ಮೇಕೆ ಹಾಲು ಕುಡಿದು ಬೆಳೆದ ಸಿಂಹದ ಮರಿಗಳು


Team Udayavani, Jul 29, 2018, 12:01 PM IST

meke-halu.jpg

ಆನೇಕಲ್‌: ಆಗ ತಾನೇ ಹುಟ್ಟಿ ಕಣ್ಣು ಬಿಡುವ ಮೊದಲೇ ತಾಯಿಂದ ದೂರವಾದ 2 ಸಿಂಹದ ಮರಿಗಳು ಮೂರು ತಿಂಗಳು ಮೇಕೆ ಹಾಲು ಕುಡಿದು ಬೆಳೆದು ನಲಿದಾಡುತ್ತ ಸಂತಸದಿಂದಿವೆ. ಇದು ಮೃಗಾಲಯಗಳ ಇತಿಹಾಸದಲ್ಲೇ ಇದೇ ಮೊದಲ ಪ್ರಯತ್ನ.

ಆನೇಕಲ್‌ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌. ಗೋಕುಲ್‌ ನೇತೃತ್ವದ ತಂಡ ಈ ಒಂದು ವಿಶೇಷ ಅಪರೂಪದ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.  ಕಳೆದ ಏ.25 ರಂದು 8 ವರ್ಷದ ಸಿಂಹಣಿ ಸಾನಾ, 6 ವರ್ಷದ ಸಿಂಹ ಶಂಕರ್‌ ಜೋಡಿಗೆ 4 ಮರಿಗಳು ಜನಿಸಿದ್ದವು.

ಸಾನಾ ಮರಿ ಹಾಕಿದ ಕೆಲವೇ ಗಂಟೆಗಳಲ್ಲಿ ಒಂದು ಮರಿಯನ್ನು ತಿಂದು ಬಿಟ್ಟಿತ್ತು. ಇದನ್ನು ಗಮನಿಸಿದ ವೈದ್ಯಾಧಿಕಾರಿ ಉಮಾಶಂಕರ್‌, ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಉಳಿದ 3 ಮರಿಗಳನನ್ನು ತಾಯಿಂದ ದೂರ ಮಾಡಿ ಉದ್ಯಾನವನದ ಆಸ್ಪತ್ರೆಯಲ್ಲಿ ಆಶ್ರಯ ನೀಡಲು ನಿರ್ಧರಿಸಿದರು.

ಅದರಂತೆ, ಸಾನಾ ಸಿಂಹಿಣಿಯನ್ನು ಮತ್ತೂಂದು ಕೇಜ್‌ಗೆ ಸಾಗಿಸಿ 3 ಮರಿಗಳನ್ನು ವಿಶೇಷ ಕಾಳಜಿಯಿಂದ ತೆಗೆದುಕೊಂಡು ಆಸ್ಪತ್ರೆಗೆ ಸ್ಥಳಾಂತರಿಸಿದರು. ಆ ವೇಳೆಗೆ ತಾಯಿಯ ತುಳಿತಕ್ಕೆ ಗಾಯಗೊಂಡಿದ್ದ ಮರಿ ಆಸ್ಪತ್ರೆಗೆ ಬರುತ್ತಿದ್ದಂತೆ ಮೃತ ಪಟ್ಟಿತ್ತು.

ಉಳಿದ 2 ಮರಿಗಳನ್ನು ಜೋಪಾನವಾಗಿ ರಾತ್ರಿ ಹಗಲು ಮುತುವರ್ಜಿಯಿಂದ ನೋಡಿಕೊಂಡಿದ್ದರಿಂದ ಇಂದು 2 ಮರಿಗಳು ಆರೋಗ್ಯವಾಗಿ ನಲಿದಾಡುತ್ತಿವೆ. ಈ 3 ತಿಂಗಳು ಮೇಕೆ ಹಾಲನ್ನು ಅದರಲ್ಲೂ ಸ್ಥಳೀಯವಾಗಿ ಮೇಕೆಗಳಿಂದ ಹಾಲು ಸಂಗ್ರಹಿಸಿ ಮರಿಗಳಿಗೆ ನೀಡಲಾಗಿದೆ. ಇದು ಮೃಗಾಲಯ ಇತಿಹಾಸದಲ್ಲಿ ಮೊದಲ ಪ್ರಯತ್ನ ಎಂಬುದು ಪ್ರಶಂಸೆಗೆ ಪಾತ್ರವಾಗಿದೆ.

ಸಾನಾ ಸಿಂಣಿಗೆ ಇದು 3ನೇ ಹೆರಿಗೆ. ಈ ಹಿಂದೆ 2 ಬಾರಿ ಮರಿಗಳನ್ನು ಹಾಕಿ ಒಂದೇ ದಿನದಲ್ಲಿ ತಿಂದು ಬಿಡುತ್ತಿತ್ತು. ಹೀಗಾಗಿ ನಾವು ಈ ಬಾರಿ ಮರಿಗಳನ್ನು ಹೇಗಾದರೂ ರಕ್ಷಿಸಲೇಬೇಕೆಂದು ನಿರ್ಧರಿಸಿ ಮರಿಗಳಿಗೆ ಆಸ್ಪತ್ರೆಯಲ್ಲಿ ಆಶ್ರಯ ನೀಡಬೇಕಾಯಿತು ಎಂದು ಉದ್ಯಾನವನದ ಕಾರ್ಯನಿರ್ವಹಕ ನಿರ್ದೇಶಕ ಆರ್‌.ಗೋಕುಲ್‌ “ಉದಯವಾಣಿ’ಗೆ ತಿಳಿಸಿದರು.

ನನ್ನ ಅನುಭವದಲ್ಲಿ ಸಿಂಹದ ಮರಿಗಳಿಗೆ ಮೇಕೆ ಹಾಲು ಕೊಟ್ಟು ಬೆಳೆಸಿದ್ದು ಎಲ್ಲೂ ಕೇಳಿರಲಿಲ್ಲ, ಅದರಲ್ಲೂ ಮರಿಗಳು ಕಣ್ಣು ಬಿಡುವ ಮೊದಲೇ ತಾಯಿಂದ ದೂರವಾದ ಬಳಿಕವೂ ಅವುಗಳನ್ನು ಬದುಕಿಸಿ ಬೆಳೆಸುವುದು ದೊಡ್ಡ ಸಾಹಸದ ಕೆಲಸ.

ಉದ್ಯಾನವನದ ವೈದ್ಯಾಟಊಕಾರಿ ಉಮಾಶಂಕರ್‌ ನೇತೃತ್ವದ ವೈದ್ಯರ ತಂಡ ಇಂತಹ ಅಪರೂಪದ ಸಾಹಸದ ಪ್ರಯತ್ನ ಮಾಡಿ ಮರಿಗಳನ್ನು ಬೆಳೆಸಿ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಈ ಪ್ರಯತ್ನ ಇತರರಿಗೆ ಮಾದರಿ ಎಂದು ಹೇಳಿದರು.

ಮರಿಗಳಿಗೆ ಎರಡೂವರೆ ತಿಂಗಳವರೆಗೂ ಮೇಕೆ ಹಾಲು ನೀಡುತ್ತ ಬಂದು ನಂತರ ಕೋಳಿ ಮಾಂಸವನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ತಿನ್ನಿಸುತ್ತ ಬರಲಾಗಿತ್ತು. ಸದ್ಯ 2 ಮರಿಗಳಿಗೆ ಮೂರು ತಿಂಗಳಾಗಿದೆ.

ಆಸ್ಪತ್ರೆ ಆವರಣದಲ್ಲಿ ಸ್ವತ್ಛಂದವಾಗಿ ಮರಿಗಳು ನಡೆದಾಡಿಕೊಂಡು ಸಂತಸದಿಂದಿವೆ ಎಂದು ಅವರು ಹೇಳಿದರು. ಉದ್ಯಾನವನದಲ್ಲಿ 10 ಗಂಡು, 10 ಹೆಣ್ಣು ಸಿಂಹಗಳು ಸೇರಿ 20 ಸಿಂಹಗಳು ಇದ್ದವು. ಮೂರು ತಿಂಗಳ ಈ ಮರಿಗಳು 2 ಹೆಣ್ಣಾಗಿವೆ. ಇವು ಸೇರಿದರೆ ಸಿಂಹಗಳ ಸಂಖ್ಯೆ 22ಕ್ಕೆ ಏರಿದೆ.

ಇನ್ನೂ ಆರು ತಿಂಗಳು ಮೃಗಾಲಯದ ಆಸ್ಪತ್ರೆಯಲ್ಲಿ ಆಶ್ರಯ ನೀಡಿ ನಂತರ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು ಎಂದು ಆರ್‌.ಗೋಕುಲ್‌ ತಿಳಿಸಿದರು.    ಚಿತ್ರ ಇದೆ 28 ಆನೇಕಲ್‌ ಪಿ ಎಚ್‌ 2 ಆನೇಕಲ್‌ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಪರೂಪದ ಸಿಂಹದ ಮರಿಗಳು.     

ಟಾಪ್ ನ್ಯೂಸ್

ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25ramamandira

ಅಯೋಧ್ಯೆ ರಾಮ ಮಂದಿರದ ತಳಪಾಯಕ್ಕೆ ಕರ್ನಾಟಕದ ಶಿಲೆಗಳು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

breast cancer

ಪ್ರತಿ 4 ನಿಮಿಷಕ್ಕೆ ಓರ್ವ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್‌

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಹಿಜ್ಬುಲ್‌ನ ನಾಲ್ವರು ಉಗ್ರರಿಗೆ ಜೈಲು ಶಿಕ್ಷೆ

ಹಿಜ್ಬುಲ್‌ನ ನಾಲ್ವರು ಉಗ್ರರಿಗೆ ಜೈಲು ಶಿಕ್ಷೆ

ಕರಾವಳಿಯ ಶಾಲೆಗಳಲ್ಲಿ ಮರುಕಳಿಸಿದ ಸಂಭ್ರಮ

ಕರಾವಳಿಯ ಶಾಲೆಗಳಲ್ಲಿ ಮರುಕಳಿಸಿದ ಸಂಭ್ರಮ

ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಐಟಿ ಕಂಪೆನಿಗಳಿಂದ 1.2 ಲಕ್ಷ ಹೊಸಬರ ನೇಮಕ

ಐಟಿ ಕಂಪೆನಿಗಳಿಂದ 1.2 ಲಕ್ಷ ಹೊಸಬರ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.