ಕಾಂತಾರ ಹೊಸ ದಾಖಲೆ ; ಹಿಂದಿ ಗಳಿಕೆ ಎಷ್ಟು ಗೊತ್ತೇ ?
Team Udayavani, Nov 9, 2022, 5:35 PM IST
ನವದೆಹಲಿ: ಹೊಂಬಾಳೆ ಫಿಲಂಸ್ ನ ‘ಕಾಂತಾರ’ದ ಮಾಂತ್ರಿಕತೆ ದೇಶದ ಮೂಲೆ ಮೂಲೆಗಳಲ್ಲಿ ನಿರಂತರವಾಗಿ ಸದ್ದು ಮಾಡುತ್ತಿದೆ. ಮೊದಲು ಕನ್ನಡದಲ್ಲಿ ನಂತರ ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಚಿತ್ರ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ. ಇದಲ್ಲದೆ, ಅಕ್ಟೋಬರ್ 14 ರಂದು ಹಿಂದಿಯಲ್ಲಿ ಬಿಡುಗಡೆಯಾದಾಗಿನಿಂದ ಮಾರುಕಟ್ಟೆಯಲ್ಲಿ ಕಾಂತರದ ಗಳಿಕೆಯ ಹೊಸ ಇತಿಹಾಸ ಸೃಷ್ಟಿಸುತ್ತಿದೆ.
ನವೆಂಬರ್ 08ರ ಮಂಗಳವಾರದವರೆಗೆ ಹಿಂದಿಯಲ್ಲಿ ಕಾಂತಾರ ಒಟ್ಟು 66.95 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಚಿತ್ರವು ಅಕ್ಟೋಬರ್ 31ರ ಸೋಮವಾರದಂದು ಮತ್ತು ನವೆಂಬರ್ 1 ರಂದು 2.3 ಕೋಟಿ ಗಳಿಕೆಯೊಂದಿಗೆ ಸ್ಥಿರತೆ ಕಾಪಾಡಿಕೊಂಡಿತ್ತು. ನವೆಂಬರ್ 03ರ ಗುರುವಾರ 2.05 ಕೋಟಿ ಮತ್ತು ನವೆಂಬರ್ 04ರ ಶುಕ್ರವಾರ 2.05 ಕೋಟಿ, ನವೆಂಬರ್ 05ರ ಶನಿವಾರದಂದು 4.5 ಕೋಟಿ ಗಳಿಕೆಯೊಂದಿಗೆ ಅತಿ ಕಡಿಮೆ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿತ್ತು.
ನವೆಂಬರ್ 07ರ ಸೋಮವಾರದಂದು 2.6ಕೋಟಿ ರೂಪಾಯಿ ಮತ್ತೆ ಏರಿಕೆ ಕಂಡಿತು. ಈ ಅಸಾಧಾರಣ ಗಳಿಕೆ ದಾಖಲಿಸುವುದರ ಹೊರತಾಗಿ, ಐಎಂಡಿಬಿ ರೇಟಿಂಗ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ‘ಕಾಂತಾರ’ ನಂ. 1 ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು