ಇಂದಿನಿಂದ ಸಂತ ಸಾಹಿತ್ಯ ಅಧ್ಯಯನ ಶಿಬಿರ

ಶಿವಯೋಗ ಮಂದಿರದಲ್ಲಿ 5 ದಿನಗಳ ಕಾಲ ಆಯೋಜನೆ ; ಹಲವು ಗೋಷ್ಠಿ; ಸಂತ ಪರಂಪರೆ ಬಗ್ಗೆ ಚರ್ಚೆ

Team Udayavani, Jul 28, 2022, 5:47 PM IST

17

ಬಾದಾಮಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಶಿವಯೋಗ ಮಂದಿರದ ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ ಸಹಯೋಗದಲ್ಲಿ ಜು.28ರಿಂದ ಆ.1ರವರೆಗೆ 5 ದಿನಗಳ ಕಾಲ ಸಂತ ಸಾಹಿತ್ಯ ಅಧ್ಯಯನ ಶಿಬಿರವನ್ನು ಸುಕ್ಷೇತ್ರ ಶಿವಯೋಗ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕಮ್ಮಟದ ನಿರ್ದೇಶಕ ಡಾ| ಕರಿಯಪ್ಪ ಮಾಳಿಗೆ ಹೇಳಿದರು.

ಪಟ್ಟಣದ ಕಾನಿಪ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಯೋಗ ಮಂದಿರ ಸಂಸ್ಥೆ ಅಧ್ಯಕ್ಷ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ, ಹೊಸಪೇಟಿ-ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸುವರು.

ಹಿರಿಯ ಸಾಹಿತಿ ಪ್ರೊ| ಕೆ.ಜಿ. ನಾಗರಾಜಪ್ಪ ರಾಜ್ಯಮಟ್ಟದ ಶಿಬಿರ ಉದ್ಘಾಟಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಕಮ್ಮಟದ ಡಾ| ಕರಿಯಪ್ಪ ಮಾಳಿಗೆ, ಡಾ| ಎ. ರಘುರಾಂ, ಡಾ| ಶೀಲಾದಾಸ್‌ ಹಾಗೂ ಸದಸ್ಯ ಸಂಚಾಲಕರಾಗಿ ಡಾ| ಬಿ.ಎಂ. ಶರಭೇಂದ್ರಸ್ವಾಮಿ, ಮಾರುತಿ ಕಟ್ಟಿಮನಿ ಕಾರ್ಯನಿರ್ವಹಿಸಲಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಎನ್‌. ಉಪಸ್ಥಿತರಿರುವರು. ನಿರ್ದೇಶಕರಾಗಿ ಮೊದಲನೇ ದಿನ “ಕರ್ನಾಟಕದ ಸಂತರು’ ವಿಷಯ ಕುರಿತು ಡಾ| ಬಸವರಾಜ ಕೊಡಗುಂಟಿ, “ಭಾರತದ ಸಂತರು 1′ ಬಗ್ಗೆ ಅರುಣಕುಮಾರ್‌ ಬಿ.ವಿ ಹಾಗೂ ಸಂತರ ಬಗ್ಗೆ ಬಂದಿರುವ ಸಾಹಿತ್ಯ ಕುರಿತು ಡಾ| ಎಫ್‌.ಟಿ. ಹಳ್ಳಿಕೇರಿ ಮಾತನಾಡಲಿದ್ದಾರೆ ಎಂದರು.

ಎರಡನೇ ದಿನದ ಗೋಷ್ಠಿಗಳಲ್ಲಿ ಸಂತರು ಬರೆದಿರುವ ಸಾಹಿತ್ಯ ಕುರಿತು ಡಾ| ಬಿ. ಗಂಗಾಧರ, ಉತ್ತರ ಕರ್ನಾಟಕದಲ್ಲಿ ಸಂತ ಪರಂಪರೆ ಬಗ್ಗೆ ಡಾ| ವಾಲಿ.ಎ.ಸಿ, ಕರ್ನಾಟಕದ ಬಯಲು ಸೀಮೆಯಲ್ಲಿ ಸಂತ ಪರಂಪರೆ ಬಗ್ಗೆ ಡಾ| ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಲಿದ್ದಾರೆ. ಮೂರನೇ ದಿನದ ಗೋಷ್ಠಿಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಸಂತ ಸಾಹಿತ್ಯ ಕುರಿತು ಡಾ| ಕಾತ್ಯಾಯಿನಿ ಕುಂಜಿಬೆಟ್ಟು, ಕಲ್ಯಾಣ ಕರ್ನಾಟಕದಲ್ಲಿ ಸಂತ ಪರಂಪರೆ ಬಗ್ಗೆ ಡಾ| ಅಮರೇಶ ನುಗಡೋಣಿ, ಶಿವಯೋಗ ಮಂದಿರ ಸಂಸ್ಥೆ ಪರಂಪರೆ ಕುರಿತು ಡಾ| ಜಿ.ಜಿ. ಹಿರೇಮಠ ವಿಚಾರ ಮಂಡಿಸಲಿದ್ದಾರೆ. ಇವುಗಳ ಜೊತೆಗೆ ವಿವಿಧ ವಿಷಯಗಳ ಬಗ್ಗೆ ಶಿಬಿರಾರ್ಥಿಗಳಿಂದ ಪ್ರಬಂಧ ಮಂಡನೆ-ಚರ್ಚೆ ನಡೆಯಲಿದೆ. ಕಮ್ಮಟದ ನಿರ್ದೇಶಕರು ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ತರಗತಿ ನಡೆಸಲಿದ್ದಾರೆ ಎಂದರು.

ನಾಲ್ಕನೇ ದಿನದ ಗೋಷ್ಠಿಗಳಲ್ಲಿ ಮಲೆನಾಡು ಕರ್ನಾಟಕದ ಸಂತ ಪರಂಪರೆ ಕುರಿತು ಜಿ.ಬಿ. ಚನ್ನೇಶ್‌ ಹೊನ್ನಾಳಿ, ಸಿದ್ಧ, ನಾಥ, ಜೋಗಿ- ಪರಂಪರೆ ಕುರಿತು ಕೆಳಗಿನಮನಿ, ಅವಧೂತ, ಆರೂಢ ಪರಂಪರೆ ಕುರಿತು ಡಾ| ಕರಿಯಪ್ಪ ಮಾಳಿಗೆ, ಸೂಫಿಗಳು, ಶರಣರು ಕುರಿತು ಡಾ| ಎ. ರಘುರಾಂ ವಿಚಾರ ಮಂಡಿಸಲಿದ್ದಾರೆ. ಐದನೇ ದಿನದ ಗೋಷ್ಠಿಗಳಲ್ಲಿ ದಾಸರು, ತತ್ವಪದಕಾರರು ವಿಷಯದ ಬಗ್ಗೆ ಡಾ| ಶೀಲಾದಾಸ್‌, ದಕ್ಷಿಣ ಕರ್ನಾಟಕದಲ್ಲಿ ಸಂತ ಪರಂಪರೆ ಕುರಿತು ಡಾ| ಮೈಲಹಳ್ಳಿ ರೇವಣ್ಣ ಅವರು ವಿಚಾರ ಮಂಡಿಸಲಿದ್ದಾರೆ.

ನಾಲ್ಕು ದಿನಗಳು ಶಿಬಿರಾರ್ಥಿಗಳಿಗೆ ಯೋಗ-ಧ್ಯಾನ ಕುರಿತು ಯೋಗ ತರಬೇತುದಾರ ಕಾರ್ತಿಕ್‌ ಬೆಲ್ಲದ್‌ ತರಬೇತಿ ನೀಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ| ರಘುರಾಮ, ಕುಮಾರ ಯಡಪ್ಪನವರ, ಸೈಯದ ಜಾವೇದ್‌ ಇತರರಿದ್ದರು. ಆ.1ರಂದು ಸಮಾರೋಪ ಆ.1ರಂದು ಮಧ್ಯಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷ ಶ್ರೀ ಸದಾಶಿವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಡಾ| ಮೈಲಹಳ್ಳಿ ರೇವಣ್ಣ ಸಮಾರೋಪ ನುಡಿಯಾಡಲಿದ್ದಾರೆ.

ಈ ಸಂದರ್ಭದಲ್ಲಿ ಡಾ| ಕರಿಯಪ್ಪ ಮಾಳಿಗೆ, ಡಾ| ಎ. ರಘುರಾಂ, ಡಾ| ಶೀಲಾದಾಸ್‌, ಸದಸ್ಯ ಸಂಚಾಲಕ ಡಾ| ಬಿ.ಎಂ. ಶರಭೇಂದ್ರಸ್ವಾಮಿ, ಮಾರುತಿ ಕಟ್ಟಿಮನಿ, ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಎನ್‌. ಉಪಸ್ಥಿತರಿರಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಮ್ಮಟದ ನಿರ್ದೇಶಕ ಡಾ| ಕರಿಯಪ್ಪ ಮಾಳಿಗೆ ತಿಳಿಸಿದರು.

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.