Udayavni Special

ಬಿಬಿಎಂಪಿ ವಿಶೇಷ ಆಯುಕ್ತರಿಗೆ ಹೆಚ್ಚಿದ ಜವಾಬ್ದಾರಿ


Team Udayavani, Sep 17, 2019, 3:08 AM IST

bbmp2

ಬೆಂಗಳೂರು: ಬಿಬಿಎಂಪಿ ಆಯುಕ್ತರ ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ಬಿಬಿಎಂಪಿಯ ವಿಶೇಷ (ಅಪರ) ಆಯುಕ್ತರಿಗೆ ತಲಾ ಎರಡು ವಲಯಗಳ ಸಂಪೂರ್ಣ ಅಧಿಕಾರ ಜವಾಬ್ದಾರಿ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೆ.6ರಂದು ಬಿಬಿಎಂಪಿಯ ಆಡಳಿತ ವಿಕೇಂದ್ರೀಕರಣ ಹಾಗೂ ಜನರ ಸಮಸ್ಯೆಗಳು ವಲಯ ಮಟ್ಟದಲ್ಲೇ ಪರಿಹರಿಸುವುದಕ್ಕೆ ಕ್ರಮಕೈಗೊಳ್ಳುವ ಉದ್ದೇಶದಿಂದ ಪಾಲಿಕೆಯ ಎಂಟು ವಲಯಗಳಿಗೆ ನಾಲ್ಕು ಮಂದಿ ವಿಶೇಷ ಆಯುಕ್ತರನ್ನು ನೇಮಿಸಿ, ತಲಾ ಎರಡು ವಲಯಗಳ ಜವಾಬ್ದಾರಿ ನೀಡುವಂತೆ ಸೂಚನೆ ನೀಡಿದರು.

ಇದರಂತೆ ಸೋಮವಾರ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕ್ರಮವಹಿಸುವುದಕ್ಕೆ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಲಯಗಳಿದ್ದು, ಎಲ್ಲ ವಲಯಗಳ ಮೇಲುಸ್ತುವಾರಿಯನ್ನು ಬಿಬಿಎಂಪಿಯ ಆಯುಕ್ತರೇ ನಿರ್ವಹಿಸುತ್ತಿರುವುದರಿಂದ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸಮಸ್ಯೆಯಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ವಿಶೇಷ ಆಯುಕ್ತರಿಗೆ ತಲಾ ಎರಡು ವಲಯಗಳ ಅಧಿಕಾರವಹಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೆಎಂಸಿ ಕಾಯ್ದೆಯಡಿ ವಿಶೇಷ ಆಯುಕ್ತರು ಎರಡು ವಲಯಗಳಿಗೆ ಸಂಬಂಧಿಸಿದ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆ, ತೋಟಗಾರಿಕೆ, ರಸ್ತೆ ಗುಂಡಿ, ತ್ಯಾಜ್ಯ ವಿಲೇವಾರಿ ವಿದ್ಯುತ್‌, ಆರೋಗ್ಯ, ಶಿಕ್ಷಣ ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ವಲಯಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾಗಿದೆ. ಇದರೊಂದಿಗೆ ಪಾಲಿಕೆ ಆಯವ್ಯಯ, ವಿಶೇಷ ಅನುದಾನ, ಆಯವ್ಯಯದ ಯೋಜನೆಗಳಿಗೆ ಅನುಮೋದನೆ, ವಿಶೇಷ ಆಯುಕ್ತರಿಗೆ ಹಂಚಿಕೆಯಾಗದ ವಿಷಯ ಮತ್ತು ಶಾಖೆ ಜವಾಬ್ದಾರಿ, ಪಾಲಿಕೆ ಕೌನ್ಸಿಲ್‌ ಸಭೆ ಮತ್ತು ಸ್ಥಾಯಿ ಸಮಿತಿಗೆ ಪ್ರಸ್ತಾವನೆ ಮಂಡಿಸುವ ಅಧಿಕಾರಿ ನಿರ್ವಹಣೆ ಹಾಗೂ ಸರ್ಕಾರದ ಹಂತದ ಸಭೆ, ಸಮಿತಿಗಳಲ್ಲಿ ಪಾಲಿಕೆಯಿಂದ ಆಯುಕ್ತರು ಪ್ರತಿನಿಧಿಸುವ ಹೊಣೆಗಾರಿಕೆ ನೀಡಲಾಗಿದೆ.

ವಿಶೇಷ ಆಯುಕ್ತರಿಗೆ ಆಸ್ತಿ ತೆರಿಗೆ ಸಂಗ್ರಹ, ಕಂದಾಯ ಹಾಗೂ ಜಾಹೀರಾತು ಸೇರಿದಂತೆ ಬಿಬಿಎಂಪಿಯ ಆದಾಯ ಹೆಚ್ಚಿಸುವ ಜವಾಬ್ದಾರಿಯನ್ನೂ ನೀಡಲಾಗಿದೆ. ಈಗ ಎಲ್ಲ ಕಡತಗಳಿಗೂ ಆಯುಕ್ತರೇ ಸಹಿ ಮಾಡುತ್ತಿದ್ದು, ಇದರಿಂದ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿಲ್ಲ ಹಾಗೂ ಆಡಳಿತಾತ್ಮಕ ನಿರ್ವಹಣೆ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ, ಈಗ ವಿಶೇಷ ಆಯುಕ್ತರಿಗೆ ವಲಯಗಳ ಮೇಲುಸ್ತುವಾರಿ ನೀಡಿರುವುದರಿಂದ ಬಿಬಿಎಂಪಿ ಆಯುಕ್ತರಿಗೆ ಹೊರೆ ಕಡಿಮೆ ಆಗುವುದರ ಜತೆಗೆ ಸಮಸ್ಯೆಗಳಿಗೆ ಶ್ರೀಘ್ರ ಪರಿಹಾರ ಸಿಗಲಿದೆ. ವಿಶೇಷ ಆಯುಕ್ತರು ಈಗ ಇರುವ ಜವಾಬ್ದಾರಿಯ ಜತೆಗೆ ವಲಯಗಳ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ.

ವಲಯ ವಿಶೇಷ ಆಯುಕ್ತರು
-ಪೂರ್ವ ಮತ್ತು ಯಲಹಂಕ ಡಾ.ರವಿಕುಮಾರ್‌ ಸುರಪುರ (ಯೋಜನೆ ವಿಭಾಗ)
-ದಕ್ಷಿಣ ಮತ್ತು ಆರ್‌.ಆರ್‌.ನಗರ ಎಂ.ಲೋಕೇಶ್‌ (ಹಣಕಾಸು)
-ಪಶ್ವಿ‌ಮ ಮತ್ತು ದಾಸರಹಳ್ಳಿ ಅನ್ಬುಕುಮಾರ್‌ (ಆಡಳಿತ)
-ಮಹಾದೇವಪುರ ಮತ್ತು ಬೊಮ್ಮನಹಳ್ಳಿ ಡಿ.ರಂದೀಪ್‌ (ಘನತ್ಯಾಜ್ಯ ನಿರ್ವಹಣೆ)

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್‌ ವೈರಸ್ ನಿಂದ ಟರ್ಕಿ ಗೆಲುವು ಸಾಧಿಸಿದ್ದು ಹೇಗೆ?

ಕೋವಿಡ್‌ ವೈರಸ್ ನಿಂದ ಟರ್ಕಿ ಗೆಲುವು ಸಾಧಿಸಿದ್ದು ಹೇಗೆ?

ಪರಿಸ್ಥಿತಿ ಅಧ್ಯಯನ ಮಾಡಿ 2 ತಿಂಗಳ ಬಳಿಕ ಶಾಲೆ ಪ್ರಾರಂಭಿಸುವುದು ಸೂಕ್ತ : ಸಿದ್ದರಾಮಯ್ಯ

ಪರಿಸ್ಥಿತಿ ಅಧ್ಯಯನ ಮಾಡಿ 2 ತಿಂಗಳ ಬಳಿಕ ಶಾಲೆ ಪ್ರಾರಂಭಿಸುವುದು ಸೂಕ್ತ : ಸಿದ್ದರಾಮಯ್ಯ

ಚಾರ್ಮಾಡಿ ಧಾರಾಕಾರ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ

ಚಾರ್ಮಾಡಿ ಧಾರಾಕಾರ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ

ವಿಜಯಪುರಕ್ಕೆ ಮುಂಬೈನಿಂದ ಮತ್ತೆ 107 ಜನ ಆಗಮನ

ವಿಜಯಪುರಕ್ಕೆ ಮುಂಬೈನಿಂದ ಮತ್ತೆ 107 ಜನ ಆಗಮನ

nisarga

ಹಾರಿದ ಮೇಲ್ಛಾವಣಿ, ಧರೆಗುರುಳಿದ ಮರ, ಜಖಂಗೊಂಡ ಕಾರು: ಇಲ್ಲಿವೆ ‘ನಿಸರ್ಗ’ದ ಭಯಾನಕ ವಿಡಿಯೋಗಳು

ಲಾಕ್‌ಡೌನ್‌ ವಿವಿಧ ಚರಣ ಅಂಕಿ ಸಂಖ್ಯೆಯ ಕಥನ

ಲಾಕ್‌ಡೌನ್‌ ವಿವಿಧ ಚರಣ ಅಂಕಿ ಸಂಖ್ಯೆಯ ಕಥನ

covid-19-inia

ದೇಶದಲ್ಲಿ ಸೋಂಕಿನಿಂದ 1 ಲಕ್ಷಕ್ಕೂ ಹೆಚ್ಚು ಜನರು ಗುಣಮುಖ: ಒಂದೇ ದಿನ 9 ಸಾವಿರ ಹೊಸ ಪ್ರಕರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bda-asti

ಬಿಡಿಎ ಆಸ್ತಿ ಮಾರಾಟಕ್ಕೆ ಇದು ಸಕಾಲವೇ?

kathtada-karmika

ಕಟ್ಟಡ ಕಾರ್ಮಿಕರಿಗೆ ಮೆಟ್ರೋ ದುಂಬಾಲು

sonku-palike

ಸೋಂಕು: ಪಾಲಿಕೆ ಕಾರ್ಯವೈಖರಿ ಬದಲು

nagara-400

ನಗರದಲ್ಲಿ 400ರ ಗಡಿದಾಟಿದ ಸೋಂಕು

grat wel

ಅದ್ಧೂರಿ ಸ್ವಾಗತಕ್ಕೆ ಆಕ್ರೋಶ

MUST WATCH

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

ಹೊಸ ಸೇರ್ಪಡೆ

04-June-03

ಮತ್ತೆ ಮೂವರಿಗೆ ಕೋವಿಡ್

ಕಾಸರಗೋಡು: 3 ಪ್ರಕರಣ

ಕಾಸರಗೋಡು: 3 ಪ್ರಕರಣ

04-June-02

ಮುಂಗಾರು ಬಿತ್ತನೆಗೆ ರೈತರು ಸಜ್ಜು

ಕೋವಿಡ್‌ ವೈರಸ್ ನಿಂದ ಟರ್ಕಿ ಗೆಲುವು ಸಾಧಿಸಿದ್ದು ಹೇಗೆ?

ಕೋವಿಡ್‌ ವೈರಸ್ ನಿಂದ ಟರ್ಕಿ ಗೆಲುವು ಸಾಧಿಸಿದ್ದು ಹೇಗೆ?

04-June-01

19 ಹೊಸ ಕಂಟೇನ್ಮೆಂಟ್‌ ಝೋನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.