ಇಲ್ಲಿ ಮಾಸ್ಕ್ ಹಾಕದಿದ್ರೆ 5 ಸಾವಿರ, ಕೈತೊಳೆಯಲು ಸೋಪ್ ಇಡದಿದ್ರೆ 1 ಸಾವಿರ ದಂಡ!
Team Udayavani, Apr 30, 2020, 6:38 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ತಿರುವನಂತಪುರ: ಮನೆಯಿಂದ ಮಾಸ್ಕ್ ಇಲ್ಲದೆ ಹೊರಗಡೆ ಬಂದರೆ 5000ರೂ. ದಂಡ ಕಟ್ಟಬೇಕು. ಅಂಗಡಿಗಳಲ್ಲಿ ಕೈ ಶುಚಿ ಮಾಡಿಕೊಳ್ಳಲು ಸೋಪು ಇಟ್ಟಿಲ್ಲ ಅಂದರೆ 1000ರೂ. ದಂಡ ಪಾವತಿ ಮಾಡಬೇಕು. ಗಾಬರಿಯಾಗಬೇಡಿ. ಇದು ನಮ್ಮಲ್ಲಿ ಅಲ್ಲ, ವಯನಾಡಲ್ಲಿ.
ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಆರ್. ಇಲಾಂಗೋ ಸಾರ್ವಜನಿಕರಿಗೆ ಈ ದಂಡದ ಬಗ್ಗೆ ಬುಧವಾರ ಪ್ರಕಟಣೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಈ ವಯನಾಡ್, ಪ್ರಸ್ತುತ ಹಸಿರು ವಲಯದಲ್ಲಿದೆ.
ಈ ತನಕ ಒಂದೇ ಒಂದು ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಆದರೆ, 842 ಮಂದಿಯ ಮೇಲೆ ನಿಗಾವಹಿಸಿದ್ದು, 9 ಮಂದಿಯನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಈ ನಡುವೆ ಇಲ್ಲಿನ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಮಂಗಳವಾರದಂದು ವಯನಾಡಿನ ಜನರ ಜೊತೆ ಮಾತಕತೆ ನಡೆಸಿ, ಕೋವಿಡ್ ಸೋಂಕು ನಿರ್ಮೂಲನಕ್ಕೆ ಅಗತ್ಯವಿರುವ ಎಲ್ಲಾ ನೆರವುಗಳನ್ನು ಒದಗಿಸಿಕೊಡುವುದಾಗಿ ತನ್ನ ಕ್ಷೇತ್ರದ ಜನರಿಗೆ ಧೈರ್ಯ ತುಂಬಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ