9 ವಾರಗಳ ಬಳಿಕ ಅಮ್ಮನ ಮಡಿಲು ಸೇರಿದ ಮಕ್ಕಳು; ವೈರಲ್‌ ಆದ ತಾಯಿ ಮಕ್ಕಳ ವಾತ್ಸಲ್ಯದ ವೀಡಿಯೋ

Team Udayavani, Jun 10, 2020, 1:40 PM IST

9 ವಾರಗಳ ಬಳಿಕ ಅಮ್ಮನ ಮಡಿಲು ಸೇರಿದ ಮಕ್ಕಳು; ವೈರಲ್‌ ಆದ ತಾಯಿ ಮಕ್ಕಳ ವಾತ್ಸಲ್ಯದ ವೀಡಿಯೋ

ಸಾಂದರ್ಭಿಕ ಚಿತ್ರ

ಮಣಿಪಾಲ: ಕೋವಿಡ್‌-19 ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವವರೆಂದರೆ ಕೋವಿಡ್ ವಾರಿಯರ್ಸ್‌. ಸೋಂಕಿತರ ಚಿಕಿತ್ಸೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಇವರು ರಜೆಗಳನ್ನು ರದ್ದು ಮಾಡಿ ನಿರಂತರ ಸೇವೆ ನೀಡುತ್ತಿದ್ದಾರೆ. ಇತ್ತ ಮನೆಗೂ ಬಾರದೆ, ಕುಟುಂಬ ಸದಸ್ಯರಿಂದಲೂ ದೂರವಿದ್ದು, ಆಸ್ಪತ್ರೆಯಲ್ಲೇ ಉಳಿದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಲಂಡನ್‌ನ ನರ್ಸ್‌ ಒಬ್ಬರು ತನ್ನ ಮಕ್ಕಳನ್ನು ಎರಡು ತಿಂಗಳ ಬಳಿಕ ಭೇಟಿಯಾಗುತ್ತಿರುವ ವೀಡಿಯೋ ಒಂದು ಭಾರೀ ವೈರಲ್‌ ಆಗಿದ್ದು, ಹಲವಾರು ದಿನಗಳ ಬಳಿಕ ಅಮ್ಮನನ್ನು ಕಂಡು ಈ ಮಕ್ಕಳು ಸಂತಸದಿಂದ ಕುಣಿದಿದ್ದಾರೆ.

ರಾಕ್ಸ್ ಚ್ಯಾಪ್‌ಮನ್‌ ಎಂಬವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ವಿವರಣೆ ನೀಡಿರುವ ರಾಕ್ಸ್ “ಈಕೆ ಶಾರ್ಲೆಟ್‌, ಕೋವಿಡ್ ಅಟ್ಟಹಾಸದ ಸಂದರ್ಭದಲ್ಲಿ ಜನರ ಪ್ರಾಣ ಕಾಪಾಡುವ ಕಾರ್ಯದಲ್ಲಿ ತೊಡಗಿದ್ದರು. ಆ ಸಲುವಾಗಿಯೇ ತಮ್ಮ ಮಕ್ಕಳಿಂದ ಒಂಬತ್ತು ವಾರದಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿಯೇ ಶಾರ್ಲೆಟ್‌ ತನ್ನ 9 ವರ್ಷದ ಬೆಲಾ ಹಾಗೂ 7ವರ್ಷದ ಹ್ಯಾಟಿ ಎಂಬಿಬ್ಬರು ಮಕ್ಕಳನ್ನು ಆಕೆಯ ತಂಗಿಯ ಮನೆಯಲ್ಲಿ ಉಳಿಸಿಕೊಂಡಿದ್ದಳು. ಸುಮಾರು 9 ವಾರಗಳ ಕಾಲ ಈ ಮಕ್ಕಳು ತಾಯಿಯ ಮುಖವನ್ನೇ ನೋಡಿರಲಿಲ್ಲ’ ಎಂದು ಹೇಳಿದ್ದಾರೆ.

ಮಕ್ಕಳು ಕೂಡ ತಾಯಿಯನ್ನು ನೋಡಲು ತುಂಬಾ ಬಯಸುತ್ತಿದ್ದರು. ಮಕ್ಕಳ ಪ್ರಾರ್ಥನೆ ದೇವರಿಗೆ ತಲುಪಿತೋ ಎಂಬಂತೆ ಕೋವಿಡ್‌-19 ಸೋಂಕಿತರ ಶುಶ್ರೂಷೆಯಲ್ಲಿ ಸತತ 9 ವಾರಗಳಿಂದ ದುಡಿಯುತ್ತಿದ್ದ ಶಾರ್ಲೆಟ್‌ ಈಗ ಮನೆಗೆ ಹಿಂದಿರುಗಿದ್ದಾರೆ. ಮಕ್ಕಳಿಗೆ ಸರ್‌ಪ್ರೈಸ್‌ ನೀಡಬೇಕು ಎಂಬ ಉದ್ದೇಶದಿಂದ ಯಾವುದೇ ಪೂರ್ವ ಮಾಹಿತಿ ನೀಡದೇ ಮನೆಗೆ ಭೇಟಿ ನೀಡಿದ್ದಾಳೆ. ಮಕ್ಕಳು ತಮ್ಮ ಪಾಡಿಗೆ ಕುಳಿತು ಮಾತನಾಡುತ್ತಿದ್ದಾಗ, ಹಿಂಬದಿಯಿಂದ ಸದ್ದು ಮಾಡದೇ ಬಂದು ಮಕ್ಕಳ ತಲೆ ನೇವರಿಸುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಇನ್ನು ತಮ್ಮ ಪಾಡಿಗೆ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದ ಮಕ್ಕಳಿಗೆ, “ಏನು ನೋಡುತ್ತಿದ್ದೀರಾ’ ಎಂಬ ಧ್ವನಿ ಹಿಂಬದಿಯಿಂದ ಕೇಳಿತು. ತಿರುಗಿ ನೋಡಿದಾಗ ಆಶ್ಚರ್ಯ ಕಾದಿತ್ತು. ಅಲ್ಲಿ ಅವರ ತಾಯಿ ನಿಂತಿದ್ದರು. ಎರಡು ತಿಂಗಳ ಬಳಿಕ ತಾಯಿಯನ್ನು ನೋಡಿದ ಅವರು ಖುಷಿಯಿಂದ ಕುಣಿದಾಡಿದ್ದಾರೆ. ಸಂತೋಷದಲ್ಲಿ ಅಮ್ಮನನ್ನು ಅಪ್ಪಿಕೊಂಡು ಅಳಲಾರಂಭಿಸಿದ್ದು, ತಾಯಿ ಮಕ್ಕಳ ವಾತ್ಸಲ್ಯದ ಈ ವೀಡಿಯೋ ಸದ್ಯ ಭಾರೀ ವೈರಲ್‌ ಆಗಿದೆ.

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ; 24 ಗಂಟೆಯಲ್ಲಿ 2.55 ಲಕ್ಷ ಪ್ರಕರಣ ಪತ್ತೆ

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ; 24 ಗಂಟೆಯಲ್ಲಿ 2.55 ಲಕ್ಷ ಪ್ರಕರಣ ಪತ್ತೆ

ನಗರ ಪ್ರದೇಶ ಆಯ್ತು ಇನ್ನು ಗ್ರಾಮಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗಲಿದೆ:ಆರೋಗ್ಯ ತಜ್ಞರು

ನಗರ ಪ್ರದೇಶ ಆಯ್ತು ಇನ್ನು ಗ್ರಾಮಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗಲಿದೆ:ಆರೋಗ್ಯ ತಜ್ಞರು

ಭಾರತ; 24ಗಂಟೆಯಲ್ಲಿ 3,06,064 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ 22 ಲಕ್ಷಕ್ಕೆ ಏರಿಕೆ

ಭಾರತ; 24ಗಂಟೆಯಲ್ಲಿ 3,06,064 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ 22 ಲಕ್ಷಕ್ಕೆ ಏರಿಕೆ

covid-19

24 ಗಂಟೆ ಅವಧಿಯಲ್ಲಿ ದೇಶದಲ್ಲಿ 3.33 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆ

Kiribati and Samoa

ಇದುವರೆಗೆ ಕೇವಲ ಎರಡು ಕೋವಿಡ್ ಕೇಸ್ ಪತ್ತೆಯಾದ ದೇಶದಲ್ಲಿ ಲಾಕ್ ಡೌನ್ ಜಾರಿ!

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.