
ವರುಣ್ ಧವನ್ ಅಭಿನಯದ ‘ಭೇಡಿಯಾ’ ಮೊದಲ ದಿನ ಗಳಿಸಿದ್ದೆಷ್ಟು?
ಹುಣ್ಣಿಮೆಯ ರಾತ್ರಿ ತೋಳವಾಗಿ ರೂಪಾಂತರಗೊಳ್ಳುವ ಹಾರರ್ ಕಥಾ ಹಂದರ...!
Team Udayavani, Nov 26, 2022, 3:41 PM IST

ಮುಂಬಯಿ : ವರುಣ್ ಧವನ್ ಅಭಿನಯದ ಹಿಂದಿ ಚಿತ್ರ ‘ಭೇಡಿಯಾ’ ತನ್ನ ಮೊದಲ ದಿನದಂದು ವಿಶ್ವದಾದ್ಯಂತ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 12 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದುನಿರ್ಮಾಪಕರು ಶನಿವಾರ ತಿಳಿಸಿದ್ದಾರೆ.
“ಸ್ತ್ರೀ” ಖ್ಯಾತಿಯ ಅಮರ್ ಕೌಶಿಕ್ ನಿರ್ದೇಶನದ ಹಾರರ್ ಕಾಮಿಡಿ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.ಪತ್ರಿಕಾ ಟಿಪ್ಪಣಿಯಲ್ಲಿ, ಪ್ರೊಡಕ್ಷನ್ ಬ್ಯಾನರ್‌ಗಳಾದ ಜಿಯೋ ಸ್ಟುಡಿಯೋಸ್ ಮತ್ತು ಮ್ಯಾಡಾಕ್ ಫಿಲ್ಮ್ಸ್ ಚಿತ್ರದ ಮೊದಲ ದಿನದ ಗಳಿಕೆಯನ್ನು ಹಂಚಿಕೊಂಡಿವೆ.
“ಭೇಡಿಯಾ ಮೊದಲ ದಿನವಾದ ಶುಕ್ರವಾರ ವಿಶ್ವಾದ್ಯಂತ 12.06 ಕೋಟಿ ರೂ.ಗಳ ಒಟ್ಟು ಬಾಕ್ಸ್ ಆಫೀಸ್ ಗಳಿಕೆ ಕಂಡಿದೆ. ಶುಕ್ರವಾರ ಸಂಜೆಯ ಹೊತ್ತಿಗೆ ಚಲನಚಿತ್ರವು ಗಣನೀಯ ಪ್ರತಿಕ್ರಿಯೆ ಪಡೆದಿದೆ, ಶನಿವಾರದ ಬೆಳಗಿನ ಪ್ರದರ್ಶನಗಳೊಂದಿಗೆ ಅದ್ಭುತವಾದ ಮೇಲ್ಮುಖ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದೆ, ಸಕಾರಾತ್ಮಕ ವಿಮರ್ಶೆಗಳು ಮತ್ತು ಬಾಯಿಯ ಮಾತಿನ ನಡುವೆ ಶುಕ್ರವಾರ ಬೆಳಗ್ಗೆ ಸರಾಸರಿ 45 ಪ್ರತಿಶತದಷ್ಟು ಬೆಳವಣಿಗೆಯನ್ನು ತೋರಿಸಿದೆ”ಎಂದು ತಂಡ ಹೇಳಿಕೊಂಡಿದೆ.
“ಭೇಡಿಯಾ” ಭಾಸ್ಕರ್ (ವರುಣ್)ಗೆ ಪೌರಾಣಿಕ ಕಥೆಯ ತೋಳವೊಂದು ಕಚ್ಚಿದ ನಂತರ ಪ್ರತಿ ಹುಣ್ಣಿಮೆಯ ರಾತ್ರಿ ತೋಳವಾಗಿ ರೂಪಾಂತರಗೊಳ್ಳುವ ಹಾರರ್ ಕಥಾ ಹಂದರ ಹೊಂದಿದೆ.
ಕೃತಿ ಸನೋನ್, ದೀಪಕ್ ಡೊಬ್ರಿಯಾಲ್ ಮತ್ತು ಅಭಿಷೇಕ್ ಬ್ಯಾನರ್ಜಿ ಸಹ ಚಿತ್ರದಲ್ಲಿ ನಟಿಸಿದ್ದಾರೆ, ದಿನೇಶ್ ವಿಜನ್ ನಿರ್ಮಿಸಿದ್ದಾರೆ. ಇದನ್ನು ಜಿಯೋ ಸ್ಟುಡಿಯೋಸ್ ಮತ್ತು ವಿಜಾನ್ಸ್ ಮ್ಯಾಡಾಕ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆಲ್ಫಿ ತೆಗೆಯಲು ಪ್ರಯತ್ನಿಸಿದ ಅಭಿಮಾನಿಯ ಮೊಬೈಲ್ ಫೋನ್ ಎಸೆದ ರಣಬೀರ್ ಕಪೂರ್ ವಿಡಿಯೋ ವೈರಲ್!

ತೆಲುಗು ಸಿನಿಮಾರಂಗದ ಜನಪ್ರಿಯ ಡಬ್ಬಿಂಗ್ ಕಲಾವಿದ ಶ್ರೀನಿವಾಸ ಮೂರ್ತಿ ಹೃದಯಾಘಾತದಿಂದ ನಿಧನ

ʼಪಠಾಣ್ʼ ಮೋಡಿ: 32 ವರ್ಷದ ಬಳಿಕ ಹೌಸ್ ಫುಲ್ ಆದ ಕಾಶ್ಮೀರದ ಥಿಯೇಟರ್

ಬಹುಭಾಷಾ ಹಿರಿಯ ನಟಿ ಜಮುನಾ ನಿಧನ

ಆಲ್ ಟೈಮ್ ರೆಕಾರ್ಡ್: ಮೊದಲ ದಿನ ಗಳಿಸಿದ್ದೆಷ್ಟು ಕಿಂಗ್ ಖಾನ್ ʼಪಠಾಣ್ʼ ಸಿನಿಮಾ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
