ಮಣ್ಣೆತ್ತಿನ ಅಮಾವಾಸ್ಯೆಗೆ ಕೊರೊನಾ ಕರಿನೆರಳು

ಹಬ್ಬದ ಸಂಭ್ರಮಾಚರಣೆಗೆ ಬ್ರೇಕ್‌ | ಮಣ್ಣಿನ ಎತ್ತಿಗೆ ಎಲ್ಲಿಲ್ಲದ ಬೇಡಿಕೆ | ವೈಶಿಷ್ಟತೆ ಪಡೆದುಕೊಂಡ ಹಬ್ಬ

Team Udayavani, Jul 9, 2021, 7:08 PM IST

8hnd3

ವರದಿ: ಮಲ್ಲಿಕಾರ್ಜುನ ಎಂ ಬಂಡರಗಲ್ಲ

ಹುನಗುಂದ: ಮಣ್ಣೆತ್ತಿನ ಅಮಾವಾಸ್ಯೆ ರೈತಾಪಿ ವರ್ಗಕ್ಕೆ ವಿಶೇಷ ಹಬ್ಬ. ಆದರೆ, ಈ ಬಾರಿ ಕೊರೊನಾ ಮಹಾಮಾರಿದಿಂದ ಹಬ್ಬದ ಕಳೆ ಮಾಯವಾಗಿದೆ.

ಕೃಷಿ ಪ್ರಧಾನವಾದ ಉತ್ತರ ಕರ್ನಾಟಕದಲ್ಲಿ ಮುಂಗಾರು ಬಿತ್ತನೆಯ ನಂತರ ರೈತರ ಜೀವ ನಾಡಿ ಎತ್ತುಗಳನ್ನು ಹೊಲ, ನದಿ ತಟದಲ್ಲಿ ಜಿಗುಟು ಮಣ್ಣು ತಂದು ಅದರಲ್ಲಿ ಎತ್ತಿನ ರೂಪ ಮಾಡಲಾಗುತ್ತದೆ. ಅದಕ್ಕೆ ತೊಯಿಸಿದ ಜೋಳದ ಕಾಳು, ಕುಸಿಬಿ ಸೇರಿದಂತೆ ಅನೇಕ ಕಾಳುಗಳಿಂದ ಸಿಂಗರಿಸಿ ಅದರ ಮುಂದೆ ಒಂದು ಚಿಕ್ಕ ಗ್ವಾದಲಿ ಮಾಡುವ ಪರಂಪರೆಯಿದೆ. ಇನ್ನು ಮಣ್ಣಿನಿಂದ ಎತ್ತು ಮಾಡಲು ಬರದವರು ಕುಂಬಾರ ಮಾಡಿದ ಮಣ್ಣಿನ ಎತ್ತನ್ನು ತಂದು ಪೂಜಿಸಿ ಆರಾಧಿಸುವ ವಿಶಿಷ್ಟ ಹಬ್ಬವಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗದಿಂದ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಕಳೆಗುಂದುವ ಲಕ್ಷಣ ಕಂಡು ಬರುತ್ತಿದ್ದು, ಪ್ರತಿ ವರ್ಷ 1000-2000 ಮಣ್ಣೆತ್ತು ತಯಾರಿಸುತ್ತಿದ್ದೇವು. ಆದರೆ, ಈ ಬಾರಿ ಕೊರೊನಾದಿಂದ ವ್ಯಾಪಾರ ಕಡಿಮೆಯಾಗಬಹುದು ಎನ್ನುವ ಕಾರಣಕ್ಕೆ ಒಂದು ಸಾವಿರ ಮಣ್ಣೆತ್ತುಗಳನ್ನು ಮಾಡಲಾಗಿದೆ ಎಂದು ಮಣ್ಣೆತ್ತು ತಯಾರಿಸುವ ಕುಂಬಾರರು ಹೇಳುತ್ತಾರೆ. ಪ್ರತಿಯೊಂದು ಹಳ್ಳಿಗಳಲ್ಲಿ ಪ್ರಮುಖ ರಸ್ತೆ ಮತ್ತು ಗ್ರಾಮದ ಅಗಸಿ ಬಾಗಿಲಿಗೆ ದೊಡ್ಡ ದೊಡ್ಡ ಎತ್ತುಗಳನ್ನು ಮಾಡಿ ದೊಡ್ಡ ಪೆಂಡಾಲ್‌ ಹಾಕಿ ಹಲವು ರೀತಿಯಲ್ಲಿ ಅಲಂಕಾರ ಮಾಡಿ ಮಣ್ಣಿನ ಎತ್ತುಗಳನ್ನು ಇಟ್ಟು ಅನೇಕ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮರು ದಿನ ನದಿ ಮತ್ತು ಬಾವಿಗಳ ನೀರಿನಲ್ಲಿ ಬಿಡುವ ವಾಡಿಕೆಯಿತ್ತು. ಆದರೆ, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಸರಳವಾಗಿ ಹಬ್ಬ ಆಚರಣೆಗೆ ಸೂಚಿಸಿರುವುದರಿಂದ ತಾಲೂಕಿನಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಕಳೆಗುಂದಿದೆ.

ಇನ್ನು ಚಿಕ್ಕ ಮಕ್ಕಳು ಕೊರಳಲ್ಲಿ ಎತ್ತಿನ ಗೆಜ್ಜಿಯನ್ನು ಕಟ್ಟಿಕೊಂಡು ಮಣ್ಣಿನಿಂದ ಮಾಡಿದ ಎತ್ತಿನ ಒಂದು ಕಾಲು ಮುರಿದು ಮನೆ ಮನೆಗಳಿಗೆ ತೆರಳಿ ಎಂಟೆತ್ತಿನ್ಯಾಗ ಒಂದು ಕುಂಟೆತ್ತು ಬಂದೈತಿ ಜೋಳ ನೀಡಿ ಅಂತ ಜೋಳ ಮತ್ತು ಹಣವನ್ನು ಪಡೆದು ಅದೇ ಹಣ ತೆಗೆದುಕೊಂಡು ಪಂಚ ಪಳಾರ ತಗೆದುಕೊಂಡು ಬಂದು ಊರಿನ ಜನರಿಗೆ ಹಂಚಿ ಖುಷಿ ಪಡುವ ವಿಶೇಷ ಹಬ್ಬವೇ ಮಣ್ಣೆತ್ತಿನ ಹಬ್ಬವಾಗಿದೆ. ಆದರೆ, ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.