ಧರ್ಮ-ಕರ್ಮಗಳ ಮೇಲೊಂದು ಕಣ್ಣು!

ಚಿತ್ರ ವಿಮರ್ಶೆ

Team Udayavani, Dec 8, 2019, 6:02 AM IST

ಪ್ರತಿಯೊಬ್ಬರು ತಾವು ಮಾಡಿದ ಕರ್ಮಗಳಿಗೆ ಫ‌ಲಾಫ‌ಲಗಳನ್ನು ಪಡೆಯಲೇ ಬೇಕು. ಒಳ್ಳೆಯ ಕೆಲಸ ಮಾಡಿದರೆ, ಒಳ್ಳೆಯ ಫ‌ಲ, ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫ‌ಲ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಮನುಷ್ಯ ಮಾಡಿದ ಈ ಕರ್ಮಗಳಿಗೆ ಫ‌ಲ ನೀಡೋದು ಯಾರು? ಯಾವ ಯಾವ ರೂಪದಲ್ಲಿ ಕರ್ಮಫ‌ಲ ಬೆನ್ನು ಹತ್ತುತ್ತದೆ. ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, ಈ ವಾರ ತೆರೆಗೆ ಬಂದಿರುವ “ಐ 1′ ಚಿತ್ರ ನೋಡಬಹುದು.

ಮೂವರು ಶ್ರೀಮಂತರ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ. ಅವರನ್ನು ಅಪಹರಿಸುವ ಅನಾಮಿಕ ವ್ಯಕ್ತಿಯೊಬ್ಬ ಮೂವರನ್ನೂ ನಿಗೂಢ ಜಾಗದಲ್ಲಿ ಬಂಧಿಸಿಡುತ್ತಾನೆ. ಸಾವು-ಬದುಕಿನ ಹೋರಾಟಕ್ಕೆ ಇಳಿಯುವ ಮೂವರೂ ತಾವು ಮಾಡಿರುವ ಪಾಪ-ಪುಣ್ಯ ಕಾರ್ಯಗಳನ್ನು ಒಂದೊಂದಾಗಿ ಬಿಚ್ಚಿಡುತ್ತಾರೆ. ಅಂತಿಮವಾಗಿ ಯಾರ್ಯಾರಿಗೆ, ಏನೇನು ಶಿಕ್ಷೆ ಅನ್ನೋದೆ “ಐ 1′ ಚಿತ್ರದ ಕಥಾ ಹಂದರ.

ಮೇಲ್ನೋಟಕ್ಕೆ “ಐ 1′ ಚಿತ್ರದ ಕಥೆ ಸಾಮಾನ್ಯವಾಗಿ ಕಂಡರೂ, ಚಿತ್ರದ ನಿರೂಪಣೆ ಗಮನ ಸೆಳೆಯುತ್ತದೆ. ಪ್ರೇಕ್ಷಕರಿಗೆ ಎಲ್ಲೂ ಬೋರ್‌ ಆಗದಂತೆ ಕೇವಲ ಒಂದೇ ಸ್ಥಳದಲ್ಲಿ ಚಿತ್ರವನ್ನು ಚಿತ್ರೀಕರಿಸಿ, ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ತಮಿಳಿನ ಜನಪ್ರಿಯ ಚಿತ್ರ “ಅನ್ನಿಯನ್‌’ನ ನೆರಳು ಚಿತ್ರದ ಅಲ್ಲಲ್ಲಿ ಕಂಡು ಬರುತ್ತದೆ ಅನ್ನೋದನ್ನ ಬಿಟ್ಟರೆ, ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಇಡೀ ಚಿತ್ರ ಕೇವಲ ಮೂರು ಪಾತ್ರದ ಸುತ್ತ ನಡೆಯುತ್ತದೆ. ಕಿಶೋರ್‌, ಧೀರಜ್‌ ಪ್ರಸಾದ್‌ ಹಾಗೂ ರಂಜನ್‌ ಎಂ.ಎಸ್‌.ಬಿ ಮೂವರು ಕೂಡ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಉಳಿದಂತೆ ಚಿತ್ರದ ಹಿನ್ನೆಲೆ ಸಂಗೀತ, ಶಬ್ದಗ್ರಹಣ ಕಾರ್ಯಗಳು ಚಿತ್ರಕ್ಕೆ ಮೆರುಗು ನೀಡಿವೆ. ಚಿತ್ರದಲ್ಲಿ ಆಗಾಗ್ಗೆ ಬರುವ ಜನಪದ ಹಾಡಿನ ತುಣುಕುಗಳು ಚಿತ್ರದ ಕಥೆಗೆ ಟ್ವಿಸ್ಟ್‌ ಕೊಡುತ್ತ ಹೋಗುತ್ತದೆ.

ವಿಬಿನ್‌ ಆರ್‌ ಸಂಗೀತ, ಶಿನೂಬ್‌ ಟಿ ಚಾಕೋ ಛಾಯಾಗ್ರಹಣ, ವಿಶಾಖ್‌ ರಾಜೇಂದ್ರನ್‌ ಸಂಕಲನ ಕಾರ್ಯ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ತೀರಾ ನಿರೀಕ್ಷೆ ಇಟ್ಟುಕೊಳ್ಳದೆ ಥಿಯೇಟರ್‌ಗೆ ಹೋಗುವ ಪ್ರೇಕ್ಷಕರಿಗೆ “ಐ 1′ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ಅನಿರೀಕ್ಷಿತ ಮನರಂಜನೆ ನೀಡುವಂಥ ಚಿತ್ರ. ತೆರೆಯ ಮುಂದೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ “ಐ 1′ ಚಿತ್ರವನ್ನು ವಾರಾಂತ್ಯದಲ್ಲಿ ಒಮ್ಮೆ ನೋಡಲು ಅಡ್ಡಿ ಇಲ್ಲ.

ಚಿತ್ರ: ಐ-1
ನಿರ್ಮಾಣ: ಎಸ್‌.ಪಿ ಪಿಕ್ಚರ್ ಶೈಲಜಾ ಪ್ರಕಾಶ್‌
ನಿರ್ದೇಶನ: ಆರ್‌.ಎಸ್‌.ರಾಜಕುಮಾರ್‌
ತಾರಾಗಣ: ಕಿಶೋರ್‌, ಧೀರಜ್‌ ಪ್ರಸಾದ್‌ ಹಾಗೂ ರಂಜನ್‌ ಎಂ.ಎಸ್‌.ಬಿ ಮತ್ತಿತರರು.

* ಕಾರ್ತಿಕ್

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • -ಈ ದುಡ್‌ನ‌ ನಾವ್‌ ಹಂಚ್‌ಕೊಳ್ಳೋಣ. ಸಾಯೋ ತನಕ ದುಡಿದ್ರೂ ಇದ್ರಲ್ಲಿ ಅರ್ಧ ದುಡಿಯೋಲ್ಲ. - ಬೇಡ ಕಣ್ರೋ ನಾವ್‌ ತಪ್‌ ಮಾಡ್ತಾ ಇದೀವಿ. ನಮಗ್ಯಾಕೆ ಕಂಡೋರ ದುಡ್ಡು -...

  • "ನಿನ್ನ ಮನಸ್ಸಿಗೆ ಯಾವುದು ತಪ್ಪು ಅನಿಸುತ್ತೋ, ಅದನ್ನು ಮಾಡಬೇಡ. ಆದರೆ, ಯಾವುದು ಸರಿ ಅನಿಸುತ್ತೋ ಅದನ್ನು ಮಾಡದೆ ಬಿಡಬೇಡ...' ಆ ನಿಷ್ಠಾವಂತ ಪೊಲೀಸ್‌ ಅಧಿಕಾರಿಯೊಬ್ಬರು...

  • ಆತ ಹುಟ್ಟಿ ಬೆಳೆದಿದ್ದು ಇಂಗ್ಲೆಂಡ್‌ನ‌ಲ್ಲಿ. ಆದರೆ, ಆತನ ಮೂಲ ಭಾರತದಲ್ಲಿದೆ. ಅದೇ ಕಾರಣದಿಂದ ಆತನಿಗೆ ಭಾರತದ ಮೇಲೆ ಪ್ರೀತಿ ಇದೆ. ಜೊತೆಗೆ ತನ್ನ ದೇಶ ಇಂಗ್ಲೆಂಡ್‌...

  • ಆಟೋ ಶಂಕರ ಮಧ್ಯಮ ಕುಟುಂಬದ ವ್ಯಕ್ತಿ. ಹೆಸರೇ ಹೇಳುವಂತೆ ವೃತ್ತಿಯಲ್ಲಿ ಆಟೋ ರಿಕ್ಷಾ ಡ್ರೈವರ್‌ ಆಗಿರುವ ಶಂಕರ ಸಾಲ ಮಾಡಿ ತೆಗೆದುಕೊಂಡ ಆಟೋ ರಿಕ್ಷಾವನ್ನು ಓಡಿಸುತ್ತ,...

  • ಇಲ್ಲಿಯವರೆಗೆ ಸಂಭಾಷಣೆಕಾರನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮಂಜು ಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ "ಶ್ರೀ ಭರತ ಬಾಹುಬಲಿ' ಚಿತ್ರ...

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...