ಕೋಟೆ ನಾಡಿನಲ್ಲೀಗ ಮಹಾ ಸಂಕಟ !

ಕ್ವಾರಂಟೈನ್‌ಗೆ ವಲಸಿಗರು-ನಗರದ ಜನರ ವಿರೋಧ

Team Udayavani, May 18, 2020, 1:59 PM IST

ಕೋಟೆ ನಾಡಿನಲ್ಲೀಗ ಮಹಾ ಸಂಕಟ !

ಬಾಗಲಕೋಟೆ: ತ್ರಿವೇಣಿ ಸಂಗಮ ಜಿಲ್ಲೆ ಎಂದೇ ಖ್ಯಾತಿ ಪಡೆದ ಬಾಗಲಕೋಟೆಗೆ ಪಕ್ಕದ ಮಹಾರಾಷ್ಟ್ರದ ಭೀತಿ ಕಾಡುತ್ತಿದೆ. ಹೌದು, ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡು ಇಲ್ಲದಿದ್ದರೂ ಬಾಗಲಕೋಟೆ ಜಿಲ್ಲೆಗೂ, ಮಹಾರಾಷ್ಟ್ರಕ್ಕೂ ನಂಟಿದೆ. ಬೀಗಸ್ಥನವೂ ನಡೆಯುತ್ತವೆ. ಅಲ್ಲಿಯ ಜನರು ಕಬ್ಬು ಕಟಾವು ಮಾಡಲು ಇಲ್ಲಿಗೆ ಬರುವುದು, ಇಲ್ಲಿಯವರು ಇಟ್ಟಿಗೆ ಭಟ್ಟಿ, ಕಬ್ಬು ಕಡಿಯಲು ಅಲ್ಲಿಗೆ ಹೋಗುವುದು ಹಲವು ವರ್ಷಗಳಿಂದ ಪರಂಪರೆಯಾಗಿ ಮಾರ್ಪಟ್ಟಿದೆ. ಆದರೆ, ಕೋವಿಡ್ ಎಂಬ ಮಹಾಮಾರಿ, ತಮ್ಮೂರಿನ ಬಂಧುಗಳನ್ನೇ ನಮ್ಮ ಊರಿಗೆ ಬಿಟ್ಟುಕೊಳ್ಳದಂತಹ ಭಾವನಾತ್ಮಕ ಬಿಕ್ಕಟ್ಟು ತಂದಿದೆ.

ಮಹಾ ಭೀತಿ: ಪಕ್ಕದ ವಿಜಯಪುರ, ಬೆಳಗಾವಿ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಬಾಗಲಕೋಟೆಯ ಜನರೂ ದುಡಿಯಲು ವಲಸೆ ಹೋಗುತ್ತಾರೆ. ಬೆಳಗಾವಿ, ವಿಜಯಪುರ ಜಿಲ್ಲೆಯ ಗಡಿ ಭಾಗದ ತೋಟಗಳಲ್ಲೂ ಹಾಯ್ದು ಜನರು ತಮ್ಮೂರ ಸೇರಲು ಧಾವಂತದಿಂದ ಬಂದವರಿದ್ದಾರೆ. ಇನ್ನು ಕೆಲವರು ಅಧಿಕೃತವಾಗಿ ತಮ್ಮೂರು ಸೇರಲು ಬಂದರೆ, ಹಲವರು ಕಾಲು ದಾರಿ ಮೂಲಕ ಊರು ಸೇರಿದ್ದಾರೆ. ಹೀಗೆ ಊರು ಸೇರಿದವರ ಬಗ್ಗೆ ಆಯಾ ಗ್ರಾಮಸ್ಥರಿಗೆ ತೀವ್ರ ಭೀತಿ ಕಾಡುತ್ತಿದೆ. ಕಾಲು ದಾರಿ ಮೂಲಕ ಬಂದವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಅವರನ್ನು ಕ್ವಾರಂಟೈನ್‌ ಮಾಡಲು ಹೋದಾಗ ಗಲಾಟೆಗಳೂ ಆಗುತ್ತಿವೆ. ಜಿಲ್ಲೆಗೆ ಈಗಾಗಲೇ 1575 ಬೇರೆ ರಾಜ್ಯದಿಂದ ಬಂದಿದ್ದಾರೆ. ಬೇರೆ ರಾಜ್ಯ, ಬೇರೆ ಜಿಲ್ಲೆಗಳಿಂದ ಬರೋಬ್ಬರಿ 31 ಸಾವಿರ ಜನ ವಲಸಿಗರು ಜಿಲ್ಲೆಗೆ ಬಂದಿದ್ದು, ಅವರೆಲ್ಲರ ಮೇಲೆ ನಿಗಾ ಇಡುವುದೂ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.

ಕ್ವಾರಂಟೈನ್‌ಗೆ ವಿರೋಧ: ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಜನರು ಬರುತ್ತಲೇ ಇದ್ದು, ಅವರನ್ನು 14 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಇದಕ್ಕಾಗಿ ವಸತಿ ನಿಲಯ, ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳದೇ ಬೇರೆ ಮಾರ್ಗವಿಲ್ಲ. ನಗರ ಪ್ರದೇಶದಲ್ಲಿ ಹೆಚ್ಚು ಶಾಲೆ, ವಸತಿ ನಿಲಯಗಳಿದ್ದು, ಅಲ್ಲಿ ವಲಸೆಯಿಂದ ಮರಳಿದ ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ. ಇದಕ್ಕೆ ಆಯಾ ಶಾಲೆ, ವಸತಿ ನಿಲಯಗಳ ಸುತ್ತಲಿನ ಪ್ರದೇಶದ ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರವಿವಾರ ಹಳೆಯ ಬಾಗಲಕೋಟೆಯ ಪದವಿ ಕಾಲೇಜು, ಪ್ರೌಢ ಶಾಲೆಯೊಂದರಲ್ಲಿ ಕಾರ್ಮಿಕರನ್ನು ಕ್ವಾರಂಟೆ„ನ್‌ ಮಾಡಲು ಮುಂದಾದಾಗ ಜನರು ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಗುಡ್ಡೆ ಹಾಕಬೇಡಿ: ವಲಸೆ ಹೋಗಿದ್ದ ಕಾರ್ಮಿಕರೆಲ್ಲ ಮರಳಿ ಬರುತ್ತಿದ್ದು, ಅವರನ್ನು ಸ್ವತಃ ಊರಿಗೆ ಜನರ ಬಿಟ್ಟುಕೊಳ್ಳುತ್ತಿಲ್ಲ. ಹೀಗಾಗಿ 14 ದಿನ ಕ್ವಾರಂಟೈನ್‌ ಇದ್ದು, ಆರೋಗ್ಯ ತಪಾಸಣೆಯೊಂದಿಗೆ ಊರಿಗೆ ಹೋದರಾಯ್ತು ಎಂದು ಕಾರ್ಮಿಕರೂ ನಿರ್ಧರಿಸಿ, ಆಯಾ ತಾಲೂಕು ಆಡಳಿತ ಕೈಗೊಳ್ಳುವ ಕ್ವಾರಂಟೈನ್‌ಗೆ ಒಳಗಾಗುತ್ತಿದ್ದಾರೆ. ಆದರೆ, ಗೋವಾ ಮತ್ತು ಮಹಾರಾಷ್ಟ್ರದಿಂದ ಬಂದಿರುವ ಕಾರ್ಮಿಕರನ್ನು ಒಂದೆಡೆ ಕ್ವಾರಂಟೈನ್‌ ಮಾಡುತ್ತಿರುವುದಕ್ಕೆ ಗೋವಾದಿಂದ ಬಂದವರು ವಿರೋಧ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಿದೆ. ಗೋವಾದಲ್ಲಿ ಕೋವಿಡ್ ಅಷ್ಟೊಂದಿಲ್ಲ. ನಾವೆಲ್ಲ ಸುರಕ್ಷಿತವಾಗಿ ಇದ್ದೇವೆ. ನಮ್ಮೊಂದಿಗೆ ಮಹಾರಾಷ್ಟ್ರದಿಂದ ಬಂದವರನ್ನು ಏಕೆ ಕೂಡಿ ಹಾಕುತ್ತೀರಿ. ಮಹಾರಾಷ್ಟ್ರ ಮತ್ತು ಗೋವಾದಿಂದ ಬಂದವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ ಮಾಡಿ ಎಂದು ಹಲವರು ತರಕಾರು ತಗೆಯುತ್ತಿದ್ದಾರೆ.

ಇಂದು ರೀತಿ ಇದು ಸೂಕ್ತವೂ ಎನಿಸಿದ್ದು, ಪ್ರತ್ಯೇಕ ರಾಜ್ಯದಿಂದ ಬಂದವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತವೂ ಸೂಕ್ತ ವಸತಿ ನಿಲಯ, ಶಾಲೆಗಳ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಿಳಿ ಸಾರು-ಅನ್ನಕ್ಕೆ ವಿರೋಧ: ಇನ್ನು ಕ್ವಾರಂಟೈನ್‌ ಕೇಂದ್ರಗಳಲ್ಲಿ ಬೇಳೆ ಇಲ್ಲದ ತಿಳಿ ಸಾರು, ಪಡಿತರ ಅಕ್ಕಿಯ ಅನ್ನ ನೀಡುತ್ತಿರುವುದಕ್ಕೆ ಹಲವರು ತಕರಾರು ತೆಗೆಯುತ್ತಿದ್ದಾರೆ. ಅನ್ನದಲ್ಲಿ ಸ್ವಾದವಿಲ್ಲ. ಸಾರಿನಲ್ಲಿ ಬೇಳೆ-ತರಕಾರಿ ಇಲ್ಲ. ಇದನ್ನು ದಿನಾಲೂ ಹೇಗೆ ತಿನ್ನುವುದು. ಹೊಟ್ಟೆ ತುಂಬ ತಿನ್ನಲು ಉತ್ತಮ ಊಟ ಕೊಡಿ ಎಂದು ಕೆಲವರು ಕೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆ, ಕೋವಿಡ್ ಎಂಬ ಮಾರಿ, ತಮ್ಮ ಬಂಧು-ಮಿತ್ರರನ್ನೂ ಸೇರಲು ಬಿಡುತ್ತಿಲ್ಲ. ಹುಟ್ಟಿದ ಊರಿಗೆ ಹೋಗೋಣವೆಂದರೂ ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ವಿಸ್ತರಿಸಿದ ಕಾರಣ, ಅಲ್ಲಿಂದ ಬರುವ ನಮ್ಮವರಿಂದಲೇ ನಮಗೆ ಭೀತಿ ಎದುರಾಗಿದೆ ಎಂದು ಹೇಳಿಕೊಳ್ಳುವಂತಾಗಿದೆ.

ಜಿಲ್ಲೆಯ ವಿವಿಧೆಡೆ ಶಾಲೆ, ವಸತಿ ನಿಲಯಗಳಲ್ಲಿ 1575 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಇನ್ನೂ ಬೇರೆ ಬೇರೆ ರಾಜ್ಯಗಳಿಂದ ಕಾರ್ಮಿಕರು ಬರಲಿದ್ದಾರೆ. ಅವರೆಲ್ಲರಿಗೂ ಸರ್ಕಾರಿ ಕ್ವಾರಂಟೈನ್‌ ಮಾಡಲಾಗುವುದು. ಕ್ವಾರಂಟೈನ್‌ ಕೇಂದ್ರಗಳ ಸುತ್ತಲಿನ ಜನ ಭೀತಿಗೊಳ್ಳುವ ಅಗತ್ಯವಿಲ್ಲ. ಈ ರೋಗ ನಿಯಂತ್ರಣಕ್ಕೆ ಸಹಕಾರ ಕೊಡಬೇಕು.  ಕ್ಯಾಪ್ಟನ್‌ ಡಾ| ರಾಜೇಂದ್ರ, ಜಿಲ್ಲಾಧಿಕಾರಿ

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.