ಮೆಟ್ರೋಪಾಲಿಟನ್‌ ಕಮೀಷನರ್‌ ನೇಮಕಕ್ಕೆ ಸಲಹೆ


Team Udayavani, Sep 1, 2019, 3:07 AM IST

metro-pal

ಬೆಂಗಳೂರು: ಮಹಾನಗರ ವ್ಯಾಪ್ತಿಯ ಎಲ್ಲ ಸೇವಾ ಸಂಸ್ಥೆಗಳ ನಡುವೆ ಸಮನ್ವಯತೆ ಮೂಡಿಸಲು ಮೆಟ್ರೋಪಾಲಿಟನ್‌ ಕಮಿಷನರ್‌ರನ್ನು ನೇಮಿಸುವ ಅಗತ್ಯವಿದೆ ಎಂದು ಸಂಘ ಸಂಸ್ಥೆಗಳು ಸಲಹೆ ನೀಡಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿ ಕುರಿತಂತೆ ನಾನಾ ಇಲಾಖೆಗಳ ಮುಖ್ಯಸ್ಥರು ಹಾಗೂ ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಶನಿವಾರ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿ, ಬಿಡಿಎ, ಜಲ ಮಂಡಳಿ, ಬಿಎಂಆರ್‌ಸಿಎಲ್‌, ಬೆಸ್ಕಾಂ ಎಲ್ಲವೂ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ನಗರದ ಅಭಿವೃದ್ಧಿಯಲ್ಲಿ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ.

ಹೀಗಾಗಿ, ಮೆಟೋಪಾಲಿಟನ್‌ ಕಮೀಷನರ್‌ ಅಗತ್ಯತೆ ಬಗ್ಗೆ ಸಲಹೆ ಬಂದಿದೆ, ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿರುವುದರಿಂದ ಎಲ್ಲ ಇಲಾಖೆಗಳ ನಡುವೆ ಹೊಂದಾಣಿಕೆ ಅಗತ್ಯವಿದೆ. ಮೆಟ್ರೋ ಯೋಜನೆ ಕೇವಲ 42 ಕಿ.ಮೀ. ಮಾಡಲಾಗಿದೆ. 250 ಕಿ.ಮೀ. ಗುರಿ ಇಟ್ಟುಕೊಳ್ಳಬೇಕು. ಸಬ್‌ ಅರ್ಬನ್‌ ರೈಲು ಯೋಜನೆ ತ್ವರಿತಗೊಳಿಸುವುದು.

ಫೆರಿಪೆರೆಲ್‌ ರಿಂಗ್‌ ರಸ್ತೆ ಯೋಜನೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕೆಂಬ ಸಲಹೆ ಬಂದಿದೆ. ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮಾಸ್ಟರ್‌ ಪ್ಲ್ರಾನ್‌ ಮಾಡಲಾಗುತ್ತಿದೆ. ಅದು ಸರ್ಕಾರದ ಹಂತದಲ್ಲಿ ಇನ್ನೂ ಚರ್ಚೆಯಲ್ಲಿರುವುದರಿಂದ ಬದಲಾವಣೆಗೆ ಅವಕಾಶವಿದೆ ಎಂದು ಹೇಳಿದರು. ಯೋಜನೆಗಳ ಅನುಷ್ಠಾನಕ್ಕಾಗಿ ಆಡಳಿತ ವಿಕೇಂದ್ರಿಕರಣ ಮಾಡುವಂತೆಯೂ ಸಲಹೆ ಬಂದಿದೆ. ಈ ಬಗ್ಗೆ ನಾಗರಿಕರ ಅಭಿವೃದ್ಧಿ ಸಂಘಗಳು, ಅಪಾರ್ಟ್‌ಮೆಂಟ್‌ ಸಂಘಗಳು ಹಾಗೂ ಐಟಿ ಬಿಟಿ ಸಂಸ್ಥೆಗಳೊಂದಿಗೂ ಸಭೆ ನಡೆಸಿ, ಅವರ ಸಲಹೆಗಳನ್ನೂ ಪಡೆದು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.

ಎಲ್ಲ ಯೋಜನೆಗಳಿಗೂ ಭೂ ಸ್ವಾಧೀನ ಸಾಮಾನ್ಯ ಸಮಸ್ಯೆಯಾಗಿರುವುದರಿಂದ ಈ ಬಗ್ಗೆಯೂ ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಬಿಡಿಎ, ಬಿಬಿಎಂಪಿ ಆಯುಕ್ತರು, ಜಲ ಮಂಡಳಿ ಅಧ್ಯಕ್ಷರು, ಬೆಸ್ಕಾಂ ಹಾಗೂ ಬಿಎಂಆರ್‌ಸಿಎಲ್‌ ಅಧಿಕಾರಿಗಳು, ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹಾಗೂ ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ ಹಾಗೂ ಉದ್ಯಮಿ ಮೋಹನ್‌ದಾಸ್‌ ಪೈ ಹಾಜರಿದ್ದರು.

ಟಾಪ್ ನ್ಯೂಸ್

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಸಚಿವ ಅಶೋಕ್

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

k l rahul and rashid khan

ಐಪಿಎಲ್ ನಿಂದ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ಒಂದು ವರ್ಷ ಬ್ಯಾನ್!

ಚಿಕ್ಕಮಗಳೂರು: ಕಸ-ಕಡ್ಡಿ,ಹುಳ ಮಿಶ್ರಿತ ನೀರನ್ನೇ ಕುಡಿಯಬೇಕು:ಗ್ರಾಮಸ್ಥರ ಯಾತನೆಗೆ ಕೊನೆಯಿಲ್ಲ

ಚಿಕ್ಕಮಗಳೂರು: ಕಸ-ಕಡ್ಡಿ,ಹುಳ ಮಿಶ್ರಿತ ನೀರನ್ನೇ ಕುಡಿಯಬೇಕು:ಗ್ರಾಮಸ್ಥರ ಯಾತನೆಗೆ ಕೊನೆಯಿಲ್ಲ

RT-PCR ಪರೀಕ್ಷೆಯಿಂದ ಒಮಿಕ್ರಾನ್ ವೈರಸ್ ಪತ್ತೆ ಹಚ್ಚಲು ಸಾಧ್ಯವೇ? ತಜ್ಞರು ಹೇಳುವುದೇನು

RT-PCR ಪರೀಕ್ಷೆಯಿಂದ ಒಮಿಕ್ರಾನ್ ವೈರಸ್ ಪತ್ತೆ ಹಚ್ಚಲು ಸಾಧ್ಯವೇ? ತಜ್ಞರು ಹೇಳುವುದೇನು

dharwad high court

ಬಾಲಕಿ ಪರವಾಗಿ ನಿಂತ ಧಾರವಾಡ ಹೈಕೋರ್ಟ್ ನಿಂದ ಮಹತ್ವದ ತೀರ್ಪುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

highcourt of karnataka

ಜೂಜಾಟ ಆರೋಪ: ಪ್ರಕರಣ ರದ್ದು

finance minister

5 ಲಕ್ಷದವರೆಗಿನ ಠೇವಣಿ ವಿಮೆ ಮರುಪಾವತಿ

education meet

ಅಸ್ಸಾಂ ಸಿಎಂ ಭೇಟಿಯಾದ ಅಶ್ವತ್ಥ ನಾರಾಯಣ

ಕಡಲೆಕಾಯಿ ಪರಿಷೆ

ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ

fake id

ಇನ್ಫೋಸಿಸ್‌ ಕಂಪನಿ ನಕಲಿ ಐಡಿ ಬಳಸಿ ವಂಚನೆ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

18graps

ಮಳೆಯಿಂದ ದ್ರಾಕ್ಷಿ ಹಾನಿ: ತಹಶೀಲ್ದಾರ್‌ ಪರಿಶೀಲನೆ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

ಸಚಿವ ಅಶೋಕ್

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್

17border

ಕೊರೊನಾ: ಮಹಾ ಗಡಿಯಲ್ಲಿ ತೀವ್ರ ಕಟ್ಟೆಚ್ಚರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.