ಜಿಲ್ಲಾಡಳಿತಕ್ಕೆ ಹೆಗಲಾದ ಚರಂತಿಮಠ-ಬಿವಿವಿ ಸಂಘ

|500 ಹಾಸಿಗೆಯ ಪ್ರತ್ಯೇಕ ಕೋವಿಡ್‌ ಚಿಕಿತ್ಸೆ ಕೇಂದ್ರ | ಹಳ್ಳಿಯತ್ತ 100ಕ್ಕೂ ಹೆಚ್ಚು ವೈದ್ಯರು-ಹಿರಿಯ ಶುಶ್ರೂಕಿಯರ ತಂಡ

Team Udayavani, May 25, 2021, 6:00 PM IST

24 bgk-1a

ವರದಿ : ­ಶ್ರೀಶೈಲ ಕೆ.ಬಿರಾದಾರ

ಬಾಗಲಕೋಟೆ: ಕೊರೊನಾ ಅಲೆಯ ಸಂಕಷ್ಟ ಎದುರಿಸಲು ಇಲ್ಲಿನ ಜಿಲ್ಲಾ ಕೇಂದ್ರ ಬಾಗಲಕೋಟೆಯ ಶಾಸಕರೂ ಆಗಿರುವ ಬಿವಿವಿ ಸಂಘದ ಡಾ|ವೀರಣ್ಣ ಚರಂತಿಮಠ ಹಾಗೂ ಪ್ರತಿಷ್ಠಿತ ಬಿವಿವಿ ಸಂಘ, ಜಿಲ್ಲಾಡಳಿತಕ್ಕೆ ಹೆಗಲಿಗೆ ಹೆಗಲು ಕೊಟ್ಟು ಸೇವೆಗೆ ಮುಂದಾಗಿದೆ.

ಹೌದು. ಜಿಲ್ಲಾಸ್ಪತ್ರೆಯಲ್ಲಿ 23 ಜನ ತಜ್ಞ ವೈದ್ಯರು ಹಾಗೂ 450 ಬೆಡ್‌ಗಳ ವ್ಯವಸ್ಥೆ ಇದ್ದು, ಇದು ಸಂಪೂರ್ಣ ಕೊರೊನಾ ಚಿಕಿತ್ಸೆಗೆ ಮೀಸಲಾಗಿದೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಕೊರತೆ ಎದುರಾದಾಗ ತಕ್ಷಣ ಸ್ಪಂದಿಸಿದ್ದು ಕುಮಾರೇಶ್ವರ ಆಸ್ಪತ್ರೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಹೊರತುಪಡಿಸಿ ಉಳಿದೆಲ್ಲ ರೋಗಕ್ಕೆ ನೀಡುತ್ತಿದ್ದ ಚಿಕಿತ್ಸೆಯನ್ನು ಕುಮಾರೇಶ್ವರ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.

ವೈದ್ಯರ ಎರವಲು ಸೇವೆ: ಕುಮಾರೇಶ್ವರ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್‌ ಚಿಕಿತ್ಸೆ ಕೇಂದ್ರ ಆರಂಭಿಸಿ, ನೂರಾರು ವೈದ್ಯರು ಸೇವೆ ನೀಡುತ್ತಿದ್ದಾರೆ. ಇದರ ಜತೆಗೆ ಕೊರೊನೇತರ ರೋಗಕ್ಕೆ ಚಿಕಿತ್ಸೆ ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಮುಖ್ಯವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗಾಗಿ ಬೇಕಾಗಿದ್ದ ಮೈಕ್ರೋ ಬಯೋಲಾಜಿಸ್ಟ್‌ ತಜ್ಞ ವೈದ್ಯರ ಕೊರತೆ ಇತ್ತು. ಈ ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ ಕುಮಾರೇಶ್ವರ ಆಸ್ಪತ್ರೆಯಲ್ಲಿದ್ದ ಮೈಕ್ರೋ ಬಯೋಲಾಜಿಸ್ಟ್‌ ತಜ್ಞ ವೈದ್ಯರೊಬ್ಬರನ್ನು ಜಿಲ್ಲಾ ಆಸ್ಪತ್ರೆಯ ಕೊರೊನಾ ತಪಾಸಣೆ ವಿಭಾಗಕ್ಕೆ ನಿಯೋಜನೆ ಮಾಡಿದ್ದಾರೆ. ವೇತನವನ್ನು ಬಿವಿವಿ ಸಂಘದಿಂದ ನೀಡಿದರೂ, ಸೇವೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಸಲ್ಲಿಸಿ ಬಡ ಜನ ರೋಗಿಗಳಿಗೆ ಅನುಕೂಲ ಕಲ್ಪಿಸಲು ಡಾ|ಚರಂತಿಮಠರು ದಿಟ್ಟ ನಿಲುವು ಕೈಗೊಂಡಿದ್ದಾರೆ.

ಹಳ್ಳಿಗಳಿಗೆ ದೌಡಾಯಿಸಿದ ವೈದ್ಯರ ತಂಡ: ಮೊದಮೊದಲು ನಗರಕ್ಕೆ ಸಿಮೀತವಾಗಿದ್ದ ಕೊರೊನಾ ಸೋಂಕು ಇದೀಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣವೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು ಆಗಿತ್ತು. ಈ ಸಂದರ್ಭದಲ್ಲೂ ಚರಂತಿಮಠ ನೇತೃತ್ವದ ಕುಮಾರೇಶ್ವರ ಆಸ್ಪತ್ರೆಯ ವೈದ್ಯರ ತಂಡ ಜಿಲ್ಲಾಡಳಿತಕ್ಕೆ ಹೆಗಲು ಕೊಟ್ಟಿದೆ. ಎಸ್‌. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪೂರ್ಣಗೊಳಿಸಿದ 100ಕ್ಕೂ ಹೆಚ್ಚು ವೈದ್ಯರು, ತಲಾ ಇಬ್ಬರು ವೈದ್ಯರು-ಹಿರಿಯ ಶುಶ್ರೂಕಿಯರ ತಂಡ ರಚಿಸಿದ್ದು, ಈ ತಂಡ ಪ್ರತಿ ಹಳ್ಳಿ ಹಳ್ಳಿಯ ಮನೆ ಮನೆಗೆ ತೆರಳಿ ಸೋಂಕಿತರ ಸರ್ವೇ ನಡೆಸುತ್ತಿದ್ದಾರೆ.

ಜತೆಗೆ ಪ್ರತಿಯೊಂದು ಮನೆಯಲ್ಲಿ ಇರುವ ವ್ಯಕ್ತಿಗಳ ವಿವರ, ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದರೆ ಅವರ ವಿವರ ದಾಖಲಿಸುವ ಜತೆಗೆ ಸೋಂಕಿನ ಲಕ್ಷಣಗಳಿದ್ದರೆ ಅವರಿಗೆ ಅಗತ್ಯ ಚಿಕಿತ್ಸೆ ಪಡೆಯಲು ನಿರ್ದೇಶನ ಕೂಡ ನೀಡುತ್ತಿದ್ದಾರೆ. ಇದು ಜಿಲ್ಲಾಡಳಿತದ ಕಾರ್ಯಕ್ಕೆ ಬಹುದೊಡ್ಡ ಹೆಗಲು ಕೊಟ್ಟಂತಾಗಿದೆ.

ಟಾಪ್ ನ್ಯೂಸ್

ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!

ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್‌ಗೆ ಶೋಕಾಸ್ ನೋಟಿಸ್

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್‌ಗೆ ಶೋಕಾಸ್ ನೋಟಿಸ್

BCCI announces India’s squad for 3 match T20 and ODI series vs England

ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಸವಾಲಿನ ಟೆಸ್ಟ್‌

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಸವಾಲಿನ ಟೆಸ್ಟ್‌

ರಾಷ್ಟ್ರಪತಿ ಚುನಾವಣೆ: ಮುರ್ಮು, ಸಿನ್ಹಾ ನಾಮಪತ್ರ ಸ್ವೀಕೃತ

ರಾಷ್ಟ್ರಪತಿ ಚುನಾವಣೆ: ಮುರ್ಮು, ಸಿನ್ಹಾ ನಾಮಪತ್ರ ಸ್ವೀಕೃತ

astro

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಆತಂಕ ಬೇಡ; ರೂಪಾಯಿ ಸ್ಥಿತಿ ಉತ್ತಮ: ವಿತ್ತ ಸಚಿವೆ

ಆತಂಕ ಬೇಡ; ರೂಪಾಯಿ ಸ್ಥಿತಿ ಉತ್ತಮ: ವಿತ್ತ ಸಚಿವೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ

8

ಸ್ವಯಂ ಬೆಳೆ ಸಮೀಕ್ಷೆ ಕಾರ್ಯಕ್ಕೆ ಕಳಸದ ಚಾಲನೆ

7

ಪೊಲೀಸ್‌ ಭವನದೆದುರು ನಳನಳಿಸುತ್ತಿದೆ ಹಸಿರು

6

ಬಿಜೆಪಿ ಸೇದಿ ಎಸೆದ ಬೀಡಿ ಇದ್ದಂತೆ: ಇಬ್ರಾಹಿಂ

news banahatti

ಬನಹಟ್ಟಿಯಲ್ಲಿ ಉಡುಪು ಕಳ್ಳತನ: ವಿಚಿತ್ರ ವ್ಯಕ್ತಿ ಆಕಾರ ನೋಡಿ ಬೆಚ್ಚಿ ಬಿದ್ದ ಜನತೆ..!

MUST WATCH

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

udayavani youtube

ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

udayavani youtube

ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ

udayavani youtube

ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

ಹೊಸ ಸೇರ್ಪಡೆ

ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!

ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್‌ಗೆ ಶೋಕಾಸ್ ನೋಟಿಸ್

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್‌ಗೆ ಶೋಕಾಸ್ ನೋಟಿಸ್

BCCI announces India’s squad for 3 match T20 and ODI series vs England

ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಸವಾಲಿನ ಟೆಸ್ಟ್‌

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಸವಾಲಿನ ಟೆಸ್ಟ್‌

ರಾಷ್ಟ್ರಪತಿ ಚುನಾವಣೆ: ಮುರ್ಮು, ಸಿನ್ಹಾ ನಾಮಪತ್ರ ಸ್ವೀಕೃತ

ರಾಷ್ಟ್ರಪತಿ ಚುನಾವಣೆ: ಮುರ್ಮು, ಸಿನ್ಹಾ ನಾಮಪತ್ರ ಸ್ವೀಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.