Udayavni Special

ಮಧುಮೇಹಿಗಳಿಗೆ ಹೊಸ ರುಚಿ ಕರದಂಟು

ಸಕ್ಕರೆ-ಬೆಲ್ಲ ರಹಿತ ಅಂಜೂರ-ಕರ್ಜೂರ ಮಿಶ್ರಿತ ಕರದಂಟು!­ಮತ್ತೂಂದು ಹೆಜ್ಜೆಯತ್ತ ಅಮೀನಗಡ ವಿಜಯಾ ಕರದಂಟು ಸಂಸ್ಥೆ

Team Udayavani, Feb 25, 2021, 4:01 PM IST

Special Karadantu

ಅಮೀನಗಡ: ದೇಶ-ವಿದೇಶಗಳಲ್ಲೂ ತನ್ನ ವಿಶಿಷ್ಟ ಸ್ವಾದ, ಪೌಷ್ಟಿಕತೆಯೊಂದಿಗೆ ಪ್ರಸಿದ್ಧಿಯಾದ ಅಮೀನಗಡ ಕರದಂಡು ಮತ್ತೂಂದು ಹೊಸ ಹೆಜ್ಜೆಯತ್ತ ಕಾಲಿಟ್ಟಿದೆ. ಮಧುಮೇಹಿಗಳಿಗಾಗಿಯೇ ವಿಶೇಷ ಕರದಂಟು ಸಿದ್ಧಪಡಿಸಿದೆ.

ಕರದಂಟು ಸಿಹಿ ತಿನಿಸು ಮಾತ್ರವಲ್ಲ ಪೌಷ್ಟಿಕ ಆಹಾರ ನೈಸರ್ಗಿಕ ಅಂಟು, ಚುಕ್ಕಿ ಬೆಲ್ಲ, ಶುದ್ದ ತುಪ್ಪ ಹಾಗೂ ಹತ್ತಾರು ಡ್ರೈ ಫ್ರುಟ್ಸ್‌ಗಳ ಮಿಶ್ರಣದಲ್ಲಿ ತಯಾರಾಗುವ ಅಮೀನಗಡ ಕರದಂಟಿಗೆ 114 ವರ್ಷಗಳ ಇತಿಹಾಸವಿದೆ. ಆಧುನಿಕತೆಗೆ ತಕ್ಕಂತೆ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದ್ದು, ಮೊದಲಿನ ರುಚಿಯನ್ನೂ ಕಾಯ್ದುಕೊಳ್ಳಲಾಗಿದೆ. ಪೌಷ್ಟಿಕಾಂಶಗಳನ್ನು ಹೊಂದಿರುವ ಅಮೀನಗಡದ ಪ್ರಸಿದ್ಧ ಕರದಂಟು ಗರ್ಭಿಣಿಯರು, ಬಾಣಂತಿಯರು, ಯುವಕರು ಹಾಗೂ ಮಕ್ಕಳ ಆರೋಗ್ಯಕ್ಕೆ ಉತ್ತಮ ತಿನಿಸು. ಉಡುಪಿಯಿಂದ ಗೋಡಂಬಿ, ಆಂಧ್ರದ ತಾಂಡೂರ್‌ನಿಂದ ಗೇರು ಬೀಜ, ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಲ್ಲ.

ಮುಂಬೈ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಬಾದಾಮಿ, ಪಿಸ್ತಾ, ಅಂಜೂರು ಸೇರಿದಂತೆ ಬಹುತೇಕ ಸಾಮಗ್ರಿ ತಂದು ಕರದಂಟಿಗೆ ಬಳಸಲಾಗುತ್ತದೆ. ಬದಲಾವಣೆ ಏನು?: ಸಾವಯವ ಬೆಲ್ಲ, ಕೊಬ್ಬರಿ, ಗೋಡಂಬಿ, ಒಣದ್ರಾಕ್ಷಿ, ಗೇರಬೀಜ, ಬಾದಾಮಿ, ಪಿಸ್ತಾ, ಅಂಜೂರ, ಆಳ್ವಿ, ಗಸಗಸಿ, ಉತ್ತತ್ತಿ, ಆಕ್ರೋಟ್‌, ಜಾಜಿಕಾಯಿ, ಏಲಕ್ಕಿ ಹಾಗೂ ಶುದ್ದ ತುಪ್ಪ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳಿಂದ  ತಯಾರಿಸಲ್ಪಡುವ ಕರದಂಟು ಪ್ರಿಮಿಯಂ, ಕ್ಲಾಸಿಕ್‌, ಸುಪ್ರೀಂ ಎಂದು ಮೂರು ತರಹದ ಕರದಂಟು ತಯಾರಿಸಿ ಮಾರಾಟ ಮಾಡಲಾಗುತ್ತದೆ.

ಸುಪ್ರೀಂ ಕರದಂಟು ನಾಲ್ಕರಿಂದ ಆರು ತಿಂಗಳು ಬಳಸಲಾಗುತ್ತದೆ. ಆದರೆ ಈಗ ಅಮೀನಗಡ ಪ್ರಸಿದ್ಧ ವಿಜಯಾ ಕರದಂಟು ಒಂದು ಹೆಜ್ಜೆ ಮುಂದೆ ಸಾಗಿ ಸಕ್ಕರೆ, ಬೆಲ್ಲ ರಹಿತವಾದ ಅಂಜೂರ ಮತ್ತು ಕರ್ಜೂರ ಮೂಲಕ ನೂತನ ಸ್ವಾದಿಷ್ಟ ಕರದಂಟು ಸಿದ್ಧಪಡಿಸಿದೆ. ಇದು ಮಧುಮೇಹಿಗಳು, ಹಿಮೋಗ್ಲೋಬಿನ್‌ ನಿಂದ ಬಳಲುತ್ತಿರುವವರಿಗೆ ಪೌಷ್ಟಿಕ ತಿನಿಸು ಎನ್ನುತ್ತಾರೆ ವಿಜಯಾ ಕರದಂಟು ಅಮೀನಗಡ ಮಾಲಿಕ ಸಂತೋಷ ಐಹೊಳ್ಳಿ.

ಅಂಜೂರ ಮತ್ತು ಕರ್ಜೂರ ಮಿಶ್ರಿತ ಮೂಲಕ ಕರದಂಟು ತಯಾರು ಮಾಡಬೇಕು ಎಂಬ ಉದ್ದೇಶ ಮೊದಲಿನಿಂದಲೂ ಇತ್ತು. ನಮ್ಮ ಅಡುಗೆ ಮನೆಯಲ್ಲಿ ಮೊದಲ ಪ್ರಯತ್ನದಲ್ಲಿ ಕಾಲು ಕೆಜಿ ಕರದಂಟು ಸಿದ್ಧಪಡಿಸಲಾಯಿತು. ನಂತರ 10 ಕೆಜಿ, ಈಗ ಸದ್ಯ 30 ಕೆಜಿ ಕರದಂಟು ಮಾಡಿ ಮಾರುಕಟ್ಟೆಗೆ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ್ದೇವೆ. ಇದರಲ್ಲಿ ಯಾವುದೇ ರೀತಿಯ ಸಕ್ಕರೆ ಬೆಲ್ಲ, ದ್ರಾಕ್ಷಿ ಮತ್ತು ಕೊಬ್ಬರಿ ಬಳಸುವುದಿಲ್ಲ. ಇದನ್ನು ವಿಶೇಷವಾಗಿ ಮಧುಮೇಹಿಗಳಿಗೆ, ಹೀಮೋಗ್ಲೋಬಿನ್‌ನಿಂದ ಬಳಲುತ್ತಿರುವವರಿಗಾಗಿ ಸಿದ್ಧಪಡಿಸಲಾಗಿದೆ. ಮೈಸೂರಿನ ಆಹಾರ ಇಲಾಖೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸಕ್ಕರೆ ಪ್ರಮಾಣ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.  (ಸಂತೋಷ ಐಹೊಳ್ಳಿ, ಮಾಲಿಕರು, ವಿಜಯಾ ಕರದಂಟು, ಅಮೀನಗಡ)

ಎಚ್‌.ಎಚ್‌. ಬೇಪಾರಿ

 

 

ಟಾಪ್ ನ್ಯೂಸ್

fgfg

ನಿಮ್ಮ ಜಿಲ್ಲೆಯ ಕೋವಿಡ್ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ : ಸಚಿವರಿಗೆ ಸಿಎಂ ಪತ್ರ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

್ಗಗ್ದಸ

ಅಸಹಾಯಕರಾಗಿದ್ದೇವೆ, ಬೆಡ್-ಆಕ್ಸಿಜನ್ ಇಲ್ಲ, ಮುನ್ನೆಚ್ಚರಿಕೆಯಿಂದ ಇರಿ : ವೈದ್ಯೆ ಕಣ್ಣೀರು

utuytruyt

‘ರಣಧೀರ’ ಚಿತ್ರದ ಪೋಸ್ಟರ್ ಡಿಸೈನರ್ ಕೋವಿಡ್‍ನಿಂದ ಸಾವು

ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ : ಹೆಚ್ ಡಿಕೆ

ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ : ಹೆಚ್ ಡಿಕೆ

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

hfhtt

ಸಂಬಳ ಕೊಡದೆ ಮೋಸ ಮಾಡಿದ್ದ ನಿರ್ಮಾಪಕ : ಸಂಕಷ್ಟದ ಸಮಯ ಮೆಲುಕು ಹಾಕಿದ ಜಗ್ಗಣ್ಣ  ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gfdgtgr

ಬಾದಾಮಿಯಲ್ಲಿ ಪ್ರೇಮಿಗಳ ಮದುವೆ

hdfhhr

3ನೇ ಹಂತದ ಮುಳುಗಡೆ ಪ್ರಕ್ರಿಯೆ

ljlhj

ಭರವಸೆ ಈಡೇರಿಸದಿದ್ರೆ ಮತ್ತೆ ಹಕ್ಕೊತ್ತಾಯ  : ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

hdfgf

ಟಿಎಂಸಿ ವಿರುದ್ಧ ಜಮಖಂಡಿಯಲ್ಲಿ ಬಿಜೆಪಿ ಪ್ರತಿಭಟನೆ

fghdf

ನಿರಂತರ ವಿದ್ಯುತ್‌ ಪೂರೈಕೆಗೆ ರೈತರ ಪಟ್ಟು

MUST WATCH

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

ಹೊಸ ಸೇರ್ಪಡೆ

fgfg

ನಿಮ್ಮ ಜಿಲ್ಲೆಯ ಕೋವಿಡ್ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ : ಸಚಿವರಿಗೆ ಸಿಎಂ ಪತ್ರ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

huliyaru 12th Ward

ಹುಳಿಯಾರು 12ನೇ ವಾರ್ಡ್‌ ಸದಸ್ಯರೇ ಇತ್ತ ನೋಡಿ!

್ಗಗ್ದಸ

ಅಸಹಾಯಕರಾಗಿದ್ದೇವೆ, ಬೆಡ್-ಆಕ್ಸಿಜನ್ ಇಲ್ಲ, ಮುನ್ನೆಚ್ಚರಿಕೆಯಿಂದ ಇರಿ : ವೈದ್ಯೆ ಕಣ್ಣೀರು

utuytruyt

‘ರಣಧೀರ’ ಚಿತ್ರದ ಪೋಸ್ಟರ್ ಡಿಸೈನರ್ ಕೋವಿಡ್‍ನಿಂದ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.