ನಕಲಿ ಏಷಿಯನ್‌ ಪೇಂಟ್‌ ಫ್ಯಾಕ್ಟರಿ ಸ್ಥಾಪಿಸಿದ್ದ ಉದ್ಯಮಿ!


Team Udayavani, Apr 15, 2023, 3:44 PM IST

ನಕಲಿ ಏಷಿಯನ್‌ ಪೇಂಟ್‌ ಫ್ಯಾಕ್ಟರಿ ಸ್ಥಾಪಿಸಿದ್ದ ಉದ್ಯಮಿ!

ಬೆಂಗಳೂರು: ನಕಲಿ ಏಷಿಯನ್‌ ಪೇಂಟ್ಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದ ಉದ್ಯಮಿಯನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ತಾನ ಮೂಲದ ಚುನ್ನಿಲಾಲ್‌ ಬಂಧಿತ ಆರೋಪಿ. 20 ಲಕ್ಷ ರೂ. ಮೌಲ್ಯದ ನಕಲಿ ಏಷಿಯನ್‌ ಪೇಂಟ್‌ ಜಪ್ತಿ ಮಾಡಿದ್ದಾರೆ.

ನಕಲಿ ಏಷಿಯನ್‌ ಪೇಂಟ್ಸ್‌ ತಯಾರಿಸಲೆಂದೇ ತನ್ನದೇ ಆದ ಚಿಕ್ಕ ಫ್ಯಾಕ್ಟರಿ, ಶೋರೂಂ ತೆರೆದಿರುವುದು ಪತ್ತೆಯಾಗಿದೆ. ಈತ ಕಳೆದ 10 ವರ್ಷಗಳಿಂದ ಪ್ರತಿಷ್ಠಿತ ಏಷಿಯನ್‌ ಪೇಂಟ್ಸ್‌ ಹೆಸರಿನಲ್ಲಿ ನಕಲಿ ಪೈಂಟ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ. ತನ್ನದೇ ಆದಂತಹ ಪೇಂಟ್‌ ಶೋ ರೂಮ್‌ ಒಂದನ್ನು ಹೊಂದಿದ್ದ. ಹೀಗಾಗಿ ಪೈಂಟ್‌ ಬಗ್ಗೆ ಬಹುತೇಕ ಎಲ್ಲ ವಿಚಾರಗಳನ್ನೂ ಅರಿತಿದ್ದ. ಕಳೆದ 10 ವರ್ಷದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಏಷಿಯನ್‌ ಪೇಂಟ್‌ ಮಾರಾಟ ಮಾಡಿದ್ದ. ಏಷಿಯನ್‌ ಪೇಂಟ್‌ ಸ್ಟಿಕ್ಕರ್‌ ಸೇರಿದಂತೆ ಪೇಂಟ್‌ ಉತ್ಪನ್ನಗಳನ್ನು ಸಹ ನಕಲು ಮಾಡುತ್ತಿದ್ದ. ಏಷಿಯನ್‌ ಪೇಂಟ್ಸ್‌ ವಿತರಕರಿಗೆ ಇತ್ತೀಚೆಗೆ ಆರೋಪಿಯ ಕಳ್ಳಾಟದ ಸುಳಿವು ಸಿಕ್ಕಿತ್ತು. ಅವರು ಈ ಬಗ್ಗೆ ವಿ.ವಿ.ಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಸ್ಯಾಂಪಲ್‌ ಗಾಗಿ ಒಂದು ಬಾಕ್ಸ್‌ ಪೇಂಟ್‌ ಖರೀದಿಸಿ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ನಕಲಿ ಪೇಂಟ್‌ ಎಂಬುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಚುನ್ನಿಲಾಲ್‌ ನನ್ನು ಬಂಧಿಸಿದ್ದಾರೆ.

ಗೋದಾಮಿಗೆ ದಾಳಿ ನಡೆಸಿ ಪೇಂಟ್‌ ಜಪ್ತಿ: ಆರೋಪಿ ಯನ್ನು ವಿಚಾರಣೆಗೊಳಪಡಿಸಿದಾಗ ಗೋದಾಮಿನಲ್ಲಿ ಏಷಿಯನ್‌ ಪೇಂಟ್‌ ಸಂಗ್ರಹಿಸಿಟ್ಟಿರುವ ಮಾಹಿತಿ ಸಿಕ್ಕಿತ್ತು. ಕೂಡಲೇ ನಕಲಿ ಪೇಂಟ್‌ ತಯಾರಿಸುವ ಹೆಸರುಘಟ್ಟ ಮುಖ್ಯ ರಸ್ತೆಯ ಕಾರ್ಖಾನೆ ಹಾಗೂ ಶಿವಕೋಟೆ ಗ್ರಾಮದಲ್ಲಿರುವ ಗೋದಾಮಿನ ಮೇಲೆ ದಾಳಿ ಮಾಡಿ 20 ಲಕ್ಷ ರೂ. ಮೌಲ್ಯದ ಏಷಿಯನ್‌ ಪೇಂಟ್ಸ್‌ ಬ್ರ್ಯಾಂಡಿನ ಅಪೇಕ್ಸ್‌, ಏಸ್‌, ರಾಯಲ್, ಟ್ರಾಕ್ಟರ್‌, ಪ್ರೀಮಿಯಮ್ ಸೇರಿದಂತೆ ವಿವಿಧ ಬಗೆಯ ಪೇಂಟ್‌ ಜಪ್ತಿ ಮಾಡಿದ್ದಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.