ರೈತರ ಹಬ್ಬ ಕಾರಹುಣ್ಣಿಮೆಯ ಸಂಭ್ರಮಕ್ಕೆ ಕೋವಿಡ್ ಮಂಕು
Team Udayavani, Jun 5, 2020, 12:02 PM IST
ಸಾಂದರ್ಭಿಕ ಚಿತ್ರ
ಕಲಾದಗಿ: ರೈತಾಪಿ ವರ್ಗದವರು ಸಡಗರ-ಸಂಭ್ರಮದಿಂದ ಆಚರಿಸುವ ಕಾರ ಹುಣ್ಣಿಮೆ ಹಬ್ಬಕ್ಕೆ ಈ ಬಾರಿ ಕೋವಿಡ್ ಕಾರ್ಮೋಡ ಕವಿದಿದ್ದು, ಎತ್ತುಗಳ ಅಲಂಕಾರದ ವಸ್ತುಗಳ ವ್ಯಾಪಾರ ತುಸು ಕಡಿಮೆಯಾಗಿದೆ.
ಕಾರ ಹುಣ್ಣಿಮೆ ಸಂಭ್ರಮಕ್ಕಾಗಿ ರೈತರು ಎತ್ತುಗಳ ಶೃಂಗಾರಕ್ಕಾಗಿ ಬೇಕಾಗುವ ಸಾಮಗ್ರಿಗಳನ್ನು ಹೊನ್ನುಗ್ಗಿ ಮುನ್ನಾ ದಿನ ಬುಧವಾರ ಮತ್ತು ಗುರುವಾರ ಖರೀದಿಸುತ್ತಿರುವುದು ಕಂಡು ಬಂತು. ಕೋವಿಡ್ ಹೊಡೆತಕ್ಕೆ ಎಲ್ಲರ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದ್ದು, ರೈತರ ಕೈಯಲ್ಲಿ ಹಣವಿಲ್ಲವಾದದ್ದರಿಂದ ಹಲವು ರೈತರು ವಸ್ತುಗಳ ದರ ಚೌಕಾಸಿ ಮಾಡಿ ಖರೀದಿಸುತ್ತಿದ್ದರು.
ಕುಗ್ಗಿದ ವ್ಯಾಪಾರ: ಕಾರಹುಣ್ಣಿಮೆಗೆ ವಿಶೇಷವಾಗಿ ಎತ್ತುಗಳಿಗೆ ಬಣ್ಣದ ಲಡ್ಡ, ಹಣೆಪಟ್ಟಿ, ಹಗ್ಗ, ಗೆಜ್ಜೆಸರ, ಬಾರಕೋಲು, ಗೊಂಡೆ, ಜತಗಿ, ಹಿಡಿಹಗ್ಗ, ಗುಮುರಿ, ಗೆಜ್ಜೆ, ಬೊರಗಡ ಮೊದಲಾದ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತಾದರೂ ಸಾಮಗ್ರಿ ಖರೀದಿಸಲು ಹಿಂದೇಟು ಹಾಕುತ್ತಿರುವುದು ಕಂಡುಬಂತು. ಹೋದ ವರ್ಷಕ್ಕಿಂತ ಈ ವರ್ಷ ಕಾರಹುಣ್ಣಿಮೆ ವ್ಯಾಪಾರ ಕಡಿಮೆ ಇದೆ. ವರ್ಷದಿಂದ ವರ್ಷಕ್ಕೆ ದನ ಕರುಗಳ ಸಂಖ್ಯೆ ಇಳಿಮುಖವಾಗಿರುವುದಕ್ಕೆ ವ್ಯಾಪಾರ ಕಡಿಮೆಯಾಗಿದೆ. ಇದರ ಮಧ್ಯೆ ಕೋವಿಡ್ ದಿಂದ ವ್ಯಾಪಾರಕ್ಕೆ ಮಂಕು ಕವಿದಿದೆ ಎನ್ನುತ್ತಾರೆ ದೇವನಾಳ ವ್ಯಾಪಾರಸ್ಥ ಲಾಲಸಾಬ ನದಾಫ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ