ಗೋವಾ ಚಿತ್ರೋತ್ಸವ: ಓಟಿಟಿ ಸಿನಿಮಾ ಮಂದಿರಗಳನ್ನು ಕೊಲ್ಲುತ್ತದೆಯೇ? ಒಂದು ಚರ್ಚೆ


Team Udayavani, Jan 21, 2021, 10:34 AM IST

ಗೋವಾ ಚಿತ್ರೋತ್ಸವ: ಓಟಿಟಿ ಸಿನಿಮಾ ಮಂದಿರಗಳನ್ನು ಕೊಲ್ಲುತ್ತದೆಯೇ? ಒಂದು ಚರ್ಚೆ

ಪಣಜಿ: ಈ ಚಿತ್ರೋತ್ಸವವಷ್ಟೇ ಅಲ್ಲ; ಕೋವಿಡ್‌ 19 ಹಿನ್ನೆಲೆಯಲ್ಲಿ ಚಲನಚಿತ್ರ ವೀಕ್ಷಣೆ ಹಾಗೂ ಬಿಡುಗಡೆಗೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ಆಗುತ್ತಿರುವುದು ಓಟಿಟಿ ಫ್ಲಾಟ್‌ಫಾರಂಗಳು. ಅವುಗಳು ನಮ್ಮ ಸಿನಿಮಾ ಮಂದಿರಗಳನ್ನು ಕೊಲ್ಲುತ್ತವೆಯೇ? ಸಿನಿಮಾ ಮಂದಿರದ ಸಾಮೂಹಿಕ ವೀಕ್ಷಣೆಯ ಪದ್ಧತಿಗೆ ಕೊನೆಯ ಮೊಳೆ ಹೊಡೆಯತ್ತದೆಯೇ? ಸಿನಿಮಾ ಒಂದು ಸಾಮೂಹಿಕ ಮಾಧ್ಯಮ ಎಂಬ ಅಭಿದಾನ ಅಥವಾ ರೂಪವನ್ನು ಬದಲಿಸುತ್ತದೆಯೇ? ಇತ್ಯಾದಿ ಪ್ರಶ್ನೆಗಳು.

ಅದಕ್ಕೆ ಹೌದು ಎಂಬ ಉತ್ತರವೂ ಇದೆ, ಇಲ್ಲ ಎಂಬ ಉತ್ತರವೂ ಇದೆ. ಈ ಬಾರಿಯ ಗೋವಾ ಚಿತ್ರೋತ್ಸವದ ವರ್ಚುಯಲ್‌ ಸಂವಾದದಲ್ಲಿ ಮಲಯಾಳಂನ ಚಿತ್ರ ನಿರ್ಮಾಪಕ ಹಾಗೂ ವಿತರಕ ಜಿ. ಪಿ. ವಿಜಯಕುಮಾರ್‌ ಸಹ ಇದೆ ಅಥವಾ ಇಲ್ಲ ಎಂಬ ನೆಲೆಗೆ ವಾಲಿಕೊಂಡರು.

ಓಟಿಟಿ ಫ್ಲಾಟ್‌ಫಾರಂಗಳು ಬಂದಾಗ ಬಹಳ ವಿರೋಧ ವ್ಯಕ್ತವಾಯಿತು. ಇದಕ್ಕೆ ಕಾರಣವೆಂದರೆ, ಇವು ಸಿನಿಮಾ ಮಂದಿರದಲ್ಲಿ ಚಿತ್ರ ಬಿಡುಗಡೆಯಾಗುವ ಕ್ರಮವನ್ನಷ್ಟೇ ಅಲ್ಲ; ಚಿತ್ರೋದ್ಯಮವನ್ನೇ ಮುಚ್ಚಿ ಬಿಡುತ್ತದೆ ಎಂಬುದಾಗಿತ್ತು. ಆದರೆ ಹಾಗೆ ಕಾಣುತ್ತಿಲ್ಲ. ಒಟಿಟಿ ಮಧ್ಯೆಯೂ ಸಾಂಪ್ರದಾಯಿಕ ರೀತಿಯ ಚಿತ್ರೋದ್ಯಮ, ಸಿನಿಮಾ ಮಂದಿರಗಳು ಹಾಗೂ ಖ್ಯಾತ ನಟರ ಚಿತ್ರಗಳ ಅದ್ದೂರಿ ಬಿಡುಗಡೆ ಮುಂದುವರಿಯುತ್ತದೆ ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ:ಭಜರಂಗಿ-2, ಸಲಗ.. ಸ್ಟಾರ್‌ ಸಿನಿಮಾಗಳ ರಿಲೀಸ್‌ಗೆ ಕೊನೆಗೂ ಡೇಟ್‌ ಫಿಕ್ಸ್

ಈಗ ಸಿನಿಮೋದ್ಯಮ ಕೊಂಚ ಲಾಭದಾಯಕ ಎನಿಸುತ್ತಿದೆ. ಅದಕ್ಕೆ ಒಟಿಟಿ ಯೂ ಕಾರಣವಾಗುತ್ತಿರಬಹುದು. ಒಟಿಟಿಯ ಕಡೆ ವೀಕ್ಷಕರು ವಾಲುತ್ತಿರುವುದು ನಿಜ. ಸುಮಾರು ಶೇ. 20 ರಷ್ಟು ವೀಕ್ಷಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ ಓಟಿಟಿ ಸಹ ಅದ್ದೂರಿ ಬಜೆಟ್‌ನ ಚಿತ್ರಗಳಿಗೆ ಕೈ ಹಾಕುತ್ತಿಲ್ಲ; ಬದಲಾಗಿ ಸಾಧಾರಣ ಹಾಗೂ ಸಣ್ಣ ಬಜೆಟ್‌ ನ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಇದರ ಮಧ್ಯೆಯೂ ಚಿತ್ರೋದ್ಯಮದ ಸೃಜನಶೀಲ ಮಂದಿ ತಮ್ಮ ಚಿತ್ರಗಳ ಬಿಡುಗಡೆ ಸಿನಿಮಾ ಮಂದಿರಗಳಲ್ಲೇ ಆಗಬೇಕೆಂದು ನಿರೀಕ್ಷಿಸುತ್ತಿರುವ ಬೆಳವಣಿಗೆಯನ್ನೂ ನಾವು ಗಮನಿಸಬೇಕು ಎನ್ನುತ್ತಾರೆ ವಿಜಯಕುಮಾರ್‌.

ಓಟಿಟಿ ಇದ್ದೇ ಇರುತ್ತದೆ. ಕೋವಿಡ್‌ 19 ನ ಅನ್ವೇಷಣೆಯ ಭಾಗವಾಗಿ ಬಂದ ಓಟಿಟಿ ಸಿನಿಮಾಗಳನ್ನು ಆಸಕ್ತರಿಗೆ ತಲುಪಿಸುವ ಪ್ರಮುಖ ಮಾಧ್ಯಮವಾಗಿ ಬಳಕೆಯಾಯಿತು. ಜತೆಗೆ ನಿರ್ಮಾಪಕರಿಗೆ ಒಂದಿಷ್ಟು ಆದಾಯ ತಂದುಕೊಡುವ ಸಾಧನವಾಗಿಯೂ ಮಾರ್ಪಟ್ಟಿತು. ಇದೇ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಹಾಗೂ ಪ್ರಚಾರದ ವೆಚ್ಚ ಸಾಕಷ್ಟು ಏರಿದೆ. ತೊಂಬತ್ತರ ದಶಕದಲ್ಲಿ ಉಪಗ್ರಹ ಮಾರುಕಟ್ಟೆ ಬಂದಾಗ ಚಿತ್ರ ನಿರ್ಮಾಣದ ವೆಚ್ಚವೇ ಹೆಚ್ಚಾಗಿತ್ತು. ಹಾಗೆಯೇ ಮಲ್ಟಿಫ್ಲೆಕ್ಸ್‌ ಗಳು ಹೆಚ್ಚಾದಾಗ ಬೇರೆ ತೆರನಾದ ವೆಚ್ಚ ಬರತೊಡಗಿತು. ಒಟ್ಟೂ 2010 ರ ಸಂದರ್ಭದಲ್ಲಿ ಚಿತ್ರೋದ್ಯಮ ಸಂಕಷ್ಟದಲ್ಲಿತ್ತು ಎಂಬುದು ಅವರ ಅನಿಸಿಕೆ.

ವೀಕ್ಷಕರ ಅಭಿರುಚಿಯೂ ಬದಲು

ಸಿನಿಮಾ ವೀಕ್ಷಕರ ಅಥವಾ ಪ್ರಿಯರ ಅಭಿರುಚಿಯಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಅವರು ತಮಗಿಷ್ಟವಾಗುವ ಚಿತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ; ಬಿಡುಗಡೆಯಾಗಿದೆ ಎಂದ ಮಾತ್ರಕ್ಕೆ ಎಲ್ಲವನ್ನೂ ಬಂದು ನೋಡುವ ಅಭ್ಯಾಸವನ್ನು ಕೈ ಬಿಡುತ್ತಿದ್ದಾರೆ. ಜತೆಗೆ ವೆಬ್‌ ಸರಣಿಗಳತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ ಯುವಜನರು ಈ ಹಿಂದಿನಂತೆ ಟಿವಿ ಎದುರು ಕುಳಿತು ನೋಡುವ ಕ್ರಮವನ್ನು ಬಿಟ್ಟು, ತಮಗಿಷ್ಟವಾದುದನ್ನು ಆ್ಯಪ್‌ ಗಳ ಮೂಲಕ ವೀಕ್ಷಿಸುತ್ತಿದ್ದಾರೆ ಎಂದರಲ್ಲದೇ, ತಾಂತ್ರಿಕ ಅಥವಾ ಗುಣಮಟ್ಟದ ಕೊರತೆ ಚಿತ್ರೋದ್ಯಮದಲ್ಲಿಲ್ಲ. ಹಾಗಾಗಿ ವೃತ್ತಿಪರತೆಯೊಂದೇ ಚಿತ್ರೋದ್ಯಮವನ್ನು ಉಳಿಸಬಲ್ಲದು. ಇದು ಚಿತ್ರೋದ್ಯಮವೊಂದೇ ಅಲ್ಲ; ಎಲ್ಲ ಉದ್ಯಮಗಳ ಅನಿವಾರ್ಯತೆ ಸಹ ಎಂದು ಹೇಳಿದರು ವಿಜಯಕುಮಾರ್‌.

ಇದನ್ನೂ ಓದಿ: ಜನರ ಆಕ್ರೋಶಕ್ಕೆ ಮಣಿದ ‘ತಾಂಡವ್’ ತಂಡ: ವಿವಾದಿತ ದೃಶ್ಯಕ್ಕೆ ಕತ್ತರಿ ಪ್ರಯೋಗ

ನಿಜ, ಕೋವಿಡ್‌ 19 ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣದತ್ತ ನಿರ್ಮಾಪಕರು ಮುಂದಾಗುತ್ತಿಲ್ಲ. ಆದರೆ ಹೆಚ್ಚೆಚ್ಚು ನಿರ್ಮಾಪಕರು ಅತ್ಯುತ್ತಮ ಚಿತ್ರಗಳನ್ನು ಮಾಡಬೇಕು. ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಬಾರದು. ಪ್ರಸಿದ್ಧಿ ಮತ್ತು ಹಣಕ್ಕಾಗಿ ಮಾತ್ರ ಸಿನಿಮಾ ನಿರ್ಮಿಸುವುದನ್ನು ಕೈ ಬಿಡುವುದು ಒಳಿತು. ಒಳ್ಳೆಯ ಚಿತ್ರಕಥೆ, ತಾಂತ್ರಿಕ ಸಹಕಾರ ಹಾಗೂ ವಾಣಿಜ್ಯ ನೆಲೆಗಳನ್ನು ಗಟ್ಟಿ ಮಾಡಿಕೊಳ್ಳದೇ ಸಿನಿಮಾ ನಿರ್ಮಾಣಕ್ಕೆ ಮುಂದಾಗುವುದು ಸೂಕ್ತವಲ್ಲ ಎಂಬುದು ಅವರ ಸಲಹೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.