾಯ ತೆರಿಗೆ ದಾಖಲೆಯನ್ನು ನೀಡುವಂತೆ ಇ.ಡಿ.ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಸುಶಾಂತ್ ಸಿಂಗ್ ಜತೆಗಿನ ಸಂಪರ್ಕ ಹಾಗೂ ಸಾಲದ ಹಣದ ಪಾವತಿ ಹೇಗೆ ನಡೆಯುತ್ತಿತ್ತು ಎಂಬ ಬಗ್ಗೆ ಮಾಹಿತಿ ನೀಡುವಂತೆ ಇ.ಡಿ.ಅಧಿಕಾರಿಗಳು ಸಿದ್ಧಾರ್ಥ್ ಗೆ ಸೂಚಿಸಿದ್ದಾರೆ. ಸುಶಾಂತ್ ಪ್ರಕರಣದಲ್ಲಿ ಈವರೆಗೆ ಸಿದ್ದಾರ್ಥ್ ಪಿಥಾನಿ ಸೇರಿದಂತೆ ಎಂಟು ಮಂದಿಯ ವಿಚಾರಣೆ ನಡೆಸಲಾಗಿದೆ.
ಏತನ್ಮಧ್ಯೆ ಸುಶಾಂತ್ ಸಹೋದರಿ ಮೀಟು ಸಿಂಗ್ ಕೂಡಾ ಮೊದಲೇ ಬಾರಿಗೆ ಹೇಳಿಕೆಯನ್ನು ನೀಡಿರುವುದಾಗಿ ವರದಿ ಹೇಳಿದೆ. ನಟಿ ರಿಯಾ ಚಕ್ರವರ್ತಿ, ಆಕೆಯ ತಂದೆ ಇಂದ್ರಜಿತ್, ಸಹೋದರ ಶೋವಿಕ್, ರಿಯಾ ಚಾರ್ಟರ್ಡ್ ಅಕೌಂಟೆಂಟ್ ರಿತೇಶ್ ಶಾ ಹಾಗೂ ಆಕೆಯ ಮಾಜಿ ಮ್ಯಾನೇಜರ್ ಶ್ರುತಿ ಮೋದಿಯನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಸುಶಾಂತ್ ಸಿಎ ಸಂದೀಪ್ ಶ್ರೀಧರ್, ಮನೆಯ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ತಮ್ಮ ಹೇಳಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?