ಪಿಎಫ್ಐಯನ್ನು ನೀವ್ಯಾಕೆ ನಿಷೇಧ ಮಾಡ್ಲಿಲ್ಲ?

Team Udayavani, Feb 8, 2018, 6:30 AM IST

reddy-transport-minister.jpg

ವಿಧಾನಪರಿಷತ್‌: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪಿಎಫ್ಐ, ಎಸ್‌ಡಿಪಿಐ ನಿಷೇಧ ಯಾಕೆ ಮಾಡಲಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಹಿಂದೂಪರ ಕಾರ್ಯಕರ್ತರ ಹತ್ಯೆ ಪ್ರಕರಣಗಳ ಕುರಿತ ಚರ್ಚೆಗೆ ಉತ್ತರಿಸಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಆ ಸಂಘಟನೆ ನಿಷೇಧ ಮಾಡಿದ್ದರೆ ಅಥವಾ ನಿಷೇಧ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದರೆ ಇಷ್ಟೆಲ್ಲ ಸಮಸ್ಯೆ ಇರಲಿಲ್ಲ ಎಂದು ಹೇಳಿದರು.

ಮುಸ್ಲಿಂ ಸಂಘಟನೆಗಳು ಇದ್ದರೆ ಕಾಂಗ್ರೆಸ್‌ ಓಟ್‌ಬ್ಯಾಂಕ್‌ ಒಡೆಯುತ್ತವೆ ಎಂಬ ರಾಜಕೀಯ ಲೆಕ್ಕಾಚಾರದಿಂದ ಬಿಜೆಪಿ ನಿಷೇಧ ಮಾಡಲಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಹಿಂದೂ ಯುವಕರಂತೆ 14 ಜನ ಮುಸಲ್ಮಾನರು ಕೊಲೆಯಾಗಿದ್ದು, ಬಹುತೇಕ ಕೊಲೆಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕñ ‌ìರು ಭಾಗಿಯಾಗಿದ್ದಾರೆ. ಮೂಡಿಗೆರೆಯ ಧನ್ಯಶ್ರೀ ಮತ್ತು ವಿಜಯಪುರದ ದಾನಮ್ಮ ಸಾವಿನ ಹಿಂದೆ ಬಿಜೆಪಿ ಮುಖಂಡರ ಪಾತ್ರ ಇದೆ. ಈ ಬಗ್ಗೆ ಬಿಜೆಪಿ ನಾಯಕರು ಚಕಾರ ಎತ್ತುವುದಿಲ್ಲ. ಇದರ ವಿರುದ್ಧ ಪ್ರತಿಭಟನೆ ಮಾಡುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಬಿಜೆಪಿಯವರು ಶಿಫಾರಸ್ಸು ಮಾಡಿದರೆ, ಸಂಘ ಪರಿವಾರ ಸೇರಿದಂತೆ ಹಿಂದೂ  ಸಂಘಟನೆಗಳು ಮತ್ತು ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನೂ ನಿಷೇಧ ಮಾಡಲಾಗುವುದು. ಕೊಲೆಗಡುಕರು ಯಾರೇ ಆಗಿದ್ದರೂ ಅವರನ್ನು ಗಲ್ಲಿಗೇರಿಸಲಿ. ಯಾರನ್ನೂ ರಕ್ಷಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಹಿಂದಿನ ಸರ್ಕಾರಕ್ಕೆ ಹೊಲಿಸಿದರೆ ಅಪರಾಧ ಪ್ರಕರಣ ಕಡಿಮೆಯಾಗಿದೆ ಎಂದು ಹೇಳಿದರು.

ಹಿಂದುಗಳ ಹತ್ಯೆಯಾದರೆ ಮಾತ್ರ ಬಿಜೆಪಿಯವರು ಸಾಂತ್ವನ ಹೇಳುತ್ತಾರೆ. ದೀಪಕ್‌ ರಾವ್‌ ಕೊಲೆಯಾದರೆ ಅವರ ಮನೆಗೆ ತೆರಳುವ ಬಿಜೆಪಿ ನಾಯಕರು ಬಶೀರ್‌ ಆಸ್ಪತ್ರೆಯಲ್ಲಿದ್ದರೂ ಅವರನ್ನು ಭೇಟಿ ಮಾಡುವುದಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರಶಾಂತ ಪೂಜಾರಿ ಕೊಲೆಯಾದಾಗ ಕಾಂಗ್ರೆಸ್‌ನವರು ಅವರ ಮನೆಗೆ ಹೋಗಲಿಲ್ಲ ಎಂದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಗೌರಿ ಪ್ರಕರಣ ಶೀಘ್ರ ಇತ್ಯರ್ಥ
ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಮಾಡಿದವರ ಸುಳಿವು ಸಿಕ್ಕಿದೆ. ಆದರೆ, ದಾಬೋಲ್ಕರ್‌ ಪ್ರಕರಣದಲ್ಲಿ ಸಂಶಯಾಸ್ಪದವಾಗಿ ಬಂಧಿಸಿದ ವ್ಯಕ್ತಿಯನ್ನು ಕೋರ್ಟ್‌ ದೋಷ ಮುಕ್ತಗೊಳಿಸಿರುವುದರಿಂದ ಅಪರಾಧಿಗಳ ಪತ್ತೆ ಹಚ್ಚಲು ಕಷ್ಟವಾಗಿದೆ. ಅದೇ ರೀತಿ ಆಗಬಾರದು ಎನ್ನುವ ಕಾರಣಕ್ಕೆ ಆರೋಪಿಗಳನ್ನು ಬಂಧಿಸಿಲ್ಲ. ಆದರೆ, ಶೀಘ್ರವೇ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂದಿಸಲಾಗುವುದು ಎಂದರು. ಆದರೆ, ಕಲಬರ್ಗಿ ಹತ್ಯೆಯ ಬಗ್ಗೆ ತನಿಖೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ತಡೆ ಸಮಿತಿ ನೀಡಿರುವ ಮಧ್ಯಂತರ ವರದಿ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅಭಿಪ್ರಾಯ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇಲಿಂದ ಮೇಲೆ ಪೊಲಿಸರ ವರ್ಗಾವಣೆ ಮಾಡುತ್ತಿರುವುದರಿಂದ ಆರೋಪಿಗಳಿಗೆ ಶಿಕ್ಷೆ ನೀಡುವ ಪ್ರಮಾಣ ಕಡಿಮೆಯಾಗುತ್ತಿದೆ. ಅದನ್ನು ತಪ್ಪಿಸಲು ಪೊಲಿಸರನ್ನು ವರ್ಷಕ್ಕೊಮ್ಮೆ ವರ್ಗಾವಣೆ ಮಾಡುವ ಪ್ರವೃತ್ತಿ ನಿಲ್ಲಬೇಕು. ಅಲ್ಲದೇ ಪೊಲಿಸರ ಮೇಲೆ ಹಲ್ಲೆ ನಡೆದರೆ ರಕ್ಷಣೆಗೆ ಗುಂಡು ಹಾರಿಸಲು ಸೂಚಿಸಿದ್ದೇನೆ ಎಂದರು.

ರಾಮಲಿಂಗಾ ರೆಡ್ಡಿ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಅತ್ಯಾಚಾರಿಗಳು ಮತ್ತು ಮುಸ್ಲಿàಂ ಕೊಲೆಗಡುಕರಿಗೆ ಭಯ ಇಲ್ಲದಿರುವುದರಿಂದ ರಾಜಾರೋಷವಾಗಿ ಕೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.

ಶೋಭಾಗ್‌ ಹೇಳ್ಳೋಕ್‌ ಧೈರ್ಯ ಇಲ್ವಾ ?
*ಸಂಸದೆ ಶೋಭಾ ಕರಂದ್ಲಾಜೆಗೆ ಬುದ್ದಿ ಹೇಳಲಿಕ್ಕೆ ಬಿಜೆಪಿಯಲ್ಲಿ ಯಾರಿಗೂ ಧೈರ್ಯ ಇಲ್ವಾ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು. ಸಂಸದರಾಗಿರುವ ಶೋಬಾ ಅವರು, ಮುಖ್ಯಮಂತ್ರಿ ಖಾದರ್‌ ಮನೆಗೆ ಊಟಕ್ಕೆ ಹೋಗಿ ಡ್ಯಾನ್ಸ್‌ ಮಾಡಿದ್ದಾರೆ ಎಂದು ಮಾತನಾಡುತ್ತಾರೆ. ಮುಖ್ಯಮಂತ್ರಿಯ ಬಗ್ಗೆ ಅಷ್ಟು ಹಗುರವಾಗಿ ಮಾತನಾಡುವ ಅವರಿಗೆ ಬುದ್ದಿ ಹೇಳಲು ಅವರ ಬಾಯಿಗೆ ಬೀಗ ಹಾಕಲು ನಿಮಗ್ಯಾರಿಗೂ ಧೈರ್ಯ ಇಲ್ವಾ ಎಂದು ಕೆಣಕಿದರು. ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಕಾರ್ಯಕರ್ತರ ಮನೆಗೆ ಊಟಕ್ಕೆ ಹೋದಾಗ ರಾಕ್‌ ಅಂಡ್‌ ರೋಲ್‌ ಮಾಡ್ತಾರಾ ? ಎಂದು ಪ್ರಶ್ನಿಸಿದರು. ರೆಡ್ಡಿಯವರ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಟಾಪ್ ನ್ಯೂಸ್

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

bCharmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

kejriwal

AAP ಮುಗಿಸಲು ಬಿಜೆಪಿ ಆಪರೇಷನ್‌ ಬಲೆ: ಕೇಜ್ರಿವಾಲ್ ಕಿಡಿ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Govt ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

ರಾಜ್ಯ ಸರಕಾರಕ್ಕೆ ವರ್ಷ: ಸುರ್ಜೇವಾಲ ಹರ್ಷ

Congress ರಾಜ್ಯ ಸರಕಾರಕ್ಕೆ ವರ್ಷ: ಸುರ್ಜೇವಾಲ ಹರ್ಷ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police crime

National Conference ರೋಡ್‌ ಶೋ ವೇಳೆ ಮೂವರಿಗೆ ಚಾಕು ಇರಿತ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

bCharmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

police crime

Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.