ಇಸ್ರೋ ಕಚೇರಿ ಇಲ್ಲೇ ಉಳಿಯಲು ಪ್ರೊ.ಧವನ್‌ ಕಾರಣ

Team Udayavani, Jan 4, 2019, 6:41 AM IST

isro.jpg

ಬೆಂಗಳೂರು: “ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಉಳಿಯಲು ಪದ್ಮವಿಭೂಷಣ ಪ್ರೊ.ಸತೀಶ್‌ ಧವನ್‌ ಮೂಲ ಕಾರಣಕರ್ತರು’ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಬಣ್ಣಿಸಿದರು.

ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆವರಣದಲ್ಲಿ ಗುರುವಾರ “ಪ್ರಸ್ತುತ’ ಸಂಸ್ಥೆ ಹಮ್ಮಿಕೊಂಡಿದ್ದ “ಪ್ರೊ. ಸತೀಶ್‌ ಧವನ್‌ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕ್ರಂ ಸಾರಾಭಾಯಿ ಅವರ ದಿಢೀರ್‌ ನಿರ್ಗಮನದಿಂದ ಬಾಹ್ಯಾಕಾಶ ಕ್ಷೇತ್ರ ಅನಾಥವಾಯಿತು. ಅದನ್ನು ಮುನ್ನಡೆಸಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಆಯ್ಕೆ ಮಾಡಿದ್ದು ಪ್ರೊ.ಸತೀಶ್‌ ಧವನ್‌ ಅವರನ್ನು.

ಆದರೆ, ಈ ಜವಾಬ್ದಾರಿಯನ್ನು ಸ್ವೀಕರಿಸಲು ಅಂದು ಪ್ರಧಾನಿ ಅವರಿಗೇ ಸತೀಶ್‌ ಮೂರು ಷರತ್ತುಗಳನ್ನು ವಿಧಿಸಿದ್ದರು. ಆ ಷರತ್ತುಗಳಲ್ಲಿ ಇಸ್ರೋ ಕೇಂದ್ರ ಕಚೇರಿಯು ಬೆಂಗಳೂರಿನಲ್ಲೇ ಮುಂದುವರಿಯಬೇಕು ಎನ್ನುವುದು ಕೂಡ ಆಗಿತ್ತು. ಇದು ನಂತರದ ದಿನಗಳಲ್ಲಿ ಈ ಕೇಂದ್ರ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳಿಗೆ ಪ್ರೇರಣೆಯಾಯಿತು ಎಂದು ಸ್ಮರಿಸಿದರು.  

ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವು ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ಬಾಹ್ಯಾಕಾಶ ವಿಭಾಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುವುದು ಎಂಬುದು ಬಹುತೇಕ ವಿಜ್ಞಾನಿಗಳ ಅಭಿಪ್ರಾಯ. ಇಂದು ದೇಶ ಎದುರಿಸುತ್ತಿರುವ ಹಲವು ಗಂಭೀರ ಸಮಸ್ಯೆಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಪರಿಹಾರ ಕಲ್ಪಿಸುತ್ತಿದೆ. ಪ್ರಸ್ತುತ ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ನೋಡಿದರೆ ಪ್ರೊ.ಧವನ್‌ ಅವರಿಗೆ ನಿಜವಾಗಿಯೂ ಖುಷಿಯಾಗುತ್ತಿತ್ತು ಎಂದು ಹೇಳಿದರು. 

ಪಿಎಸ್‌ಎಲ್‌ವಿ ವಿಫ‌ಲಗೊಂಡಾಗ ಪ್ರೊ.ಧವನ್‌ ಸ್ವತಃ ಮಾಧ್ಯಮಗಳ ಮುಂದೆ ಹೋಗಿ ಅದರ ಹೊಣೆ ಹೊತ್ತಿದ್ದರು. ಇದು ನಾಯಕತ್ವದ ಗುಣ. ಮುಂದೆ ಯಶಸ್ಸು ಸಾಧಿಸಿದಾಗ ಡಾ.ಅಬ್ದುಲ್‌ ಕಲಾಂ, ಆ ಯಶಸ್ಸಿನ ರೂವಾರಿ ಪ್ರೊ. ಧವನ್‌ ಎಂದರು. ಇದು ಇಸ್ರೋ ಸಂಸ್ಕೃತಿಗೆ ಒಂದು ಉದಾಹರಣೆ ಎಂದು ಕಿರಣ್‌ ಕುಮಾರ್‌ ತಿಳಿಸಿದರು.

ಸತೀಶ್‌ ಧವನ್‌ ಅವರ ಪುತ್ರಿ ಹಾಗೂ ವಿಜ್ಞಾನಿ ಪ್ರೊ.ಜೋತ್ಸಾಧವನ್‌ ಮಾತನಾಡಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲೇ ಹುಟ್ಟಿಬೆಳೆದ ನನಗೆ ತವರು ಮನೆಗೆ ಬಂದಂತೆ ಭಾಸವಾಗುತ್ತಿದೆ ಎಂದು ಮೆಲುಕುಹಾಕಿದರು. ನನ್ನ ತಂದೆ ಕೇವಲ ದ್ವಿತೀಯ ದರ್ಜೆಯಲ್ಲಿ ಬಿಎ ಪಾಸಾಗಿದ್ದರು.

ನಂತರ ಅವರು ತಮ್ಮದೇ ಆದ ಹಾದಿಯಲ್ಲಿ ಮಹಾ ಸಾಧನೆ ಮಾಡಿದರು. ಇದಕ್ಕೆ ಅವಕಾಶಗಳೂ ಸಿಕ್ಕವು. ಆಗಷ್ಟೇ ಸ್ವತಂತ್ರಗೊಂಡ ರಾಷ್ಟ್ರಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಭಿನ್ನ ಹಾದಿಯಿಂದ ಇದು ಅವರಿಗೆ ಸಾಧ್ಯವಾಯಿತು ಎಂದರು. ಪದ್ಮವಿಭೂಷಣ ಪ್ರೊ.ರೊದ್ದಂ ನರಸಿಂಹ, ಪದಾಧಿಕಾರಿ ಅನುರಾಗ್‌ಕುಮಾರ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

4-cet

CET Results: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

mohammad-mokhber

Iran President ಇಬ್ರಾಹಿಂ ರೈಸಿ ದುರ್ಮರಣ; ಅಧಿಕಾರ ಕೈಗೆತ್ತಿಕೊಂಡ ಮೊಹಮ್ಮದ್ ಮೊಖ್ಬರ್

3-banahatti

Boys Drowned: ಬನಹಟ್ಟಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು      

Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್

Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್

is there any reserve day for ipl qualifiers? what rule says

IPL Playoff ಪಂದ್ಯಗಳಿಗೆ ಮೀಸಲು ದಿನವಿದೆಯೇ? ಮಳೆ ನಿಯಮ ಏನು ಹೇಳುತ್ತದೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

5-vijayanagara

Rain: ಹಲವು ವರ್ಷಗಳ ನಂತರ ಕೆರೆಗಳಿಗೆ ನೀರು; ರೈತರ ಮೊಗದಲ್ಲಿ ಮಂದಹಾಸ

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

4-cet

CET Results: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ

Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.