Mudhol ವಿವಿಧ ಪ್ರಕರಣ; ಲಕ್ಷಾಂತರ ಮೌಲ್ಯದ ವಸ್ತು ವಶ; ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಸಿಬ್ಬಂದಿಗೆ ಡಿವೈಎಸ್ಪಿ ಬಹುಮಾನ ಘೋಷಣೆ

Team Udayavani, Aug 16, 2023, 8:12 PM IST

Mudhol ವಿವಿಧ ಪ್ರಕರಣ; ಲಕ್ಷಾಂತರ ಮೌಲ್ಯದ ವಸ್ತು ವಶ; ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಮುಧೋಳ: ವಿವಿಧ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ನಗರದ ಪೊಲೀಸರು ಬರೋಬ್ಬರಿ 24,58,400 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿವೈಎಸ್ಪಿ ಶಾಂತವೀರ ಈ. ತಿಳಿಸಿದರು.
ನಗರದ ಆರಕ್ಷಕ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾಹಿತಿ ಹಂಚಿಕೊಂಡರು.

ಸಕ್ಕರೆ ಲಾರಿ ವಶ: ನಿರಾಣಿ ಕಾರ್ಖಾನೆಯಲ್ಲಿನ ಸಕ್ಕರೆ ತುಂಬಿಕೊಂಡು ನಿಗದಿತ ಸ್ಥಳಕ್ಕೆ ಸಾಗಿಸದೆ ಚಾಲಕ ಸಕ್ಕರೆಯನ್ನು ಬೇರೆಡೆ ಸಾಗಿಸಿದ್ದ. ಈ ಬಗ್ಗೆ ಕೆಲ ದಿನಗಳ ಹಿಂದೆ ನಗರದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಹಾವೇರಿ ಜಿಲ್ಲೆಯ ಶಿಶುವಿನಾಳ ಗ್ರಾಮದ ವಿಜಯ ದಳವಾಯಿ, ಧಾರವಾಡ ಜಿಲ್ಲೆಯ ಯಲಿವಾಳ ಗ್ರಾಮದ ಸತೀಶ ಚಂದ್ರಶೇಖರಗೌಡ ಪಾಟೀಲ, ಹಾವೇರಿ ಜಿಲ್ಲೆಯ ದೇವಗಿರಿಯ ದೇವರಾಜ ಕಟ್ಲಾವರ ಹಾಗೂ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಮಹ್ಮದಅಲಿ ಅಗಸಿಬಾಗಿಲ ಅವರನ್ನು ಬಂ ಧಿಸಿದ್ದಾರೆ. ಬಂಧಿತರಿಂದ ಅಂದಾಜು 10,83,600 ಮೌಲ್ಯದ 600 ಸಕ್ಕರೆ ತುಂಬಿದ ಬ್ಯಾಗ್‌ ಹಾಗೂ 10 ಲಕ್ಷ ರೂ. ಮೌಲ್ಯದ ಲಾರಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಚಿನ್ನಾಭರಣ ವಶ: ತಾಲೂಕಿನ ಸೋರಗಾಂವ ಗ್ರಾಮದ ಭಾಗವ್ವ ಯರಗುದ್ರಿ ಅವರ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಕೇವಲ 24 ಗಂಟೆಗಳ ಹಿಂದೆ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂ ಧಿಸಿದಂತೆ ಪದ್ಮಾ ಹುಲಗನ್ನವರ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 2,54,800 ರೂ. ಮೌಲ್ಯದ 67 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

14 ಮೊಬೈಲ್‌ ಪತ್ತೆ: ಪೊಲೀಸ್‌ ಇಲಾಖೆ ಇತ್ತೀಚೆಗೆ ಪರಿಚಯಿಸಿದ ಸಿಈಐ ಪೋರ್ಟಲ್‌ ನೆರವಿನಿಂದ 1,20,000 ರೂ. ಮೌಲ್ಯದ ಒಟ್ಟು 14 ಮೊಬೈಲ್‌ ವಶಪಡಿಸಿಕೊಂಡು ಮೊಬೈಲ್‌ ಕಳೆದುಕೊಂಡವರಿಗೆ ಹಸ್ತಾಂತರಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಶಾಂತವೀರ ಈ. ಮಾರ್ಗದರ್ಶನದಲ್ಲಿ ಸಿಪಿಐ ಮಹಾದೇವ ಶಿರಹಟ್ಟಿ ನೇತೃತ್ವದ ತನಿಖಾ ತಂಡದಲ್ಲಿ ಪಿಎಸೈಗಳಾದ ಅಜಿತಕುಮಾರ ಹೊಸಮನಿ, ಕೆ.ಬಿ. ಮಾಂಗ ಪೊಲೀಸ್‌ ಸಿಬ್ಬಂದಿ ರಂಗನಾಥ ಕಟಗೇರಿ, ಶ್ರೀಶೈಲ ಕೆಸರಗೊಪ್ಪ, ಮನೋಹರ ಕುರಿ, ಭೀರಪ್ಪ ಕುರಿ, ಹನಮಂತ ಮಾದರ, ಮಾರುತಿ ದಳವಾಯಿ, ದಾದಾಪೀರ ಅತ್ರಾವತ, ಸುನೀಲ ಐದಮನಿ, ಶ್ರೀಕಾಂತ ಬೆನಕಟ್ಟಿ, ಸುರೇಶ ಭದ್ರಶೆಟ್ಟಿ ಭಾಗಿಯಾಗಿದ್ದರು. ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಿವೈಎಸ್ಪಿ ಸಿಬ್ಬಂದಿಗೆ ಬಹುಮಾನ ಘೋಷಿಸಿದರು.

ಟಾಪ್ ನ್ಯೂಸ್

1-modi

Ayodhya;ಮೋದಿ ಭರ್ಜರಿ ರೋಡ್‌ ಶೋ: ಜನರ ಹೃದಯ ರಾಮನಷ್ಟೇ ವಿಶಾಲ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

ಬಿಜೆಪಿ ಶಾಸಕ ಯತ್ನಾಳ ಶುಗರ್‌ ಫ್ಯಾಕ್ಟ್ರಿ ಹೆಂಗ್‌ ಕಟ್ಟಿದ್ರು: ಶಿವಾನಂದ ಪಾಟೀಲ

ಬಿಜೆಪಿ ಶಾಸಕ ಯತ್ನಾಳ ಶುಗರ್‌ ಫ್ಯಾಕ್ಟ್ರಿ ಹೆಂಗ್‌ ಕಟ್ಟಿದ್ರು: ಶಿವಾನಂದ ಪಾಟೀಲ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

1-modi

Ayodhya;ಮೋದಿ ಭರ್ಜರಿ ರೋಡ್‌ ಶೋ: ಜನರ ಹೃದಯ ರಾಮನಷ್ಟೇ ವಿಶಾಲ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.