ಮತದಾನ ಹೆಚ್ಚಳವಾಗುವ ವಿಶ್ವಾಸ


Team Udayavani, May 13, 2018, 6:00 AM IST

Ban13051807Medn.jpg

ಬೆಂಗಳೂರು: ಕೆಲವು ಸಣ್ಣಪುಟ್ಟ ಅಹಿತಕರ ಘಟನೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಹೊರತುಪಡಿಸಿ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಶೇ.71ರಷ್ಟು ಮತದಾನವಾಗಿದ್ದು, ಇದು ಅಂತಿಮವಲ್ಲ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಪ್ರಮಾಣ ಹೆಚ್ಚಳವಾಗುವ ವಿಶ್ವಾಸವಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಸೂತ್ರ ಚುನಾವಣೆ ಮತ್ತು ಶಾಂತಿಯುತ ಮತದಾನಕ್ಕೆ ಸಹಕರಿಸಿದ ಮತದಾ ರರು, ಭಾರತ ಚುನಾವಣಾ ಆಯೋಗ,ಕೇಂದ್ರ ಭದ್ರತಾ ಪಡೆಗಳು, ರಾಜ್ಯದ ಪೊಲೀಸ್‌ ಇಲಾಖೆ, ಸರ್ಕಾರದ ವಿವಿಧ ಇಲಾಖೆಗಳು,ಬಿಇಎಲ್‌ ಸಂಸ್ಥೆ, ಚುನಾವಣಾ ರಾಯಭಾರಿ ಸೇರಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಇಡೀ ರಾಜ್ಯದಲ್ಲಿ 5 ಕಡೆ ಗುಂಪು ಘರ್ಷಣೆ ನಡೆದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಕೆಲವು ಕಡೆ ಹಣ ಹಂಚಿಕೆಯ ಘಟನೆಗಳೂ ನಡೆದಿವೆ. ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದಲ್ಲಿ ಮತದಾನ ಮಾಡಲು ಬಂದ 58 ವರ್ಷದ ಮಹಿಳೆಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ
ಘಟನೆ ನಡೆದಿದ್ದು, ಅವರಿಗೆ ಮನವೊಲಿಸಿ ಮತದಾನ ಮಾಡಿಸಲಾಯಿತು. ಅದೇ ರೀತಿ ಬೆಳ್ತಂಗಡಿಯಲ್ಲಿ ಮತದಾನಕ್ಕೆ ಬಂದ 58 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಉಳಿದಂತೆ ಕೆಲವು ಕಡೆ ಇವಿಎಂ ಹಾಗೂ ವಿವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಇವನ್ನು ಹೊರತುಪಡಿಸಿ ಇಡೀ ಮತದಾನ ಪ್ರಕ್ರಿಯೆ ಸುಸೂತ್ರ ಮತ್ತು ಶಾಂತಿಯುತವಾಗಿ ನಡೆಯಿತು ಎಂದು ಸಂಜೀವ ಕುಮಾರ್‌ ವಿವರಿಸಿದರು.

698 ವಿವಿಪ್ಯಾಟ್‌ ಬದಲು
ಮತದಾನಕ್ಕೆ ಮುಂಚೆ ಅಣಕು ಮತದಾನದಲ್ಲಿ ತಾಂತ್ರಿಕ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಬದಲಿಸಲಾಗಿದೆ. ರಾಜ್ಯದಲ್ಲಿ ಈ ಬಾರಿ 64,297 ಬ್ಯಾಲೆಟ್‌ ಯೂನಿಟ್‌ಗಳನ್ನು ಬಳಸಲಾಗಿದ್ದು,ಅದರಲ್ಲಿ ತಾಂತ್ರಿಕ ಸಮಸ್ಯೆ ಕಾರಣಕ್ಕೆ 212 ಬ್ಯಾಲೆಟ್‌ಗಳನ್ನು ಬದಲಿಸಲಾಯಿತು. ಅದೇ ರೀತಿ 57,782 ಕಂಟ್ರೋಲ್‌ ಯೂನಿಟ್‌ಗಳಲ್ಲಿ 340 ಕಂಟ್ರೋಲ್‌ ಯೂನಿಟ್‌ಗಳು ಮತ್ತು 57,786 ವಿವಿಪ್ಯಾಟ್‌ಗಳಲ್ಲಿ 698 ವಿವಿಪ್ಯಾಟ್‌ಗಳನ್ನು ಬದಲಿಸಲಾಯಿತು ಎಂದು ಸಂಜೀವ ಕುಮಾರ್‌ ತಿಳಿಸಿದರು.

182 ಕೋಟಿ ವಶ
ಈವರೆಗೆ ನಗದು ಸೇರಿದಂತೆ ಒಟ್ಟು 182 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 91.58 ಕೋಟಿ ನಗದು, 24.83 ಕೋಟಿ ರೂ. ಮೊತ್ತದ ನಕಲಿ ಮದ್ಯ. 66 ಕೋಟಿ ಮೊತ್ತದ ಚಿನ್ನಾಭರಣ ಹಾಗೂ ಇತರೆ ಗೃಹ ಬಳಕೆ ವಸ್ತುಗಳು, 40 ಲಕ್ಷ ಮೊತ್ತದ ಮಾದಕ ಪದಾರ್ಥಗಳು ಸೇರಿದೆ. ಚುನಾವಣಾ ನೀತಿ ಸಂಹಿತೆಯ 1,383 ಪ್ರಕರಣಗಳಲ್ಲಿ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ.

ಈ ಬಾರಿ ಮತದಾನ ಅತ್ಯಂತ ಸುಸೂತ್ರ, ಶಾಂತಿಯುತವಾಗಿ ನಡೆದಿದೆ. ಯುವ ಮತದಾರರು, ಮಹಿಳೆಯರು ಹಾಗೂ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದ್ದಾರೆ.
– ಸಂಜೀವ ಕುಮಾರ್‌
ಮುಖ್ಯ ಚುನವಣಾಧಿಕಾರಿ

ರಾಜ್ಯದ ಕೆಲವೆಡೆ ಮತದಾನ ಬಹಿಷ್ಕಾರ
ಮದ್ದೂರು/ ಲಿಂಗಸುಗೂರು/ ಪಿರಿಯಾಪಟ್ಟಣ
: ಮತದಾನದ ವೇಳೆ ಮೂಲಸೌಕರ್ಯ ಒದಗಿಸಿಲ್ಲ ಎಂಬ ಕಾರಣಕ್ಕೆ ಕೆಲವೆಡೆ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಕೆಲವೆಡೆ ಗಲಾಟೆಯಿಂದ ಮತದಾನಕ್ಕೆ ಭಂಗವಾಗಿದೆ.

ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ದಲಿತ ಕಾಲೋನಿಗೆ ಮೂಲ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಪ್ರತಿಭಟಿಸಿ ಮತದಾನ ಬಹಿಷ್ಕರಿಸಿದ್ದಾರೆ.ಇನ್ನು ಲಿಂಗಸುಗೂರು ತಾಲೂಕಿನ ನಡುಗಡ್ಡೆಗ್ರಾಮವಾದ ಕಡದರಗಡ್ಡಿಯಲ್ಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಸಂಬಂಧ ಸೌಕರ್ಯ ಕಲ್ಪಿಸಿಲ್ಲವೆಂದು ಗ್ರಾಮಸ್ಥರು ಪ್ರತಿಭಟಿಸಿ ಕೆಲಕಾಲ ಮತದಾನ ಬಹಿಷ್ಕರಿಸಿದರು. ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್‌ ವಿರುದ್ಧ ಕಲ್ಲುತೂರಾಟ ನಡೆಸಿ, ಘೇರಾವ್‌ ಹಾಕಿದರು.

ಗವಿಶ್ರೀಗೆ ಸಿಬ್ಬಂದಿ ಗೌರವ
ಕೊಪ್ಪಳ
: ನಾಡಿನ ಪ್ರಸಿದ್ದ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ಶನಿವಾರ ಕೊಪ್ಪಳದ ಕುವೆಂಪು ನಗರದಲ್ಲಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನ ಮಾಡಿದರು. ಗವಿಶ್ರೀಗಳು ಮತಗಟ್ಟೆಗೆ ಆಗಮಿಸುತ್ತಿದ್ದಂತೆ
ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ಎದ್ದು ನಿಂತು ಸ್ವಾಮೀಜಿ ಅವರನ್ನು ಮತಗಟ್ಟೆಗೆ ಆಹ್ವಾನ ಕೋರಿದರು. ಕೆಲವರು ನಿಂತಲ್ಲೇ ಆಶೀರ್ವಾದ ಪಡೆದರು. ಗವಿಶ್ರೀಗಳು ಮತಕೇಂದ್ರದಲ್ಲಿ ಓಟ್‌ ಮಾಡಿ ತೆರಳುವ ವರೆಗೂ
ಚುನಾವಣಾ ಸಿಬ್ಬಂದಿ ಎದ್ದು ನಿಂತು ಗೌರವ ಸಲ್ಲಿಸಿದ್ದು ಗಮನ ಸೆಳೆಯಿತು.

ಮತದಾನ ಮುಗಿಯುವವರೆಗೂ
ಅಂತ್ಯಸಂಸ್ಕಾರ ಮಾಡಲಿಲ್ಲ
ಶಿರಸಿ:
ಸ್ವಾತಂತ್ರ್ಯ ಹೋರಾಟಗಾರ ಕಾಶೀನಾಥ್‌ರಾವ್‌ ಮೂಡಿ ಅವರ ಪತ್ನಿ ಶುಕ್ರವಾರ ರಾತ್ರಿ ನಿಧನರಾಗಿದ್ದರೂ ಮತದಾನ ಮಾಡುವವರಿಗೆ ಸಮಸ್ಯೆ ಆಗಬಾರದು ಎಂದು ಸಂಜೆ 5 ಗಂಟೆ ಬಳಿಕ ಶವ ಸಂಸ್ಕಾರ ನಡೆಸಿದರು. ಸ್ವತಃ
ಕಾಶೀನಾಥ್‌ರಾವ್‌ ಅವರೂ ಮತದಾನ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದರು.

ನೋವಿನಲ್ಲೂ ಮತ ಚಲಾವಣೆ ಸುರಪುರದ ರಂಗಂಪೇಟೆಯ ಶ್ರವಣಕುಮಾರ ಚಿಲ್ಲಾಳ ಅವರ ಪತ್ನಿ ವಸಂತಬಾಯಿ (50) ಶನಿವಾರ ನಿಧನರಾದರು. ಪತ್ನಿ ವಿಯೋಗದ ನೋವಿನಲ್ಲೂ ಮತಗಟ್ಟೆ ಸಂಖ್ಯೆ 113ಕ್ಕೆ ಆಗಮಿಸಿ ಶ್ರವಣಕುಮಾರ ಮತ ಚಲಾಯಿಸಿದ್ದು ಗಮನಾರ್ಹವಾಗಿತ್ತು.

ಇವಿಎಂ ಸಮಸ್ಯೆ, ಮತದಾನ ವಿಳಂಬ
ಬೆಂಗಳೂರು:
ಶನಿವಾರ ನಡೆದ ಮತದಾನದ ವೇಳೆ ರಾಜ್ಯದ ಕೆಲವೆಡೆ ಮತಯಂತ್ರಗಳು ಕೈಕೊಟ್ಟ ಕಾರಣ
ಮತದಾನ ವಿಳಂಬವಾಯಿತು. ಕೊಳ್ಳೇಗಾಲದ ಐಇಎಲ್‌ಸಿ ಶಾಲೆಯ ಮತಗಟ್ಟೆ ಸಂಖ್ಯೆ 120ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಬಿಎಸ್ಪಿ ಅಭ್ಯರ್ಥಿ ಎನ್‌. ಮಹೇಶ್‌ 1 ಗಂಟೆ ಕಾಲ ಸಾಲಿನಲ್ಲಿ ಕಾಯುವಂತಾಗಿತ್ತು. ವಡಗೇರಾದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 182ರಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಸುಮಾರು 50 ನಿಮಿಷ ಮತದಾನ ಸ್ಥಗಿತ ಗೊಂಡಿತ್ತು. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೋಟಮ್ಮ ಸುಮಾರು 45 ನಿಮಿಷಗಳ ಕಾಲ ಮತಗಟ್ಟೆಯಲ್ಲಿಯೇ ಕಾದು ನಿಲ್ಲುವಂತಾಯಿತು. ಅಲ್ಲದೆ, ಪಿರಿಯಾಪಟ್ಟಣ, ಮುತ್ತೂರು, ಹಬಟೂರು, ಮೇಲೂರು, ಕಿತ್ತೂರು ಸೇರಿ ರಾಜ್ಯದ ಕೆಲವಡೆ ವಿವಿ ಪ್ಯಾಟ್‌ ಕೈಕೊಟ್ಟು ಮತದಾನ ವಿಳಂಬವಾಯಿತು.

ಮೊಬೈಲ್‌ ಟಾರ್ಚ್‌ ಬೆಳಕಿನಲ್ಲೇ ಕರ್ತವ್ಯ
ಹುಬ್ಬಳ್ಳಿ:
ಇಲ್ಲಿನ ಗೋಪನಕೊಪ್ಪದ ಮತಗಟ್ಟೆಗಳಲ್ಲಿ ವಿದ್ಯುತ್‌ ಸ್ಥಗಿತಗೊಂಡ ಪರಿಣಾಮ ಚುನಾವಣೆ ಸಿಬ್ಬಂದಿ 
ಮೊಬೈಲ್‌ ಬೆಳಕಿನಲ್ಲೇ ಕರ್ತವ್ಯ ನಿರ್ವಹಿಸು ವಂತಾಯಿತು. ಮತದಾರರು ಯಾರಿಗೆ ಮತ ಹಾಕ ಬೇಕು,ಯಾವ ಚಿಹ್ನೆ ಎಲ್ಲಿದೆ ಎಂದು ಹುಡುಕಾಡಲು ಸಮಯವಕಾಶ ಪಡೆಯುವಂತಾಯಿತು. ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಮಳೆ ಸುರಿದಿದ್ದರಿಂದ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 10 ಮತಗಟ್ಟೆಗಳಲ್ಲೂ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಈ ಮಧ್ಯೆ, ಗೋಪನಕೊಪ್ಪದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 36 ಮತಗಟ್ಟೆಯಲ್ಲಿ ಮೇಲ್ಛಾವಣೆಯಿಂದ ಮಳೆ ನೀರು ಮತಯಂತ್ರದ ಮೇಲೆ ಸುರಿಯಿತು.ಸಿಬ್ಬಂದಿ ಕೂಡಲೇ ಮತಯಂತ್ರದ ಸ್ಥಳ ಬದಲಿಸಿದರು.

ತಿಪ್ಪಾರೆಡ್ಡಿ ಪ್ರತಿಭಟನೆ
ಚಿತ್ರದುರ್ಗ:
ನಗರದ ಕೆಳಗೋಟೆ ತಿಪ್ಪಜ್ಜಿ ಸರ್ಕಲ್‌ ಸಮೀಪದ ಸೆಂಟ್‌ ಜೋಸೆಫರ ಕಾನ್ವೆಂಟ್‌ ಶಾಲೆ ಮತ ಗಟ್ಟೆಯಲ್ಲಿ ಇವಿಎಂನ್ನು ಕ್ರಮ ಬದ್ಧವಾಗಿ ಜೋಡಿಸಬೇಕು ಹಾಗೂ ಮತಯಂತ್ರವನ್ನು ಅದಲು ಬದಲು ಮಾಡಿ ಜೋಡಿಸಿದ ಸೆಕ್ಟರ್‌ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹಾಗೂ ಅವರ ಬೆಂಬಲಿಗರು ಮತಗಟ್ಟೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕ್ಷೇತ್ರದಲ್ಲಿ ಒಟ್ಟು 17 ಜನ ಸ್ಪರ್ಧಿಗಳು ಕಣದಲ್ಲಿದ್ದಾರೆ. ಹೀಗಾಗಿ ಎರಡು ಇವಿಎಂಗಳನ್ನು ಜೋಡಿಸಲಾಗಿತ್ತು. ಇವಿಎಂ ಸಂಖ್ಯೆ- 1 ಇಡುವ ಜಾಗದಲ್ಲಿ ಇವಿಎಂ-2ನ್ನು ಜೋಡಣೆ ಮಾಡಲಾಗಿತ್ತು.

ಟಾಪ್ ನ್ಯೂಸ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳು ಖುಲಾಸೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.