ಗಲ್ಲಾ ಪೆಟ್ಟಿಗೆಯಲ್ಲಿ ಬಾಲಿವುಡ್ ನ “ಮಿಷನ್ ಮಂಗಲ್” ಭರ್ಜರಿ ಸದ್ದು; ಪ್ರೇಕ್ಷಕ ಫಿದಾ

Team Udayavani, Aug 17, 2019, 3:52 PM IST

 

ಮುಂಬೈ:ಈ ವರ್ಷದ ಬಹುನಿರೀಕ್ಷಿತ ಜಗನ್ ಶಕ್ತಿ ನಿರ್ದೇಶನದ ಮಿಷನ್ ಮಂಗಲ್ ಹಿಂದಿ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಿದ್ದು, ಬಾಕ್ಸಾಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾದ ದಿನ 29 ಕೋಟಿ ರೂಪಾಯಿ ಗಳಿಕೆ ಕಂಡಿದ್ದು, ಎರಡು ದಿನಗಳಲ್ಲಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದಾಗಿ ಬಿಟೌನ್ ವರದಿ ತಿಳಿಸಿದೆ.

“ಮಿಷನ್ ಮಂಗಲ್” ಸಿನಿಮಾದಲ್ಲಿ ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಎಚ್.ಜಿ.ದತ್ತಾತ್ರೇಯ, ನಿತ್ಯಾ ಮೆನನ್, ಸೋನಾಕ್ಷಿ ಸಿನ್ನಾ, ತಾಪ್ಸಿ ಪನ್ನು, ಶರ್ಮನ್ ಜೋಸಿ, ಕೀರ್ತಿ ಕುಲ್ಹಾರಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಸಿನಿಮಾ ಹಾಗೂ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್, ಮಿಷನ್ ಮಂಗಲ್ ಸಿನಿಮಾದ ಎರಡು ದಿನದ ಗಳಿಕೆ ಕುರಿತು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮಲ್ಟಿಪ್ಲೆಕ್ಸ್ ನಲ್ಲಿ ಮಿಷನ್ ಮಂಗಲ್ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 3 ಮತ್ತು ನಾಲ್ಕನೇ ದಿನಗಳಲ್ಲಿ ಚಿತ್ರ 85 ಕೋಟಿ ಗಳಿಸುವ ನಿರೀಕ್ಷೆ ಇದೆ. ಗುರುವಾರ ಮತ್ತು ಶುಕ್ರವಾರ ಸಿನಿಮಾ ಒಟ್ಟು 46.44 ಕೋಟಿ ಗಳಿಕೆ ಕಂಡಿರುವುದಾಗಿ ಆದರ್ಶ್ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ