ಈ ವರ್ಷ ಪ್ರತಿ ಸೆಕೆಂಡಿಗೆ 2 ಬಿರಿಯಾನಿ ಆರ್ಡರ್!
Team Udayavani, Dec 17, 2022, 10:47 AM IST
ಬೆಂಗಳೂರು: ಖಾದ್ಯ ಪ್ರೇಮಿಗಳು ಅತಿ ಹೆಚ್ಚು ಆರ್ಡರ್ ಮಾಡಿರುವ ಆಹಾರ ಪದಾರ್ಥಗಳ ಪೈಕಿ “ಬಿರಿಯಾನಿ’ ಈ ವರ್ಷವೂ ಟಾಪ್ ಸ್ಥಾನ ಪಡೆದಿದೆ. ಆಹಾರ ಡೆಲಿವರಿ ಪ್ಲಾಟ್ಫಾರಂ ಆಗಿ ರುವ ಸ್ವಿಗ್ಗಿ ತನ್ನ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು, 2022ರಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ತಿಳಿಸಿದೆ.
ಸತತ 7ನೇ ವರ್ಷವೂ ಅತಿ ಹೆಚ್ಚು ಮಂದಿ ಆರ್ಡರ್ ಮಾಡಿದ ಆಹಾರ ಎಂಬ ಖ್ಯಾತಿಗೆ “ಚಿಕನ್ ಬಿರಿಯಾನಿ’ ಪಾತ್ರವಾಗಿದೆ. ಪ್ರತಿ ನಿಮಿಷಕ್ಕೆ 137 ಅಂದರೆ ಸೆಕೆಂಡಿಗೆ 2.28ರಷ್ಟು ಚಿಕನ್ ಬಿರಿಯಾನಿಗಳು ಆರ್ಡರ್ ಆಗಿವೆ. ಇಂಥ ಟಾಪ್ 5 ಖಾದ್ಯಗಳ ಪೈಕಿ 2ನೇ ಸ್ಥಾನವನ್ನು ಮಸಾಲೆ ದೋಸೆ ಪಡೆದರೆ, ನಂತರದ ಸ್ಥಾನಗಳಲ್ಲಿ ಚಿಕನ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲ ಮತ್ತು ಬಟರ್ ನಾನ್ ಇವೆ. ಸ್ನ್ಯಾಕ್ಗಳ ಪೈಕಿ ಸಮೋಸಾ ಮೊದಲ ಸ್ಥಾನ ಪಡೆದಿದೆ.
ಮತ್ತೂಂದು ವಿಶೇಷವೆಂದರೆ, ಬೆಂಗ ಳೂರಿನ ವ್ಯಕ್ತಿಯೊಬ್ಬರು ಈ ವರ್ಷ ಬರೋಬ್ಬರಿ 16.6 ಲಕ್ಷ ರೂ. ಮೌಲ್ಯದ ದಿನಸಿಯನ್ನು ಆರ್ಡರ್ ಮಾಡಿದ್ದಾರೆ. ಈ ಪೈಕಿ ದೀಪಾವಳಿಯ ಸಂದರ್ಭದಲ್ಲಿ ಅವರು ಒಂದೇ ಬಾರಿಗೆ 75 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾರೆ ಎಂದೂ ಸ್ವಿಗ್ಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ