
ಜೂನ್‌ನಿಂದ ಮಕ್ಕಳಿಗೆ ಕೊವ್ಯಾಕ್ಸಿನ್ ಪ್ರಯೋಗ
Team Udayavani, May 25, 2021, 8:20 AM IST

ಹೊಸದಿಲ್ಲಿ: 2-18 ವರ್ಷ ವಯೋಮಿತಿಯವರಿಗಾಗಿ ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೊವ್ಯಾ ಕ್ಸಿನ್ ಲಸಿಕೆಯ ಪ್ರಯೋಗ ಮುಂದಿನ ತಿಂಗಳಿಂದ ಆರಂಭವಾಗುವ ಸಾಧ್ಯತೆ ಇದೆ. ಕೇಂದ್ರ ಸರಕಾರ ಈಗಾಗಲೇ 1,500 ಕೋಟಿ ರೂ. ನೀಡಿ ಲಸಿಕೆಗಳನ್ನು ಕಾಯ್ದಿರಿಸಿದೆ. ಹೀಗಾಗಿ ಬೆಂಗಳೂರು ಮತ್ತು ಗುಜರಾತ್ ಘಟಕಗಳಲ್ಲಿ ಕೂಡ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ನಿರ್ಧರಿಸಲಾಗಿದೆ ಎಂದು ಭಾರತ್ ಬಯೋಟೆಕ್‌ನ ಡಾ|ರಾಚೆಸ್ ಎಲ್ಲಾ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಹೈದರಾಬಾದ್‌ನ ಭಾರತ್ ಬಯೋಟೆಕ್ ಜಂಟಿಯಾಗಿಅದನ್ನು ಸಂಶೋಧಿಸಿ, ಅಭಿವೃದ್ಧಿಪಡಿಸಿವೆ. ಇದು ಎರಡು ಮತ್ತು ಮೂರನೇ ಹಂತದ ಪ್ರಯೋಗ. ಹೊಸದಿಲ್ಲಿ ಮತ್ತು ಪಾಟ್ನಾದಲ್ಲಿರುವ ಏಮ್ಸ್, ನಾಗ್ಪುರದಲ್ಲಿ ಸೇರಿದಂತೆ ಹಲವು ಸ್ಥಳಗಳಲ್ಲಿ 525 ಮಂದಿಯ ಮೇಲೆ ಪ್ರಯೋಗ ನಡೆಯಲಿದೆ. ಈ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮಾನ್ಯತೆ ಪಡೆದುಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಡಾ|ರಾಚೆಸ್ ಎಲ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ:ಲಸಿಕೆಗೆ 18 ವರ್ಷ ಮೇಲ್ಪಟ್ಟವರಿಗೂ ಸ್ಥಳದಲ್ಲೇ ನೋಂದಣಿ ಅವಕಾಶ
ರವಿವಾರದಿಂದ ಸೋಮವಾರದ ಅವಧಿಯಲ್ಲಿ ದೇಶದಲ್ಲಿ 2,22,315 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಎ. 16ರಂದು 2,17,353 ಸೋಂಕು ದೃಢಪಟ್ಟಿತ್ತು. ಸಕ್ರಿಯ ಸೋಂಕು ಸಂಖ್ಯೆ ಕೂಡ 27,20,716ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.88.69ಕ್ಕೆ ಏರಿಕೆಯಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goaಕ್ಕೆ ಪ್ರವಾಸಕ್ಕೆಂದು ತೆರಳಿದ್ದ ತುಮಕೂರಿನ ಯುವಕ ಆತ್ಮಹತ್ಯೆ

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Tragic: ಮರಕ್ಕೆ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ನವ ವಿವಾಹಿತರು ಸೇರಿ ನಾಲ್ವರು ಸಜೀವ ದಹನ

Chennai: ಹಾಸ್ಟೆಲ್ ಗೆ ಅತಿಕ್ರಮ ಪ್ರವೇಶ; ಮಹಿಳೆಗೆ ಕಿರುಕುಳ ನೀಡಿದ ಟೆಕ್ಕಿ ಬಂಧನ

Yamuna; ಈಜಿ ದಾಖಲೆ- ಕೇವಲ 11 ನಿಮಿಷದಲ್ಲಿ ಯಮುನಾ ನದಿಯನ್ನು ದಾಟಿದ ಬಾಲಕಿ!