ಕನ್ನಡ ಈ ನೆಲದ ಅಸ್ಮಿತೆ: ಸಾಹಿತ್ಯ ಪರಿಷತ್ ಅಧ್ಯಕ್ಷ ಮ. ಕೃ.ಮೇಗಾಡಿ

Team Udayavani, Feb 28, 2024, 4:42 PM IST

ಕನ್ನಡ ಈ ನೆಲದ ಅಸ್ಮಿತೆ:ಸಾಹಿತ್ಯ ಪರಿಷತ್ ಅಧ್ಯಕ್ಷ ಮ. ಕೃ.ಮೇಗಾಡಿ

ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: ಕನ್ನಡ ಈ ನೆಲದ ಆಸ್ಮಿತೆಯಾಗಿದ್ದು, ಭಾವನೆಗಳ ಅಭಿವ್ಯಕ್ತಿ ಸೇರಿದಂತೆ ನವರಸಗಳಿಂದಾವೃತ
ಮೇರು ಕೃತಿಗಳಾಗಿವೆ ಎಂದು ರಬಕವಿ-ಬನಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ. ಕೃ. ಮೇಗಾಡಿ ಹೇಳಿದರು.

ಅವರು ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ಆಗಮಿಸಿದ ಕನ್ನಡ ಜ್ಯೋತಿ ಹೊತ್ತ ರಥಕ್ಕೆ ಪೂಜೆ ಸಲ್ಲಿಸಿ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾಷೆ ಆಯಾ ಪ್ರದೇಶಗಳ ಜನರ ಒತ್ತಾಸೆ ಮತ್ತು ಅಭಿಮಾನದಿಂದ ಅಮರತ್ವ ಹೊಂದುತ್ತದೆ ಎಂದರು. ಈ ಸಂದರ್ಭದಲ್ಲಿ ಮಕ್ಕಳು ನಾಡಿನ ವೀರ ಪುರುಷರ, ವನಿತೆಯರ ವೇಷ-ಭೂಷಣಗಳನ್ನು ತೊಟ್ಟು ಗಮನಸೆಳೆದರು. ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಚೇರಮನ್ನರಾದ ಮಲ್ಲಿಕಾರ್ಜುನ ತುಂಗಳ, ಪ್ರಶಾಂತ ಕೊಳಕಿ, ಕಿರಣ ಆಳಗಿ, ಮಹಾಶಾಂತ ಶೆಟ್ಟಿ, ಶಂಕರ ಜುಂಜಪ್ಪನವರ, ಕನ್ನಡ ಯುವಕ ಸಂಘದ ಅಶೋಕ ವಸ್ತ್ರದ, ಪ್ರಭು ಗುಣಕಿ, ಸದಾಶಿವ ಗೋಂದಕರ, ಸುರೇಶ ಬಾಗೇವಾಡಿ, ಮುತ್ತಣ್ಣಾ ಚೌಡಕಿ, ಸದಾಶಿವ ಕುಂಬಾರ, ಗಂಗಾಧರ ಮೋಪಗಾರ, ಬಾಬು ಚನಾಳ, ಚಂದ್ರಶೇಖರ ಮಿರ್ಜಿ, ಮಲ್ಲಪ್ಪ ಹನಗಂಡಿ ಸೇರಿದಂತೆ ಅನೇಕರು ಇದ್ದರು.

ಮಹಾಲಿಂಗಪುರದಲ್ಲಿ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ರಾಜ್ಯ ಸರ್ಕಾರದಿಂದ ಹಮ್ಮಿಕೊಂಡಿರುವ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆಗೆ ಪುರಸಭೆ ಅಧಿಕಾರಿಗಳು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರು, ಶಾಲಾ ಮಕ್ಕಳು ಅದ್ಧೂರಿಯಾಗಿ ಸ್ವಾಗತಿಸಿದರು.

ಪಟ್ಟಣದ ಹೆಸ್ಕಾಂ ಗಣಪತಿ ದೇವಸ್ಥಾನ ಮುಂದೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರು ನಾಡದೇವಿ ಭುವನೇಶ್ವರಿ ಮೂರ್ತಿಗೆ ಮಾರ್ಲಾಪಣೆ ಮತ್ತು ಪುಷ್ಪವೃಷ್ಟಿಯ ಮೂಲಕ ಸ್ವಾಗತಿಸಿದರು.

ಮೆರವಣಿಗೆಯಲ್ಲಿ ಸಂಗಾನಟ್ಟಿ ಹಲಗೆಮೇಳ ಮತ್ತು ಮಹಾಲಿಂಗಪುರ ಕರಡಿ ಕಲಾವಿದರು, ಗೊಂಬೆ ಕುಣಿತದ ಕಲಾವಿದರು, ಪುರಸಭೆ ಸದಸ್ಯರು, ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು, ಸಾಹಿತಿಗಳು, ಸಾರ್ವಜನಿಕರು, ಪತ್ರಕರ್ತರು ಭಾಗವಹಿಸಿದ್ದರು. ಪಟ್ಟಣದ ಚನ್ನಮ್ಮ ವೃತ್ತ, ಗಾಂಧಿ  ವೃತ್ತ, ಅಂಬೇಡ್ಕರ್‌ ವೃತ್ತ, ಪುರಸಭೆ ಮಾರ್ಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕರ್ನಾಟಕ ಜ್ಯೋತಿ ರಥಯಾತ್ರೆಯ ಮೆರವಣಿಗೆ ನಡೆಸಲಾಯಿತು.

ಸಿಆರ್‌ಪಿ ಎಸ್‌. ಎನ್‌.ಬ್ಯಾಳಿ, ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್‌.ಗೊಂಬಿ, ಸಪನಾ ಅನಿಗೋಳ, ವೀರೇಶ ಆಸಂಗಿ, ಅರವಿಂದ ಹೂಗಾರ, ಶಿವಾನಂದ ಮೆಳವಂಕಿ, ಚನಮಲ್ಲ ಕರಡಿ, ಸುವರ್ಣಾ ಆಸಂಗಿ, ರಾಜೇಶ ಭಾವಿಕಟ್ಟಿ, ಶ್ರೀನಿವಾಸ ಕಾಂಬಳೇಕರ, ಜಗದೀಶ ಪಾಟೀಲ, ವೈ.ವೈ.ಗಜ್ಜನ್ನವರ, ಲೋಕೇಶ ಹುಕುಮನವರ, ಪುರಸಭೆ ಅಧಿಕಾರಿಗಳಾದ ಎಸ್‌.ಎನ್‌.ಪಾಟೀಲ,
ವ್ಹಿ.ಜಿ.ಕುಲರ್ಣಿ, ಸಿದ್ದು ಅಳ್ಳಿಮಟ್ಟಿ, ಮಹಾಲಿಂಗ ಮೂಗಳಖೋಡ, ರಾಜು ಹೂಗಾರ, ಸಿ.ಎಸ್‌.ಮಠಪತಿ, ಬಿ.ವೈ. ಮರದಿ, ಎಂ.ಕೆ.ದಳವಾಯಿ, ರವಿ ಹಲಸಪ್ಪಗೋಳ, ಚನ್ನಮ್ಮ ಪಟ್ಟಣಶೆಟ್ಟಿ, ಪ್ರೀತಿ ಹುಲಕುಂದ, ರಾಜೇಶ್ವರಿ ಸೋರಗಾಂವಿ, ರಾಮು ಮಾಂಗ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಜಯಪುರ: ಕಡಿಮೆ ವೆಚ್ಚದಲ್ಲಿ ಐವಿಎಫ್ ಚಿಕಿತ್ಸೆ: ಡಾ|ವರ್ಷಾ

ವಿಜಯಪುರ: ಕಡಿಮೆ ವೆಚ್ಚದಲ್ಲಿ ಐವಿಎಫ್ ಚಿಕಿತ್ಸೆ: ಡಾ|ವರ್ಷಾ

Rabkavi Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !

ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

11-yellapur

Yellapur: ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಪಾರು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.