
ಕೋವಿಶೀಲ್ಡ್ 2ನೇ ಡೋಸ್ ವ್ಯಾಕ್ಸಿನೇಷನ್ ಮಧ್ಯಂತರ ಅವಧಿ ಪರಿಷ್ಕರಣೆ
Team Udayavani, May 14, 2021, 7:39 PM IST

ಬೆಂಗಳೂರು: ಕೋವಿಶೀಲ್ಡ್ 2ನೇ ವ್ಯಾಕ್ಸಿನೇಷನ್ ಪಡೆಯಲು ಈ ಮೊದಲು ನಿಗದಿಪಡಿಸಲಾಗಿದ್ದ ಅಂತರದ ಅವಧಿಯನ್ನು ಪರಿಷ್ಕರಿಸಲಾಗಿದೆ.
ಗುರುವಾರ ರಾಷ್ಟ್ರೀಯ ರೋಗನಿರೋದಕ ತಾಂತ್ರಿಕ ಸಲಹಾ ಸಮಿತಿ ಮತ್ತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ ಶಿಫಾರಸಿನ ಆಧಾರದ ಮೇಲೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್, ಮೊದಲ ಡೋಸ್ ಪಡೆದ ನಂತರ 12 ರಿಂದ 16 ವಾರಗಳ ಅಂತರದಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲು ಸಲಹೆ ನೀಡಲಾಗಿದೆ. ಆದ್ದರಿಂದ, 2 ಡೋಸ್‌ಗಳ ನಡುವಿನ COVISHIELD ಲಸಿಕೆಗಾಗಿ 6 ರಿಂದ 8 ವಾರಗಳ ಹಿಂದಿನ ಮಧ್ಯಂತರವನ್ನು 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ.
ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನಂತರ 12 ವಾರಗಳನ್ನು ಪೂರ್ಣಗೊಳಿಸದ ನಾಗರೀಕರು ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡದಂತೆ ಕೋರಲಾಗಿದೆ. 2 ಬಾರಿ ಪಡೆಯುವ ಲಸಿಕೆಯ ನಡುವಿನ ಈ ಪರಿಷ್ಕೃತ ಸಮಯದ ಅಂತರ COVISHIELD ಲಸಿಕೆಗೆ ಮಾತ್ರ ಅನ್ವಯಿಸುತ್ತದೆ ಮತ್ತು COVAXIN ಲಸಿಕೆಗೆ ಅಲ್ಲ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

KSRTC: ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ; ರಾ. ಹೆದ್ದಾರಿ ತಡೆದು ಪ್ರತಿಭಟನೆ

KAIVA movie review; ಮುಗ್ಧ ಪ್ರೇಮಿಯ ರೆಡ್ ಅಲರ್ಟ್

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

Surathkal: ಟೋಲ್ ಗೇಟ್ ಗೆ ಟ್ರಕ್ ಡಿಕ್ಕಿ