Udayavni Special

ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ


Team Udayavani, Nov 29, 2020, 10:22 AM IST

ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ :

ಬಾಗಲಕೋಟೆ: ಕುರುಬ ಸಮಾಜಕ್ಕೆ ಎಸ್.ಟಿ ಮೀಸಲು ಸೌಲಭ್ಯದ ನ್ಯಾಯ ಸಿಗಬೇಕು. ಇಲ್ಲದಿದ್ದರೆ ನಮ್ಮ ಸಮಾಜದ ಸಚಿವರು, ಶಾಸಕರು ಸಕಾ೯ರದಲ್ಲಿ ಮುಂದುವರೆಯುವ ಮತ್ತು ಬಿಡುವ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ ಎಂದು ಕನಕಗುರುಪೀಠದ ಹೊಸದುರ್ಗಶಾಖಾ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಗುಡುಗಿದ್ದಾರೆ

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಬೃಹತ್ ಎಸ್ ಟಿ ಹೋರಾಟ ಸಮಾವೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯ ದೂರ ಉಳಿದಿಲ್ಲ. ಸಿದ್ದರಾಮಯ್ಯ ಕುರುಬ ಎಸ್ ಟಿ ಸೇರ್ಪಡೆ ವಿರೋಧಿಯಲ್ಲ. ಅವರಿಗೂ ಒಪ್ಪಿಗೆ ಇದೆ, ಸಮಾವೇಶದಲ್ಲಿ ಮಾತ್ರ ಭಾಗವಹಿಸುತ್ತಿಲ್ಲ. ಒಪ್ಪಿಗೆ ಪಡೆದೆ ಈ ಸಮಾವೇಶ ಮಾಡ್ತಿದ್ದೇವೆ ಎಂದರು.

ಈಶ್ವರಪ್ಪ -ಸಿದ್ದರಾಮಯ್ಯ ಒಂದೇ ವಿಚಾರ ಇದೆ. ಇಬ್ಬರದ್ದು ವಿರುದ್ದ ದಿಕ್ಕಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯರಿಂದಲೂ ಎಸ್.ಟಿ‌ ಸೇರ್ಪಡೆಗೆ ಬೆಂಬಲ ಇದೆ ಎಂದು ಹೇಳಿದರು.

ಜನೇವರಿ 15ರಂದು ಕಾಗಿನೆಲೆಯಿಂದ ಬೆಂಗಳೂರವರೆಗೆ ಬೃಹತ್ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆ ಫೆ.7ಕ್ಕೆ ಬೆಂಗಳೂರಲ್ಲಿ ಸೇರಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಸಿದ್ದರಾಮಯ್ಯ -ಈಶ್ವರಪ್ಪ ಒಂದೇ ವೇದಿಕೆಯಲ್ಲಿ ತರಲು ಪ್ರಯತ್ನ ಮಾಡಿದೇವು. ಆದರೆ ಸಿದ್ದರಾಮಯ್ಯ ಬೆಂಬಲ ನೀಡಿ ಕಾರ್ಯಕ್ರಮದಿಂದ ಹಿಂದುಳಿದಿದ್ದಾರೆ. ಅವರ ಸಂಪೂರ್ಣ ಬೆಂಬಲ ಇದೆ. ಸಿದ್ದು ಸಿಎಂ ಆಗಿದ್ದಾಗ ನ್ಯಾಯ ಸಿಗಬಹುದಿತ್ತು. ಯಾಕೆ ಅಂತ ಗೊತ್ತಾಗಿಲ್ಲ. ಮೊಯ್ಲಿ, ಹೆಗಡೆ ಅವರು ಯಾರೂ ಮಾಡಲಿಲ್ಲ. ಆದರೆ ದೇವರಾಜ್ ಅರಸು ಸಹಾಯ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು ಎಂದು ಹೇಳಿದರು.

ಇದನ್ನೂ ಓದಿ:‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ’: ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ

ಎಸ್ ಟಿ ಸಮಾವೇಶ ಮೂಲಕ ಈಶ್ವರಪ್ಪ, ಪುತ್ರ ಕಾಂತೇಶ ಅವರನ್ನು ರಾಜಕೀಯವಾಗಿ ಮುನ್ನಲೆಗೆ ತರುವ ವಿಚಾರದಿಂದ ಮಾಡುತ್ತಿಲ್ಲ. ಇದರಲ್ಲಿ ಯಾರ ಹಿತಾಸಕ್ತಿಯೂ ಇಲ್ಲ. ಇಲ್ಲಿ ಒಂದೇ ಬೇಡಿಕೆ. ಬೇರೆ ಕಲ್ಪನೆ ನೀಡುವುದು ಬೇಡ ಎಂದರು.

ಯಾರನ್ನೂ ಮುನ್ನಲೆಗೆ ತರುವುದಲ್ಲ, ಕಾಂತೇಶ್ ರಾಜಕೀಯವಾಗಿ ತರುವುದೂ ಅಲ್ಲ. ಕುರುಬರಿಗೆ ಎಸ್ ಟಿ ಮೀಸಲಾತಿ ಸಿಗಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕರು, ಮಂತ್ರಿಗಳು ಸಮಾಜಕ್ಕಾಗಿ ಅಧಿಕಾರ ತ್ಯಾಗ ಮಾಡಬೇಕೆಂದರೆ ಮಾಡಲೇಬೇಕು. ಸಮಯ ಬಂದರೆ ನಮ್ಮ ಶಾಸಕರಿಗೂ ಅಧಿಕಾರ ತ್ಯಾಗಕ್ಕೆ ಹೇಳುತ್ತೇವೆ. ಖಂಡಿತ ಅಧಿಕಾರ ತ್ಯಾಗಕ್ಕೆ ಕೇಳಿಯೇ ಕೇಳುತ್ತೇವೆ ಎಂದರು.

ಕುರುಬ ಸಮಾಜದ ಎಚ್ ವಿಶ್ವನಾಥ, ಎಂಟಿಬಿ, ಆರ್ ಶಂಕರ್ ಗೆ ಸಚಿವ ಸ್ಥಾನ ನೀಡಬೇಕು. ಬಿಜೆಪಿ ಸರ್ಕಾರ ಬರಲು 4 ಜನ ಶಾಸಕರ ಪಾತ್ರ ಇದೆ. ಅವರು ಬಂದಿದ್ದರಿಂದ ಬಿಜೆಪಿ ಸಕಾ೯ರ ಬಂತು. ಮಾತು ಕೊಟ್ಟಂತೆ ಸಿಎಂ ನಡೆಯಬೇಕು. ನಡೆಯುತ್ತಾರೆನ್ನುವ ಭರವಸೆ ಇದೆ. ಎಚ್.ವಿಶ್ವನಾಥ, ಎಂಟಿಬಿ, ಆರ್.ಶಂಕರ್ ಮೂರು ಶಾಸಕರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಒತ್ತಾಯಿಸಿದರು.

ಸಚಿವ ಸ್ಥಾನ ಕೊಡದೆ ಹೋದರೆ ಯಾವ ತೀರ್ಮಾನ ಕೈಗೊಳ್ಳಬೇಕಾ ಅಂತ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

Untitled-1

ಹೇಗಿತ್ತು ಭಾರತದ ಮೊದಲ ಗಣರಾಜ್ಯೋತ್ಸವ ಸಂಭ್ರಮ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

Untitled-4

ಸಾಧಕರ ಸನ್ಮಾನಕ್ಕಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳ ಘೋಷಣೆ

ಸೋಲಿನಲ್ಲೂ ಗೆಲ್ಲುವುದಕ್ಕೆ ಬೇಕು ಅಪೂರ್ವ ಧೈರ್ಯ

ಸೋಲಿನಲ್ಲೂ ಗೆಲ್ಲುವುದಕ್ಕೆ ಬೇಕು ಅಪೂರ್ವ ಧೈರ್ಯ

ಖಾತೆ ಕಣ್ಣಾ ಮುಚ್ಚಾಲೆ

ಖಾತೆ ಕಣ್ಣಾ ಮುಚ್ಚಾಲೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

ಖಾತೆ ಕಣ್ಣಾ ಮುಚ್ಚಾಲೆ

ಖಾತೆ ಕಣ್ಣಾ ಮುಚ್ಚಾಲೆ

ಐಎಸ್‌ಡಿಗೆ ಕ್ರಾವ್‌ ಮಾಗಾ ಬಲ

ಐಎಸ್‌ಡಿಗೆ ಕ್ರಾವ್‌ ಮಾಗಾ ಬಲ

ಜನತಾ ಪರಿವಾರ ಒಗ್ಗೂಡಿಸಲು  “ಘರ್‌ ವಾಪ್ಸಿ’:  ಹೊರಟ್ಟಿ

ಜನತಾ ಪರಿವಾರ ಒಗ್ಗೂಡಿಸಲು “ಘರ್‌ ವಾಪ್ಸಿ’: ಹೊರಟ್ಟಿ

MUST WATCH

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

ಹೊಸ ಸೇರ್ಪಡೆ

ಸೆನ್ಸೆಕ್ಸ್‌ 531 ಅಂಕ ಕುಸಿತ

ಸೆನ್ಸೆಕ್ಸ್‌ 531 ಅಂಕ ಕುಸಿತ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಬಾಂಗ್ಲಾದೇಶ 3-0 ವಿಕ್ರಮ

ಬಾಂಗ್ಲಾದೇಶ 3-0 ವಿಕ್ರಮ

Untitled-1

ಹೇಗಿತ್ತು ಭಾರತದ ಮೊದಲ ಗಣರಾಜ್ಯೋತ್ಸವ ಸಂಭ್ರಮ

ಲಾಕ್‌ಡೌನ್‌ ವೇಳೆ  ಅಂಬಾನಿ ಆದಾಯ ಗಂಟೆಗೆ 90 ಕೋಟಿ!

ಲಾಕ್‌ಡೌನ್‌ ವೇಳೆ  ಅಂಬಾನಿ ಆದಾಯ ಗಂಟೆಗೆ 90 ಕೋಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.