ಮದುವೆಯಾಗುವುದಾಗಿ 98 ಲಕ್ಷ ರೂ. ವಂಚನೆ
Team Udayavani, Dec 29, 2020, 12:28 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಮ್ಯಾಟ್ರಿ ಮೋನಿಯಲ್ ವೆಬ್ ಸೈಟ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಮಹಿಳೆಗೆ ವಿವಾಹವಾಗುವುದಾಗಿ ನಂಬಿಸಿ 98 ಲಕ್ಷ ರೂ. ಪಡೆದು ವಂಚಿಸಿದ್ದಾನೆ.
ಈ ಸಂಬಂಧ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಕಾರ್ತಿಕ್ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ಕೌಟುಂಬಿಕ ಕಲಹದಿಂದ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. 13 ವರ್ಷದ ಮಗಳ ಜತೆ ಪ್ರತ್ಯೇಕವಾಗಿ ವಾಸವಿದ್ದಾರೆ. ಎರಡನೇ ಮದುವೆಗೆ ಮಹಿಳೆ ಮುಂದಾಗಿದ್ದು, ವೈವಾಹಿಕ ಜಾಲತಾಣದಲ್ಲಿ ತಮ್ಮ ಸ್ವ ವಿವರ ಹಾಕಿದ್ದರು.
ಇದನ್ನೂ ಓದಿ : ರಾಜಕೀಯ ಪಕ್ಷ ಸ್ಥಾಪನೆಯಿಲ್ಲ ಎಂದ ಸೂಪರ್ ಸ್ಟಾರ್: ಮಹತ್ವದ ನಿರ್ಧಾರ ಪ್ರಕಟಿಸಿದ ರಜಿನಿ
ಆರೋಪಿ ಕಾರ್ತಿಕ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದು, ಮದುವೆಯಾಗುವುದಾಗಿ ಹೇಳಿದ್ದ. ಪರಸ್ಪರ ಆತ್ಮೀಯತೆ ಬೆಳೆದಿತ್ತು. ಮದುವೆಗೂ ಮುನ್ನವೇ ಅಪಾರ್ಟ್ಮೆಂಟ್ ಫ್ಲ್ಯಾಟ್ ಖರೀದಿಸೋಣ ವೆಂದು ಆರೋಪಿ ಮಹಿಳೆ ಬಳಿ ಹೇಳಿದ್ದ. ಅದಕ್ಕೆ 70 ಲಕ್ಷ ತಗುಲುತ್ತದೆ ಎಂದು ಹೇಳಿ ಹಣ ಪಡೆದುಕೊಂಡಿದ್ದ. ಆದರೆ, ಫ್ಲ್ಯಾಟ್ ಖರೀದಿಸದೆ ವಂಚಿಸಿದ್ದಾನೆ. ಸಂತ್ರಸ್ತೆಯನ್ನು ಬೆದರಿಸಿ 28 ಲಕ್ಷ ಪಡೆದಿದ್ದ. ಪ್ರಸ್ತುತ ದೂರು ನೀಡಿದ್ದಾರೆಂದು ಪೋಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ