ಮತ್ತೆ 43 ಸ್ಯಾಂಪಲ್ ಪರೀಕ್ಷೆಗೆ
Team Udayavani, May 18, 2020, 6:09 AM IST
ಬಾಗಲಕೋಟೆ: ಕೋವಿಡ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಲಾದ 42 ಸ್ಯಾಂಪಲ್ಗಳ ವರದಿ ನೆಗಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಿಂದ ಮತ್ತೆ ಹೊಸದಾಗಿ 43 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ವಿವಿಧ ವಸತಿ ನಿಲಯ, ಶಾಲೆಗಳಲ್ಲಿ ಒಟ್ಟು 1575 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 4768 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 4639 ನೆಗಟಿವ್ ಪ್ರಕರಣ, 71 ಪಾಸಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿವೆ. ಈಗಾಗಲೇ ಕೋವಿಡ್ನಿಂದ ಒಟ್ಟು 27 ಜನ ಗುಣಮುಖರಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 43 ಜನ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8 ಮಾತ್ರ ಕಂಟೇನ್ಮೆಂಟ್ ಝೋನ್ಗಳು ಇವೆ. 4 ಕಂಟೆನ್ಮೆàಮೆಂಟ್ ಝೋನ್ಗಳನ್ನು ತೆರವುಗೊಳಿಸಲಾಗಿದೆ. 14 ದಿನಗಳ ಇನ್ಸ್ಟಿಟ್ಯೂಶನ್ ಕ್ವಾರಂಟೈನ್ನಿಂದ ಪೂರ್ಣಗೊಂಡ 288 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.