ತೀವ್ರ ಮಾನಸಿಕ ಕಾಯಿಲೆ ಬಗ್ಗೆ ಜಾಗೃತಿ ಜಾಥಾ

Team Udayavani, May 25, 2019, 3:00 AM IST

Udayavani Kannada Newspaper

ಮಹದೇವಪುರ: ಸ್ಕಿಜೋಫ್ರೆನಿಯಾ (ತೀವ್ರ ಮಾನಸಿಕ ಸಮಸ್ಯೆ) ಕಾಯಿಲೆ ಬಗ್ಗೆ ಎಚ್ಚರವಹಿಸಿ, ಸೂಕ್ತ ಸಮಯಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಿದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಉಪ ನಿದೇರ್ಶಕಿ ಡಾ.ರಜಿನಿ ಹೇಳಿದರು.

ವಿಶ್ವ ಸ್ಕಿಜೋಫ್ರೆನಿಯಾ ದಿನಾಚರಣೆ ಅಂಗವಾಗಿ ಮಾನಸಿಕ ಆರೋಗ್ಯ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಬಿದರಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಸ್ಕಿಜೋಫ್ರೆನಿಯಾ ಲಕ್ಷಣಗ‌ಳು ಕಂಡುಬಂದ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು ಎಂದರು.

ವ್ಯಕ್ತಿ ಪದೇ ಪದೆ ತೀವ್ರ ಸ್ವರೂಪದ ಸಂಕಷ್ಟಗಳಿಗೆ ಸಿಲುಕಿದಾಗ, ಅನುವಂಶಿಕವಾಗಿ ಹಾಗೂ ಮೆದುಳಿನ ಮೇಲೆ ಉಂಟಾಗುವ ಅತಿಯಾದ ಒತ್ತಡ ಸ್ಕಿಜೋಫ್ರೆನಿಯಾಗೆ ಕಾರಣವಾಗುತ್ತದೆ. ಈ ಮಾನಸಿಕ ಸಮಸ್ಯೆಯಿಂದ ಬಳಲುವ ವ್ಯಕ್ತಿಯ ಭಾವನೆಗಳಲ್ಲಿ ಏರುಪೇರಾಗುತ್ತವೆ. ರೋಗಿಗಳು ಅನಗತ್ಯವಾಗಿ ವಿಪರೀತ ಕೋಪ, ದುಃಖ, ಸಂತೋಷ ಪ್ರಕಟಿಸುತ್ತಾರೆ. ವಿನಾಕಾರಣ ನಗುತ್ತಾರೆ, ಇದ್ದಕ್ಕಿದ್ದಂತೆ ಅಳುತ್ತಾರೆ.

ಕೆಲವೊಮ್ಮೆ ಯಾವುದೇ ಭಾವನೆ ತೋರಿಸದೇ ನಿರ್ಲಿಪ್ತರಾಗಿರುತ್ತಾರೆ. ಹಗ್ಗವನ್ನು ಕಂಡು ಹಾವೆಂದು ಆತಂಕಪಡುತ್ತಾರೆ. ನೆರಳನ್ನು ಕಂಡು ಭೂತ, ಕಳ್ಳ ಎಂದು ಕೂಗುತ್ತಾರೆ. ಇದ್ದಕ್ಕಿದ್ದಂತೆ ಉದ್ರೇಕಗೊಳ್ಳುವುದು, ಸುತ್ತ ಇರುವ ಜನರನ್ನು ಅನುಮಾನದಿಂದ ನೋಡುವುದು ಇತ್ಯಾದಿ ಲಕ್ಷಣಗಳು ರೋಗಿಗಳಲ್ಲಿ ಕಂಡುಬರುತ್ತವೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮಾಧಿಕಾರಿ, ಡಾ.ನದೀಮ್‌ ಅಹಮದ್‌, ಡಾ.ಕೆ.ಎಸ್‌.ಪ್ರಕಾಶ್‌, ತಾಲೂಕು ಆರೋಗ್ಯಧಿಕಾರಿ ಡಾ.ಚಂದ್ರಶೇಖರ್‌, ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸೋಮಶೇಖರ್‌, ಡಾ.ರಾಜೇಶ್ವರಿ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

ಟ್ರಕ್‌ ನಲ್ಲಿತ್ತು 40 ಲಕ್ಷ ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಟ್ರಕ್‌ ನಲ್ಲಿತ್ತು 40 ಲಕ್ಷ ರೂ. ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

2

ಪ್ರತಿಷ್ಠೆ ರಾಜಕೀಯಕ್ಕೆ ಕಾರಣವಾಯ್ತಾ ಕಬ್ಬು ಹೋರಾಟ

ಸಂಸತ್ತಿಗೆ “ಅನುಭವ ಮಂಟಪ’ ದಾಖಲೆ

ಸಂಸತ್ತಿಗೆ “ಅನುಭವ ಮಂಟಪ’ ದಾಖಲೆ

ಮಕ್ಕಳಿಗೆ “ಬಾಂಬ್‌’, “ಗನ್‌’ ಎಂದು ನಾಮಕರಣ! ನಾಗರಿಕರಿಗೆ ಉ.ಕೊರಿಯಾ ಸರ್ಕಾರ ಆದೇಶ

ಮಕ್ಕಳಿಗೆ “ಬಾಂಬ್‌’, “ಗನ್‌’ ಎಂದು ನಾಮಕರಣ! ನಾಗರಿಕರಿಗೆ ಉ.ಕೊರಿಯಾ ಸರ್ಕಾರ ಆದೇಶ

0

ಕುಕ್ಕೆ ಸುಬ್ರಹ್ಮಣ್ಯ: ನೀರಿನಲ್ಲಿ ಬಂಡಿ ಉತ್ಸವ

ಮಂಗಳೂರು-ಮುಂಬಯಿ ವಿಶೇಷ ರೈಲು

ಮಂಗಳೂರು-ಮುಂಬಯಿ ವಿಶೇಷ ರೈಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಹೋದ್ಯೋಗಿ ಕೊಲೆಗೈದಿದ್ದ ಐವರ ಬಂಧನ

ಸಹೋದ್ಯೋಗಿ ಕೊಲೆಗೈದಿದ್ದ ಐವರ ಬಂಧನ

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಸಂಧ್ಯಾ ಪೈ ಅವರ ಬರವಣಿಗೆ ಶೈಲಿಯಲ್ಲಿ ಬುದ್ಧನ ಪ್ರಭಾವ: ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ

ಸಂಧ್ಯಾ ಪೈ ಅವರ ಬರವಣಿಗೆ ಶೈಲಿಯಲ್ಲಿ ಬುದ್ಧನ ಪ್ರಭಾವ: ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ

12

ಟ್ಯಾಕ್ಸಿ ಚಾಲಕರ ನೇಮಕಾತಿಗೆ ಎನ್‌ಒಸಿ ಕಡ್ಡಾಯ

MUST WATCH

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

ಹೊಸ ಸೇರ್ಪಡೆ

ಟ್ರಕ್‌ ನಲ್ಲಿತ್ತು 40 ಲಕ್ಷ ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಟ್ರಕ್‌ ನಲ್ಲಿತ್ತು 40 ಲಕ್ಷ ರೂ. ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

3

ಮಹಾ ಸಚಿವರ ಗಡಿ ಪ್ರವೇಶಕ್ಕೆ ನಿರ್ಬಂಧ

2

ಪ್ರತಿಷ್ಠೆ ರಾಜಕೀಯಕ್ಕೆ ಕಾರಣವಾಯ್ತಾ ಕಬ್ಬು ಹೋರಾಟ

ಸಂಸತ್ತಿಗೆ “ಅನುಭವ ಮಂಟಪ’ ದಾಖಲೆ

ಸಂಸತ್ತಿಗೆ “ಅನುಭವ ಮಂಟಪ’ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.