ಕುಂಬಾರಹಳ್ಳದಲ್ಲಿ ಚಿರತೆ ಪ್ರತ್ಯಕ್ಷ
Team Udayavani, May 30, 2021, 5:39 PM IST
ಜಮಖಂಡಿ: ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿಂಗಪ್ಪ ಹೆಗಡೆ ಅವರ ತೋಟದಲ್ಲಿ ಶುಕ್ರವಾರ ಮಧ್ಯರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ತೋಟದ ಕಬ್ಬು ಬೆಳೆದ ಪ್ರದೇಶದಲ್ಲಿ ಸಾಕಿದ ನಾಯಿಯನ್ನು ತಿಂದ ಘಟನೆ ನಡೆದಿದೆ.
ಜಿಲ್ಲಾ ಅರಣ್ಯಾಧಿಕಾರಿಗಳು ತೋಟದ ಮಾಲೀಕರ ಮನೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದೊಡ್ಡದಾದ ಚಿರತೆ ಪ್ರತ್ಯಕ್ಷಗೊಂಡು ನಾಯಿಯನ್ನು ತಿನ್ನುತ್ತಿರುವ ದೃಶ್ಯ ಸೆರೆಯಾಗಿವೆ.
ವಿಜಯಪುರ, ಬೀಳಗಿ, ಬಾಗಲಕೋಟೆ ಮತ್ತು ಗೋಕಾಕ ತಾಲೂಕಿನ ಅರಣಾಧಿ ಕಾರಿಗಳು ಚಿರತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
4 ತಂಡಗಳ ಮೂಲಕ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿದೆ. ಕಾರ್ಯಾಚರಣೆಯಲ್ಲಿ ಪರಿಣಿತ ತಜ್ಞರು, ಅರವಳಿಕೆ ತಜ್ಞರು ಸಹಿತ ನಾಲ್ಕು ಸ್ಥಳಗಳಲ್ಲಿ ಬೋನ್ ಇರಿಸಲಾಗಿದೆ.
ಕುಂಬಾರಹಳ್ಳ ಗ್ರಾಮದ ತೋಟದ ಜನತೆ ಭಯ ಭೀತರಾಗಿದ್ದು, ಗ್ರಾಮಸ್ಥರು ಮನೆಯಲ್ಲಿ ಇರಬೇಕು. ಚಿರತೆಯನ್ನು ಶೀಘ್ರ ಸೆರೆ ಹಿಡಿಯಲಾಗುವುದು ಎಂದು ಅರಣ್ಯಾಧಿ ಕಾರಿಗಳು ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್
ನಾನು ಟ್ವೀಟ್ ಮಾಡುವುದೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ : ಶಶಿ ತರೂರ್
ಸಾಗರ: ಜು. 10 ರಂದು ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ
ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?
ನವದೆಹಲಿ: 12 ನೇ ತರಗತಿ ವಿದ್ಯಾರ್ಥಿನಿಗೆ ಸಾರ್ವಜನಿಕವಾಗಿ ಇರಿದ ಯುವಕ