ಎಸ್‌ಐಟಿ ತನಿಖೆ ನಡುವೆಯೇ ದಿನಕ್ಕೊಂದು ಸ್ವರೂಪ 


Team Udayavani, Sep 8, 2017, 6:10 AM IST

7BNP-(32).jpg

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಎಸ್‌ಐಟಿ ತನಿಖೆ ನಡುವೆಯೇ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಸೈದ್ಧಾಂತಿಕ ವಿಚಾರದ ಹಿನ್ನೆಲೆಯಲ್ಲಿ ಆಗಿದ್ದು ನಕ್ಸಲೀಯರ ಒಂದು ಗುಂಪು ಅಥವಾ ಬಲಪಂಥೀಯ ತೀವ್ರಗಾಮಿಗಳ ಕೈವಾಡ ಇರಬಹುದೆಂಬ ಮಾತುಗಳ ನಡುವೆಯೇ ಮಾಜಿ ಸಚಿವ ಶೃಂಗೇರಿಯ ಜೀವರಾಜ್‌ ವಿವಾದಾತ್ಮಕ ಹೇಳಿಕೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಜತೆಗೆ ರಾಜಕೀಯ ನಾಯಕರ ಹೇಳಿಕೆಗಳು ಆರೋಪ-ಪ್ರತ್ಯಾ ರೋಪಗಳು ಎಲ್ಲೋ ಒಂದು ಕಡೆ ತನಿಖೆಯ ಹಾದಿಯನ್ನೇ ದಿಕ್ಕು ತಪ್ಪಿಸಬಹುದು ಅಥವಾ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಗೌರಿ ಲಂಕೇಶ್‌ ಅವರ ಸಹೋದರ ಇಂದ್ರಜಿತ್‌ ಲಂಕೇಶ್‌ ಹಾಗೂ ಸಹೋದರಿ ಕವಿತಾ ಲಂಕೇಶ್‌ ಜತೆ “ಉದಯವಾಣಿ’ನಡೆಸಿದ ಸಂದರ್ಶನ ಇಲ್ಲಿದೆ.

“ತನಿಖೆ ನ್ಯಾಯ ಸಮ್ಮತವಾಗಿ ಆಗಬೇಕು’: ಇಂದ್ರಜಿತ್‌ ಲಂಕೇಶ್‌

ಗೌರಿ ಅವರ ಹತ್ಯೆ ಪ್ರಕರಣ ಬೇರೆ ಸ್ವರೂಪ ಪಡೆಯುತ್ತಿರು ವಂತಿದೆಯಲ್ಲ?
ನೋಡಿ ನಾನು ಮೊದಲಿಗೆ ಹೇಳಿ ಬಿಡುತ್ತೇನೆ. ನಮ್ಮ ಇಡೀ ಕುಟುಂಬ ದುಃಖದಲ್ಲಿದೆ. ನಮಗೆ ಈಗ ಬೇಕಿರುವುದು ನ್ಯಾಯ. ಬೇರೆ ಯಾವ ವಿಚಾರಗಳೂ ನಮಗೆ ಬೇಡ.

ಶಾಸಕ ಜೀವರಾಜ್‌ ಹೇಳಿಕೆ ವಿವಾದವಾಗಿದೆಯಲ್ಲ?
 ಯಾರ್ಯಾರೋ ವೈಯಕ್ತಿಕ ದೃಷ್ಟಿಯಲ್ಲಿ ಏನೇನೋ ಕಮೆಂಟ್‌ ಮಾಡ್ತಿದಾರೆ. ನಾನು ಅಂತಹ ಹೇಳಿಕೆಗಳಿಗೆಲ್ಲ ಪ್ರತಿ ಕ್ರಿಯಿಸಲು ಹೋಗುವುದಿಲ್ಲ. ಸಂಪೂರ್ಣವಾದ ತನಿಖೆ ನಡೆದು ಸತ್ಯಾಂಶ ಹೊರ ಬರಬೇಕು ಎಂಬು ದಷ್ಟೇ ನಮ್ಮ ಒತ್ತಾಯ.

ನೀವು ಸಿಬಿಐ ತನಿಖೆಗೆ ಒತ್ತಾಯಿಸಿದಿರಿ, ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತು?
  ನಾನು ಸಿಬಿಐಗೆ ವಹಿಸಿ ಎಂದು ಹೇಳಿದ್ದು ಹೌದು. ಆದರೆ, ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ. ಅಮ್ಮ ಸಹ ಎಸ್‌ಐಟಿ ತನಿಖೆ ಆಗಲಿ ಎಂದು ಹೇಳಿದರು. ಅಮ್ಮನ ಮಾತಿಗೆ ಗೌರವ ಕೊಟ್ಟು ನಾನು ಒಪ್ಪಿದ್ದೇನೆ. ಎಸ್‌ಐಟಿ ತನಿಖೆಯಲ್ಲಿ ನ್ಯಾಯ ಸಿಗದಿದ್ದರೆ ಕುಟುಂಬ ಸದಸ್ಯರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.

ಗೌರಿ ಅವರ ಹತ್ಯೆ ವಿಚಾರದಲ್ಲಿ ನಿಮ್ಮ ಹಾಗೂ ಕವಿತಾ ಅವರ ಹೇಳಿಕೆಗಳಲ್ಲಿ ವ್ಯತ್ಯಾಸವಿದೆಯಾ?
  ನೋ, ಯಾವುದೇ ಗೊಂದಲ ಇಲ್ಲ.ನಮ್ಮ ಕುಟುಂಬ ಒಟ್ಟಾಗಿ ಸ್ಪಷ್ಟತೆ ಹೊಂದಿದೆ. ತನಿಖೆ ನ್ಯಾಯ ಸಮ್ಮತವಾಗಿ ಆಗಬೇಕು. ಹಂತಕರ ಪತ್ತೆ ಹಚ್ಚಬೇಕು.ಗೌರಿಗೂ ನ್ಯಾಯ ಸಿಗಬೇಕು,ನಮಗೂ ನ್ಯಾಯ ಸಿಗಬೇಕು.

ಹತ್ಯೆಗೆ ನಿಮ್ಮ ಪ್ರಕಾರ ಕಾರಣ ಏನಿರಬಹುದು?
   ಸೈದ್ಧಾಂತಿಕ ವಿಚಾರಕ್ಕಾಗಿ ಆಗಿರಬಹುದು. ಬಲಪಂಥೀಯ ತೀವ್ರ ಗಾಮಿಗಳ ಕೈವಾಡವೂ ಇರಬಹುದು, ಏಕೆಂದರೆ ಗೌರಿ ಎಡ ಪಂಥೀಯ ವಿಚಾರ ಸಿದ್ಧಾಂತ ಪ್ರತಿ ಪಾದಿಸುತ್ತಿದ್ದರು. ನಕ್ಸಲೀಯರ ಒಂದು ಗುಂಪಿನ ಕೈವಾಡವೂ ಇರಬಹುದು ಎಂಬ ಅನುಮಾನವೂ ಇದೆ. ಹೀಗಾಗಿ,ತನಿಖೆ ಎಲ್ಲ ಕೋನದಿಂದ ಆಗಿ ಸತ್ಯಾಂಶ ಗೊತ್ತಾಗಲಿ.ನಮಗೆ ಈ ವಿಚಾರದಲ್ಲಿ ರಾಜಕೀಯ ಬೇಕಿಲ್ಲ.ಗೌರಿಯ ವಿಚಾರ,ಸಿದ್ಧಾಂತಗಳಲ್ಲಿ ಅಭಿಪ್ರಾಯ ಬೇಧ ಇರಬಹುದು. ಆದರೆ, ಅದಕ್ಕೆ ಕೊಲೆ ಸಮರ್ಥನೀಯವಲ್ಲ.

ಮೊದಲು ಎಸ್‌ಐಟಿ ತನಿಖೆಯಾಗಲಿ: ಕವಿತಾ ಲಂಕೇಶ್‌

ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣ ಬೇರೆ ಸ್ವರೂಪ ಪಡೆಯುತ್ತಿರುವಂತಿದೆಯಲ್ಲ?
   ಇದು ದುರಂತ. ಕ್ರೂರ ಮನಸ್ಸುಗಳು ಏನೇನೋ ಹರಡುತ್ತಿವೆ.ನಮಗೆ ಅಂತಿಮವಾಗಿ ಬೇಕಿರುವುದು ನ್ಯಾಯ.

ಗೌರಿ ಲಂಕೇಶ್‌ ಅವರಿಗೆ ಬರವಣಿಗೆಯೇ ಮುಳುವಾಯ್ತು ಅನಿಸುತ್ತಾ?
   ಪತ್ರಿಕೆಯಲ್ಲಿ ಬರೆದರೆ ಕೊಲೆ ಮಾಡುವುದು ಎಂದರೆ ಕ್ರೂರತನ. ಪ್ರಾಣಿಗಳಿಗಿಂತ ಹೀನತನ. ಅಪ್ಪ ಬರೀತಿರಲಿಲ್ವಾ? ಸರ್ಕಾರಗಳೇ ಬಿದ್ದು ಹೋಗ್ತಿದು. ಅವರ ಮೇಲೆ ದಾಳಿ ಆಗಿತ್ತಾ?ಖುಷÌಂತ್‌ ಸಿಂಗ್‌ ಬರೀತಿರ ಲಿಲ್ವಾ? ಅವರಿಗೂ ಬೆದರಿಕೆಗಳು ಇದ್ದವು ಆದರೆ,ನಮ್ಮ ಅಕ್ಕ ಗೌರಿ ಹೇಡಿಯಾಗಿರಲಿಲ್ಲ.

ಶಾಸಕ ಜೀವ ರಾಜ್‌ ಅವರ ಹೇಳಿಕೆ ವಿವಾದವಾಗಿದೆಯಲ್ಲ?
  ಯಾರೋ ಏನೋ ಹೇಳ್ತಾರೆ. ಅವೆಲ್ಲವೂ ಅಪ್ರಸ್ತುತ. ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲಿ.

ನಿಮ್ಮ ಪ್ರಕಾರ ಗೌರಿ ಲಂಕೇಶ್‌ ಅವರ ಹತ್ಯೆಗೆ ಕಾರಣ ಏನಿರಬಹುದು? ನಿಮ್ಮ ಹಾಗೂ ಇಂದ್ರಜಿತ್‌ ಹೇಳಿಕೆಗಳಲ್ಲಿ ಭಿನ್ನ ಧ್ವನಿ ಇದೆಯಾ?
   ಇಲ್ಲ. ಯಾವುದೇ ಭಿನ್ನ ಧ್ವನಿ ಇಲ್ಲ. ಅವರೇ, ಇವರೇ ಎಂದು ನಾನು ಹೇಳುವುದಿಲ್ಲ. ಬಲ ಪಂಥೀಯರೇ
ಆಗಲಿ ಅಥವಾ ನಕ್ಸಲೀಯರ ಒಂದು ಗುಂಪೇ ಮಾಡಿರಲಿ. ಯಾರೇ ಆಗಿರಲಿ ಶಿಕ್ಷೆ ಆಗಲಿ ಎಂಬುದಷ್ಟೇ ನಮ್ಮ ಇಡೀ ಕುಟುಂಬದ ಮನವಿ.

ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂಬ ಒತ್ತಾಯವೂ ಇದೆಯಲ್ಲ?
    ಇದೀಗ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದೆ. ಮೊದಲು ಎಸ್‌ಐಟಿ ತನಿಖೆಯಾಗಲಿ. ಯಾವ ಸಂಸ್ಥೆಯಿಂದ ತನಿಖೆ ಎನ್ನುವುದಕ್ಕಿಂತ ಸತ್ಯಾಂಶ ಹೊರಬರಬೇಕು. ದುಷ್ಕ ರ್ಮಿಗಳು ಪತ್ತೆಯಾಗಬೇಕು. ಹಂತಕರ ಶಿಕ್ಷೆಯಾಗಬೇಕು. ಸದ್ಯಕ್ಕೆ ತನಿಖೆ ವಿಚಾರದಲ್ಲೂ ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.

– ಎಸ್‌.ಲಕ್ಷ್ಮಿ ನಾರಾಯಣ

ಟಾಪ್ ನ್ಯೂಸ್

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚುನಾವಣೆ ಗೆಲ್ಲಲ್ಲು ಮೂರು ಪಕ್ಷಗಳಿಂದ ವಾಮಮಾರ್ಗ: ವಾಟಾಳ್ ನಾಗರಾಜ್

ಚುನಾವಣೆ ಗೆಲ್ಲಲ್ಲು ಮೂರು ಪಕ್ಷಗಳಿಂದ ವಾಮಮಾರ್ಗ: ವಾಟಾಳ್ ನಾಗರಾಜ್

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ಆನೆಗಳ ಹಾವಳಿ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ : ಸಚಿವ ಉಮೇಶ್ ಕತ್ತಿ

ಆನೆಗಳ ಹಾವಳಿ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ : ಸಚಿವ ಉಮೇಶ್ ಕತ್ತಿ

ಜೇವಕ್ಕೆ ಕುತ್ತು ತಂದ ಅನೈತಿಕ ಸಂಬಂಧ : ವಿವಾಹಿತ ಪ್ರೇಮಿಗಳು ಆತ್ಮಹತ್ಯೆ

ಜೀವಕ್ಕೆ ಕುತ್ತು ತಂದ ಅನೈತಿಕ ಸಂಬಂಧ : ಕೊರಟಗೆರೆಯಲ್ಲಿ ವಿವಾಹಿತ ಪ್ರೇಮಿಗಳಿಬ್ಬರ ಆತ್ಮಹತ್ಯೆ

dr-sudhakar

ಒಮಿಕ್ರಾನ್ ; ಆರೂ ಮಂದಿಯ ಮೇಲೆ ನಿಗಾ ಇಟ್ಟಿದ್ದೇವೆ: ಸಚಿವ ಡಾ.ಸುಧಾಕರ್

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.