ನವಿಲಿನ ಹಾವಳಿಗೆ ನಲುಗಿದ ರೈತನ ಬದುಕು

ಮಕ್ಕೆ ಮುಂದಾಗದ ಅರಣ್ಯ ಅಧಿಕಾರಿಗಳು

Team Udayavani, Apr 12, 2021, 2:46 PM IST

ನವಿಲಿನ ಹಾವಳಿಗೆ ನಲುಗಿದ ರೈತನ ಬದುಕು

ಮುಧೋಳ: ಬರಗಾಲ, ಅತಿವೃಷ್ಟಿ, ಬೆಳೆದ ಬೆಳೆಗೆಸೂಕ್ತ ಬೆಲೆ ದೊರೆಯದಿರುವುದು ಸೇರಿದಂತೆ ಹತ್ತಾರುಸಮಸ್ಯೆ ಎದುರಿಸುವ ತಾಲೂಕಿನ ರೈತರಿಗೆ ಹೊಸಸಂಕಷ್ಟವೊಂದು ಶುರುವಾಗಿದೆ. ಬೇಸಿಗೆ ಬೆಳೆಯಾದಶೇಂಗಾ ಬೆಳೆ ತಿನ್ನಲು ಹಿಂಡು ಹಿಂಡಾಗಿ ನುಗ್ಗುತ್ತಿರುವ ನವಿಲುಗಳು ರೈತರನ್ನು ಕಂಗೆಡಿಸಿವೆ. ನವಿಲಿನ ಹಾವಳಿಗೆ ನಲುಗಿರುವ ಅನ್ನದಾತ ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಮೆಳ್ಳಿಗೇರಿ, ಹಲಗಲಿ ಮತ್ತು ಕಿಶೋರಿ ಭಾಗದಲ್ಲಿರುವ ಯಡಹಳ್ಳಿ ಚೀಂಕಾರರಕ್ಷಿತಾರಣ್ಯದಲ್ಲಿನ ನವಿಲುಗಳು ಆಹಾರ ಅರಸಿ ರೈತರ ಹೊಲಗಳಿಗೆ ಲಗ್ಗೆಯಿಡುತ್ತಿರುವುದರಿಂದ ರೈತರಹೊಲದಲ್ಲಿನ ಶೇಂಗಾ ಬೆಳೆಯ ಇಳುವರಿಯಲ್ಲಿಕುಂಠಿತವಾಗುವ ಭೀತಿ ಎದುರಾಗಿದೆ.

ಹಿಂಡು ಹಿಂಡಾಗಿ ದಾಳಿ: ಹಲಗಲಿ ಭಾಗದ ಹೊರವಲಯದಲ್ಲಿನ ಶೇಂಗಾ ಹೊಲಗಳಿಗೆಬೆಳಗ್ಗೆ ಹಾಗೂ ಸಂಜೆ ವೇಳೆ ಹಿಂಡು ಹಿಂಡಾಗುಲಗ್ಗೆಯಿಡುವ ನವಿಲುಗಳು ಶೇಂಗಾ, ಅಲಸಂದಿಬೆಳೆ ತಿಂದು ಹಾಳುಗೆಡುವುತ್ತಿವೆ. ನವಿಲುಗಳು ಬೆಳೆಹಾಳು ಮಾಡುತ್ತಿರುವುದರಿಂದ ಸಾಲಸೋಲ ಮಾಡಿಬೇಸಾಯ ಮಾಡಿರುವ ರೈತ ಕಂಗಾಲಾಗಿದ್ದಾನೆ.

ಅಸಹಾಯಕರಾದ ರೈತರು: ತಮ್ಮ ಹೊಲದಲ್ಲಿನವಿಲುಗಳು ಬೆಳೆಹಾನಿ ಮಾಡುತ್ತಿದ್ದರೂ ರೈತರು ಅಸಹಾಯಕರಾಗಿ ಮೂಕವಿಸ್ಮಿತರಂತೆ ನೋಡುವಂತಾಗಿದೆ. ಬೇರೆ ಪ್ರಾಣಿ, ಪಕ್ಷಿಯಾಗಿದ್ದರೆ ಬೆದರಿಸಿ ಅವುಗಳನ್ನು ಕಾಡಿಗೆ ಅಟ್ಟುತ್ತಿದ್ದೆವು. ಆದರೆ,ನವಿಲು ನಮ್ಮ ರಾಷ್ಟ್ರಪಕ್ಷಿ ಅವುಗಳನ್ನು ಬೆದರಿಸುವ ಭರದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಇಲಾಖೆ ತನಿಖೆ ಹಾಗೂ ಕೋರ್ಟ್‌ ಕಚೇರಿ ಅಲೆದಾಡುವ ತಾಪತ್ರಯ ಎದುರಾಗುತ್ತದೆ. ಅದಕ್ಕಿಂತ ಅವುಗಳುತಿಂದು ಬಿಟ್ಟಷ್ಟನ್ನು ನಾವು ನಮ್ಮ ಉಪಜೀವನಕ್ಕೆಬಳಕೆ ಮಾಡಿಕೊಂಡರಾಯಿತು ಎಂಬ ನಿಲುವಿಗೆ ಬಂದಿದ್ದಾರೆ.

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ: ಕರ್ನಾಟಕದ ಮುಕುಟುಮಣಿಯಂತಿರುವ ಯಡಹಳ್ಳಿ ಚೀಂಕಾರರಕ್ಷಿತಾರಣ್ಯದ ಭದ್ರತೆಗೆ ಕಟಿಬದ್ಧರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳ ಬಗ್ಗೆ ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಅರಣ್ಯ ಪ್ರದೇಶದ ವ್ಯಾಪ್ತಿಗೆ ಹೊಂದಿಕೊಂಡಿರುವ ಜಮೀನುಗಳಲ್ಲಿನ ಪ್ರಾಣಿಪಕ್ಷಿಗಳ ಹಾವಳಿ ತಡೆಯಲು ಅಧಿಕಾರಿಗಳು ಇದುವರೆಗೂ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದಿರುವುದು ರೈತರನ್ನು ಮತ್ತಷ್ಟುಕಂಗೆಡಿಸಿದೆ. ನವಿಲುಗಳು ಬೆಳೆ ಹಾನಿ ಮಾಡುವ ಬಗ್ಗೆ ಇತ್ತೀಚೆಗೆ ಹಲಗಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ನಡೆದ ಸಭೆಯಲ್ಲಿ ಗ್ರಾಮಸ್ಥರು ನವಿಲಿನ ಹಾವಳಿ ಬಗ್ಗೆ ಕ್ರಮ ಕೈಗೊಂಡು ರೈತರ ಬೆಳೆ ಉಳಿಸಿ ಎಂದು ಮೌಖೀಕವಾಗಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ನಮ್ಮ ಬೆಳೆಗಳ ಉಳಿವಿಗೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಅರಣ್ಯದಲ್ಲಿ ಆಹಾರದ ಕೊರತೆ: ನೆರೆಯ ಬೀಳಗಿ ಹಾಗೂ ಮುಧೋಳ ತಾಲೂಕಿನಲ್ಲಿ ಅಂದಾಜು9636 ಹೆಕ್ಟೇರ್‌ ಪ್ರದೇಶ ವ್ಯಾಪ್ತಿಯಲ್ಲಿ ಆವರಿಸಿರುವ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯ ಪ್ರದೇಶದಲ್ಲಿಪ್ರಾಣಿಗಳಿಗೆ ಆಹಾರದ ಸಮಸ್ಯೆ ತಲೆದೋರಿದೆ.ಬಿರು ಬೇಸಿಗೆ ಸೆಕೆಗೆ ಬಾಯಾರುವ ಪ್ರಾಣಿ ಪಕ್ಷಿಗಳುನೀರು ಹಾಗೂ ಆಹಾರ ಅರಸಿ ರೈತರ ಜಮೀನುಗಳಿಗೆ ನುಗ್ಗುತ್ತಿವೆ.

ಹೆಚ್ಚುತ್ತಿದೆ ಕಾಡುಹಂದಿಗಳ ಹಾವಳಿ: ಒಂದೆಡೆನವಿಲಿನ ಹಾವಳಿ ರೈತರನ್ನು ಕಂಗೆಡಿಸಿದ್ದರೆ ಮತ್ತೂಂದೆಡೆಕಾಡುಹಂದಿಗಳ ಹಾವಳಿಯೂ ಹೆಚ್ಚುತ್ತಿದೆ. ಅರಣ್ಯಕ್ಕೆಹೊಂದಿಕೊಂಡಿರುವ ಕಬ್ಬು, ಗೋಧಿ ಯಂತಹಬೆಳೆಗಳ ಹೊಲಕ್ಕೆ ಹೆಚ್ಚಾಗಿ ರಾತ್ರಿ ವೇಳೆ ನುಗ್ಗುವಕಾಡುಹಂದಿಗಳು ರೈತರ ಬೆಳೆಯನ್ನು ಮನಸೋಇಚ್ಛೆನಾಶಗೊಳಿಸುತ್ತಿವೆ. ಸಂಬಂಧಿ ಸಿದ ಅಧಿ ಕಾರಿಗಳು ಶೀಘ್ರವೇ ಪ್ರಾಣಿಗಳ ಹಾವಳಿಯಿಂದ ಮುಕ್ತಿ ನೀಡಿ ನಮ್ಮ ಬೆಳೆಗಳನ್ನು ಉಳಿಸಿಕೊಡಬೇಕು ಎಂಬುದು ಚೀಂಕಾರ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ರೈತರ ಆಗ್ರಹವಾಗಿದೆ.

ನಾವು ಸಾಲಸೋಲ ಮಾಡಿ ಹೊಲದಲಿ ಶೇಂಗಾ ಬೆಳೆದಿದ್ದೇವೆ.ಇಳುವರಿಯೂ ಚೆನ್ನಾಗಿಬಂದಿದೆ. ಆದರೆ, ನವಿಲುಗಳಹಾವಳಿಯಿಂದ ಬೆಳೆದ ಬೆಳೆ ಕೈಗೆ ಬರುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಪ್ರತಿದಿನ ಬೆಳಗ್ಗೆ ಹಾಗೂಸಂಜೆ ವೇಳೆ ಹೊಲಕ್ಕೆಹಿಂಡು ಹಿಂಡಾಗಿ ನುಗ್ಗುವನವಿಲುಗಳು ಶೇಂಗಾ ಬೆಳೆನಾಶಪಡಿಸುತ್ತಿವೆ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮ ಬೆಳೆಉಳಿಸಿಕೊಡಬೇಕು. – ಹೆಸರು ಹೇಳಲಿಚ್ಚಿಸದ ಹಲಗಲಿ ರೈತ

 ನವಿಲುಗಳ ಹಾವಳಿ ತಡೆಯುವ ಬಗ್ಗೆನಮ್ಮ ಮೇಲಧಿಕಾರಿಗಳಗಮನಕ್ಕೆ ತರುತ್ತೇನೆ.ರೈತರ ಹೊಲಗಳಲ್ಲಿ ಕಾಡುಪ್ರಾಣಿಗಳು ಹಾನಿಯುಂಟುಮಾಡಿದ್ದರೆ ಅವರಿಗೆಸಹಾಯಧನನೀಡಲಾಗುವುದು. ರೈತರು ತಮ್ಮ ಗದ್ದೆಯಲ್ಲಿ ಪ್ರಾಣಿಗಳಿಂದ ಬೆಳೆ ಹಾನಿಯಾಗಿದ್ದರೆ ನಮಗೆ ಮಾಹಿತಿ ನೀಡಿ ಪರಿಹಾರ ಪಡೆಯಬಹುದು.– ಲಿಂಗಾರೆಡ್ಡಿಮಂಕಣಿ, ಮುಧೋಳ ವಲಯ ಅರಣ್ಯಾಧಿಕಾರಿ

 

-ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

20-HDK

ನೆಹರೂ ಭಾವಚಿತ್ರ ಕೈ ಬಿಟ್ಟಿರುವುದು ಸಣ್ಣತನದ ರಾಜಕಾರಣ: ಎಚ್‌.ಡಿ.ಕೆ

ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ

ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ

ಸ್ವಾತಂತ್ರ್ಯ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿ: ಅಶೋಕ್‌

ಸ್ವಾತಂತ್ರ್ಯ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿ: ಅಶೋಕ್‌

19-HDK

ಆರೇಳು ತಿಂಗಳಲ್ಲಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ!

18-DKShi

ಸಿಎಂ ಇತಿಹಾಸದ ಸತ್ಯ ಎತ್ತಿ ಹಿಡಿಯಲಿ: ಡಿಕೆ ಶಿವಕುಮಾರ್‌

ರಾಜ್ಯದಲ್ಲಿಂದು 1,837 ಮಂದಿಗೆ ಕೋವಿಡ್ ಪಾಸಿಟಿವ್‌; ಮೂವರು ಸಾವು

ರಾಜ್ಯದಲ್ಲಿಂದು 1,837 ಮಂದಿಗೆ ಕೋವಿಡ್ ಪಾಸಿಟಿವ್‌; ಮೂವರು ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿಯಲ್ಲಿ ಮೊಳಗಿದ ಭಾರತ ಮಾತಾಕೀ ಜೈ ಘೋಷಣೆ: ಬೃಹತ್ ಬೈಕ್ ಜಾಥಾ

ರಬಕವಿ-ಬನಹಟ್ಟಿಯಲ್ಲಿ ಮೊಳಗಿದ ಭಾರತ ಮಾತಾಕೀ ಜೈ ಘೋಷಣೆ: ಬೃಹತ್ ಬೈಕ್ ಜಾಥಾ

6

ದೇಶಾಭಿಮಾನದಿಂದ ಬದಕನ್ನು ಕಟ್ಟಿಕೊಳ್ಳಬೇಕು: ಡಾ. ಮಹಾಂತೇಶ ಎಸ್. ಕಡಪಟ್ಟಿ

1

ಆ.15 ರಿಂದ ರಬಕವಿ ಮಲ್ಲಿಕಾರ್ಜುನ ದೇವರ ಐತಿಹಾಸಿಕ ಜಾತ್ರೆ

ಜಲಾವೃತಗೊಂಡ ಗೋವನಕೊಪ್ಪ ಹಳೆ ಸೇತುವೆ: ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಜಲಾವೃತಗೊಂಡ ಗೋವನಕೊಪ್ಪ ಹಳೆ ಸೇತುವೆ: ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಬಾದಾಮಿ ಬರಡು ಭೂಮಿಗೆ ಆಲಮಟ್ಟಿ ಹಿನ್ನೀರು!

ಬಾದಾಮಿ ಬರಡು ಭೂಮಿಗೆ ಆಲಮಟ್ಟಿ ಹಿನ್ನೀರು!

MUST WATCH

udayavani youtube

ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |

udayavani youtube

ಮರೆತುಹೋದ ಅಗೆಲು ಸೇವೆಯ ಪ್ರಸಾದದ ಊಟ ಮೂರು ದಿನವಾದ್ರೂ ಹಾಳಾಗಿರಲಿಲ್ಲ.. |ಕೊರಗಜ್ಜ ಸ್ವಾಮಿ

udayavani youtube

ಷೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ

udayavani youtube

ಉಬ್ಬು ಶಿಲ್ಪದಲ್ಲಿ ಅರಳಿದೆ ಅಮರ ಸುಳ್ಯ ಕ್ರಾಂತಿಯ ಚರಿತ್ರೆ

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

ಹೊಸ ಸೇರ್ಪಡೆ

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

20-HDK

ನೆಹರೂ ಭಾವಚಿತ್ರ ಕೈ ಬಿಟ್ಟಿರುವುದು ಸಣ್ಣತನದ ರಾಜಕಾರಣ: ಎಚ್‌.ಡಿ.ಕೆ

ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ

ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ

ಸ್ವಾತಂತ್ರ್ಯ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿ: ಅಶೋಕ್‌

ಸ್ವಾತಂತ್ರ್ಯ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿ: ಅಶೋಕ್‌

19-HDK

ಆರೇಳು ತಿಂಗಳಲ್ಲಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.