ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ:  ಲಾರಿ ಢಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವು

Team Udayavani, May 15, 2022, 1:50 PM IST

ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ:  ಲಾರಿ ಢಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ಥಣಿಸಂದ್ರ ರೈಲ್ವೆ ಮೇಲ್ಸೇ ತುವೆ ಬಳಿ ಬಿಬಿಎಂಪಿ ಕಸದ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಡೆಲಿವರಿ ಬಾಯ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಾದಗಿರಿಯ ಸುರಪುರ ಮೂಲದ ದೇವಣ್ಣ (25) ಮೃತಪಟ್ಟವರು.

ಬಿಬಿಎಂಪಿ ಕಸದ ಲಾರಿ ಚಾಲಕ ದಿನೇಶ್‌ ನಾಯ್ಕ (40) ನನ್ನು ಬಂಧಿಸಲಾಗಿದೆ. ನಗರದಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವ ದೇವಣ್ಣ, “ಶನಿವಾರ ಸಂಜೆ ನಾಗವಾರದಿಂದ ಹೆಗಡೆ ನಗರದ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ ಬರುತ್ತಿದ್ದ ಬಿಬಿಎಂಪಿ ಕಸದ ಲಾರಿ ಹಿಂದಿನಿಂದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುತ್ತಿಗೆದಾರ ವಿಶ್ವನಾಥ್‌ಗೆ ಸೇರಿದ ಲಾರಿಯಾಗಿದ್ದು, ಮಹದೇವಪುರ ವಾರ್ಡ್ ನಲ್ಲಿ ಕಸ ಸಂಗ್ರಹ ಮಾಡಿದ್ದರು.

2 ತಿಂಗಳಲ್ಲಿ ನಾಲ್ವರು ಬಲಿ: ಕಳೆದ 2 ತಿಂಗಳಲ್ಲಿ ಪಾಲಿಕೆ ಲಾರಿಗೆ ನಾಲ್ವರು ಬಲಿಯಾಗಿದ್ದಾರೆ. ಮಾ.21ರಂದು ಹೆಬ್ಟಾಳದ ಬಳಿ ಕಸದ ಲಾರಿ ಹರಿದು ಅಕ್ಷಯ ಎಂಬ ವಿದ್ಯಾರ್ಥಿನಿ ಸಾವು. ಮಾ.31ರಂದು ಬಾಗಲೂರು ಥಣಿ ಸಂದ್ರ ಮುಖ್ಯ ರಸ್ತೆಯಲ್ಲಿ ರಾಮಯ್ಯ ಎಂಬುವವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು. ಏ.18ರಂದು ನಾಯಂಡಹಳ್ಳಿ ಜಂಕ್ಷನ್‌ ಬಳಿ ಬ್ಯಾಂಕ್‌ ಉದ್ಯೋಗಿ ಪದ್ಮಿನಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಸದ ಲಾರಿ ಹರಿದು ಸ್ಥಳ ದಲ್ಲೇ ಸಾವನ್ನಪ್ಪಿದ್ದರು.

ಪಾಲಿಕೆ ವಾಹನ ಚಾಲಕರಿಗೆ ದೈಹಿಕ ಪರೀಕ್ಷೆ

ಬೆಂಗಳೂರು: ಪಾಲಿಕೆಯ ಎಲ್ಲ ವಾಹನ ಚಾಲಕರ ಫಿಟ್ ನೆಸ್‌ ಪ್ರಮಾಣ ಪತ್ರದ ತಪಾಸಣೆ ನಡೆಸಲಾಗುವುದು ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ.

ಈ ಬಗ್ಗೆ ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಥಣಿಸಂದ್ರದ ರೈಲ್ವೆ ಗೈಟ್‌ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಂತಾಪ ಸೂಚಿಸಿದ್ದಾರೆ.

ಈ ವಾಹನ ಗುತ್ತಿಗೆದಾರರಿಗೆ ಸೇರಿದ್ದಾಗಿದೆ ಎಂದಿದ್ದಾರೆ.ಇಂತಹ ಅಪಘಾತಗಳನ್ನು ತಪ್ಪಿಸಲು ಪಾಲಿಕೆ ಕ್ರಮ ಕೈಗೊಂಡಿದೆ. ಪಾಲಿಕೆಯಿಂದ ಕಾರ್ಯನಿರ್ವಹಿಸುತ್ತಿರುವ 558 ಕಾಂಪ್ಯಾಕ್ಟ್ ವಾಹನಗಳ ಚಾಲಕರಿಗೆ ಹಂತ ಹಂತವಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ.

ಜತೆಗೆ ಈಗಾಗಲೇ 388 ಚಾಲಕರ ತರಬೇತಿ ಪೂರ್ಣಗೊಂಡಿದ್ದು, ಇತರ ಚಾಲಕರ ಪರವಾನಗಿ ಮತ್ತು ದೈಹಿಕ ಪರೀಕ್ಷೆ ಸೇರಿದಂತೆ ಇತರ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal Hospitals; ಟ್ರಾನ್ಸ್‌ಪ್ಲಾಂಟ್ನಿಂದ ಬದುಕುಳಿದವರಿಗೆ ಕ್ರಿಕೆಟ್‌ ಪಂದ್ಯದ ಉಲ್ಲಾಸ

Manipal Hospitals; ಟ್ರಾನ್ಸ್‌ಪ್ಲಾಂಟ್ನಿಂದ ಬದುಕುಳಿದವರಿಗೆ ಕ್ರಿಕೆಟ್‌ ಪಂದ್ಯದ ಉಲ್ಲಾಸ

18

950 ಕೋಟಿ ರೂಪಾಯಿ ವೈದ್ಯ ಸೀಟು ಹಂಚಿಕೆ ಅಕ್ರಮ: ಬಿಜೆಪಿ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

15

Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

10-

Koratagere: ಪಟ್ಟಣಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.