Udayavni Special

ಡ್ರಗ್ಸ್‌ ತನಿಖಾ ಮಾಹಿತಿ ಲೀಕ್‌: ಎಸಿಪಿ ಸೇರಿ ಇಬ್ಬರ ಅಮಾನತು

ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎಸಿಪಿ, ಮುಖ್ಯಪೇದೆ

Team Udayavani, Sep 24, 2020, 12:43 PM IST

ಡ್ರಗ್ಸ್‌ ತನಿಖಾ ಮಾಹಿತಿ ಲೀಕ್‌: ಎಸಿಪಿ ಸೇರಿ ಇಬ್ಬರ ಅಮಾನತು

ಬೆಂಗಳೂರು: ಸ್ಯಾಂಡಲ್‌ವುಡ್‌ಡ್ರಗ್ಸ್‌ಪ್ರಕರಣದ ಸಿಸಿಬಿ ತನಿಖೆ ತೀವ್ರಗೊಳ್ಳುತ್ತಿರುವ ನಡುವೆಯೂ ಬಂಧಿತಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ತನಿಖಾ ಹಂತದ ಮಾಹಿತಿ ಸೋರಿಕೆ ಮಾಡಿದ ಆರೋಪದಡಿಯಲ್ಲಿ ಸಿಸಿಬಿಯ ಎಸಿಪಿ ಸೇರಿದಂತೆ ಇಬ್ಬರನ್ನು ಅಧಿಕಾರಿ-ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಎಸಿಪಿಎಂ.ಆರ್‌.ಮುಧವಿ ಮತ್ತುಹೆಡ್‌ಕಾನ್‌ ಸ್ಟೇಬಲ್‌ ಮಲ್ಲಿಕಾರ್ಜುನ್‌ ಅಮಾನತು ಗೊಂಡವರು. ಸ್ಯಾಂಡಲ್‌ವುಡ್‌ಡ್ರಗ್ಸ್‌ಪ್ರಕರಣದ ತನಿಖಾ ತಂಡದಲ್ಲಿ ಎಸಿಪಿ ಮುಧವಿ ಇರಲಿಲ್ಲ. ಆದರೂ ತಮ್ಮ ಸಹೋದ್ಯೋಗಿಗಳ ಮೂಲಕವಿಚಾರ ತಿಳಿದುಕೊಂಡು ಆರೋಪಿಗಳು ಮತ್ತು ಅವರ ಸಂಬಂಧಿಕರಿಗೆ ತಲುಪಿಸುತ್ತಿದ್ದರು.ಅದರಿಂದ ತನಿಖೆಗೆ ಸಾಕಷ್ಟುಹಿನ್ನಡೆಯಾಗುತ್ತಿತ್ತು. ಅನುಮಾನಗೊಂಡ ತನಿಖಾ ತಂಡದ ಅಧಿಕಾರಿಗಳುಹಿರಿಯಅಧಿಕಾರಿಗಳಗಮನಕ್ಕೆ ತಂದಿದ್ದಾರೆ. ಅನಂತರ ಇಲಾಖಾ ಆಂತರಿಕ ತನಿಖೆ ನಡೆಸಿದಾಗ ಎಸಿಪಿ ಕೈವಾಡ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಎಸಿಪಿ ವಿರುದ್ಧ ಇಲಾಖಾ ಶಿಸ್ತು ಕ್ರಮಕ್ಕೆ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿ ವರದಿ ನೀಡಿದ್ದರು. ಈ ವರದಿಯನ್ನಾಧರಿಸಿ ಬುಧವಾರ ಎಸಿಪಿ ಮುಧವಿ ಮತ್ತು ಅವರಿಗೆ ಸಹಾಯ ಮಾಡಿದ ಆರೋಪದಲ್ಲಿ ಹೆಡ್‌ಕಾನ್‌ಸ್ಟೆàಬಲ್‌ ಮಲ್ಲಿಕಾರ್ಜುನ್‌ ಅವರನ್ನು ಆಯುಕ್ತ ಕಮಲ್‌ ಪಂತ್‌ ಅಮಾನತು ಮಾಡಿದ್ದಾರೆ.

ಆರೋಪಿಗಳ ಜತೆ ಸಂಪರ್ಕ: ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮೂಲದ ವಿರೇನ್‌ ಖನ್ನಾ ಜತೆ ಎಸಿಪಿ ಮುಧವಿ ಹಣದ ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಸಿಸಿಬಿ ವಶದಲ್ಲಿದ್ದ ಸಂದರ್ಭದಲ್ಲಿ ಆರೋಪಿಗೆ ತನ್ನ ಸಹಚರರು ಹಾಗೂ ಸಂಬಂಧಿಕರ ಜತೆ ಸಂಪರ್ಕಿಸಲು ಸಹಾಯ ಮಾಡಿದ್ದರು. ಎಸಿಪಿ ಮುಧವಿ ಸೂಚನೆ ಮೇರೆಗೆ ಹೆಡ್‌ಕಾನ್‌ಸ್ಟೆàಬಲ್‌ ಮಲ್ಲಿಕಾರ್ಜುನ್‌ ಆರೋಪಿ ವಿರೇನ್‌ ಖನ್ನಾಗೆ ಸಾಕಷ್ಟು ಬಾರಿ ಮೊಬೈಲ್‌ ನೀಡಿದ್ದಾರೆ. ಈ ಮೂಲಕ ಆತ ದೆಹಲಿಯಲ್ಲಿರುವ ತನ್ನ ಸಂಬಂಧಿಕರನ್ನು ಸಂಪರ್ಕಿಸಿ ಪ್ರಕರಣದಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದ್ದಾನೆ ಎಂಬುದು ಗೊತ್ತಾಗಿದೆ. ಅಲ್ಲದೆ, ತಲೆಮರೆಸಿಕೊಂಡಿರುವ ಶ್ರೀಲಂಕಾದ ಕ್ಯಾಸಿನೋ ಮಾಲೀಕ ಶೇಖ್‌ ಫಾಜಿಲ್‌ ಹಾಗೂ ಆತನ ಕುಟುಂಬ ಸದಸ್ಯರ ಜತೆ ಎಸಿಪಿ ಮುಧವಿ ನಂಟು ಹೊಂದಿದ್ದರು ಎಂಬುದು ಗೊತ್ತಾಗಿದೆ. ಆತನ ವಿರುದ್ಧ ನಡೆಯುತ್ತಿರುವ ತನಿಖೆಯ ಪ್ರಮುಖ ಅಂಶಗಳನ್ನು ಕುಟುಂಬ ಸದಸ್ಯರ ಜತೆ ಹಂಚಿಕೊಂಡು ಬಹಿರಂಗ ಪಡಿಸುತ್ತಿದ್ದರು. ಈ ಮೂಲಕ ಸಂಸ್ಥೆಗೆ ವಿಶ್ವಾಸರ್ಹತೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

50 ಲಕ್ಷ ರೂ.ಗೆ ಡೀಲ್‌? :  ಎಸಿಪಿ ಮುಧವಿ ಅವರು ಆರೋಪಿ ವಿರೇನ್‌ ಖನ್ನಾ ಜತೆ 50 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಪ್ರಕರಣದ ತನಿಖಾ ಹಂತದ ವಿಚಾರವನ್ನು ಆಗಿಂದಾಗ್ಗೆ ತಿಳಿಸಬೇಕು. ಜತೆಗೆ ತಮ್ಮವರ ಸಂಪರ್ಕಕ್ಕೆ ಮೊಬೈಲ್‌ ವ್ಯವಸ್ಥೆ ಮಾಡಬೇಕುಎಂಬ ಒಪ್ಪಂದದ ಮೇರೆಗೆ 50 ಲಕ್ಷ ರೂ.ಗೆ  ಡೀಲ್‌ ನಡೆದಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಮಾನತು ಜತೆಗೆ ಮುಧವಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಸಿಬಿಯ ಮೂಲಗಳು ತಿಳಿಸಿವೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ

ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ

ಚೀನದ ಚಳಿ ಬಿಡಿಸಲು ಸಿದ್ಧ; ಅಮೆರಿಕದಿಂದ ಚಳಿಗಾಲದ ಯುದ್ಧ ಸಂಬಂಧಿ ಕಿಟ್‌ ಖರೀದಿಸಿದ ಭಾರತ

ಚೀನದ ಚಳಿ ಬಿಡಿಸಲು ಸಿದ್ಧ; ಅಮೆರಿಕದಿಂದ ಚಳಿಗಾಲದ ಯುದ್ಧ ಸಂಬಂಧಿ ಕಿಟ್‌ ಖರೀದಿಸಿದ ಭಾರತ

ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಮಾಜಿ ಸಿಎಂ ಕಮಲ್‌ನಾಥ್‌ ವಿರುದ್ಧ ಬಿಜೆಪಿ ಆಕ್ರೋಶ

ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಮಾಜಿ ಸಿಎಂ ಕಮಲ್‌ನಾಥ್‌ ವಿರುದ್ಧ ಬಿಜೆಪಿ ಆಕ್ರೋಶ

ಬಾಂಡ್‌ಗಳಲ್ಲಿ ಸಂಪತ್ತು ಹೂಡಿಕೆಗೆ ಟೀಕೆ

ಬಾಂಡ್‌ಗಳಲ್ಲಿ ಸಂಪತ್ತು ಹೂಡಿಕೆಗೆ ಟೀಕೆ

IPLಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

ಐಪಿಎಲ್‌ ಪಂದ್ಯಗಳ “ದ್ವಿಶತಕ’ ಬಾರಿಸಿ ಧೋನಿ

ಐಪಿಎಲ್‌ ಪಂದ್ಯಗಳ “ದ್ವಿಶತಕ’ ಬಾರಿಸಿದ ಧೋನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

bng-tdy-3

93 ಸ್ಯಾನಿಟರಿ ಪ್ಯಾಡ್‌ ದಹನಯಂತ್ರ?

bng-tdy-2

ವೃಷಭಾವತಿ ಉಕ್ಕಿ ಹರಿದರೆ ದ್ವೀಪ ಸೃಷ್ಟಿ

ಹೈಪರ್ ಲೂಪ್ ಎಂಬ ದುಬಾರಿ ಕನಸು

ಶೀಘ್ರವಾಗಿ ಏರ್‌ಪೋರ್ಟ್‌ ತಲುಪಲು ಹೊಸ ಮಾದರಿ: ಹೈಪರ್ ಲೂಪ್ ಎಂಬ ದುಬಾರಿ ಕನಸು

ಹೆಚ್ಚಿನ ಚಿಕಿತ್ಸೆಗೆ ಕಾರಜೋಳ ಪುತ್ರನನ್ನು ಏರ್‌ ಲಿಫ್ಟ್ ಮೂಲಕ ಹೈದರಾಬಾದ್‌ಗೆ ಸ್ಥಳಾಂತರ

ಕಾರಜೋಳ ಪುತ್ರನ ಅರೋಗ್ಯ ಸ್ಥಿತಿ ಗಂಭೀರ : ಚಿಕಿತ್ಸೆಗಾಗಿ ಏರ್‌ ಲಿಫ್ಟ್ ಮೂಲಕ ಹೈದರಾಬಾದ್‌ಗೆ

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavaniಹೊಸ ಸೇರ್ಪಡೆ

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ 2 ಕೋ.ರೂ.ವೆಚ್ಚದಲ್ಲಿ ಬಾಲಕಿಯರ ಹಾಸ್ಟೆಲ್‌ ನಿರ್ಮಾಣ

ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ 2 ಕೋ.ರೂ.ವೆಚ್ಚದಲ್ಲಿ ಬಾಲಕಿಯರ ಹಾಸ್ಟೆಲ್‌ ನಿರ್ಮಾಣ

ಗ್ರಾಮೀಣ ಭಾಗದ ರೈತರಿಗೆ ಕಾಡು ಪ್ರಾಣಿಗಳ ಕಾಟ

ಗ್ರಾಮೀಣ ಭಾಗದ ರೈತರಿಗೆ ಕಾಡು ಪ್ರಾಣಿಗಳ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.