ರಾಜಕಾಲುವೆ ತ್ಯಾಜ್ಯ ತಡೆಯಲು ಟ್ರ್ಯಾಶ್‌ ಬ್ಯಾರಿಯರ್‌ ಅಳವಡಿಕೆ

Team Udayavani, Apr 26, 2019, 11:11 AM IST

ಬೆಂಗಳೂರು: ಅನಧಿಕೃತವಾಗಿ ರಾಜಕಾಲುವೆ ಸೇರುತ್ತಿರುವ ತ್ಯಾಜ್ಯವನ್ನು ಶೀಘ್ರ ತೆರವುಗೊಳಿಸಲು ಕಾಲುವೆಗಳಲ್ಲಿ ಟ್ರ್ಯಾಶ್‌ ಬ್ಯಾರಿಯರ್‌ (ತೇಲುವ ಕಸ ತಡೆಯುವ ಅಲ್ಯೂಮಿನಿಯಂ ಬಲೆ) ಅಳವಡಿಕೆ ಹಾಗೂ ಹೂಳು ಸಂಗ್ರಹ ತೊಟ್ಟಿ ನಿರ್ಮಾಣಕ್ಕೆ ಪಾಲಿಕೆ ನಿರ್ಧರಿಸಿದೆ.

ರಾಜಕಾಲುವೆಗಳಲ್ಲಿ ಭಾರೀ ಪ್ರಮಾಣದಲ್ಲಿ ಘನತ್ಯಾಜ್ಯ, ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜಕಾಲುವೆ ಸೇರುತ್ತಿರುವ ತೇಲುವ ಹಾಗೂ ಮುಳುಗುವ ತ್ಯಾಜ್ಯ ವಿಲೇವಾರಿಗೆ ಈ ವಿನೂತನ ಕ್ರಮಗಳಿಗೆ ಪಾಲಿಕೆ ಕೈಹಾಕಿದೆ.

ಭಾರೀ ಪ್ರಮಾಣದಲ್ಲಿ ರಾಜ ಕಾಲುವೆ ದಸೇರುವ ಪ್ಲಾಸ್ಟಿಕ್‌, ಥರ್ಮಾಕೋಲ್ ತ್ಯಾಜ್ಯವನ್ನು ಟ್ರ್ಯಾಶ್‌ ಬ್ಯಾರಿಯರ್‌ ತಡೆಯು ತ್ತದೆ. ಅದೇ ರೀತಿ ನೀರಿನಲ್ಲಿ ಮುಳುಗುವ ತ್ಯಾಜ್ಯವನ್ನು ಕಾಂಕ್ರಿಟ್ ತೊಟ್ಟಿಗಳು ಶೇಖರಣೆ ಮಾಡಲಿದ್ದು, ಪಾಲಿಕೆ ಅದನ್ನು ವಿಲೇವಾರಿ ಮಾಡತ್ತದೆ.

ಪ್ರಾಯೋಗಿಕವಾಗಿ ಅಗರ ಕೆರೆ, ಸಿಲ್ಕ್ಬೋರ್ಡ್‌ ಜಂಕ್ಷನ್‌, ದೊಮ್ಮಲೂರು ಬಳಿ ಅಳವಡಿಸಿ ರುವ ಟ್ರ್ಯಾಶ್‌ ಗೇಟ್‌ಗಳಿಂದ ನೀರು ಸರಾಗವಾಗಿ ಹರಿಯು ತ್ತಿದೆ. ಆ ಹಿನ್ನೆಲೆಯಲ್ಲಿ ಉಳಿದ ಕಾಲುವೆಗಳಲ್ಲೂ ಟ್ರ್ಯಾಶ್‌ ಗೇಟ್ ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಹೂಳು ಸಂಗ್ರಹ ತೊಟ್ಟಿ: ಆನೇಪಾಳ್ಯ, ದೊಮ್ಮಲೂರು ಬಳಿ ಹೂಳು ಸಂಗ್ರಹ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ತೊಟ್ಟಿಗಳು ಎರಡು ಮೀಟರ್‌ ಉದ್ದ, ಒಂದು ಮೀಟರ್‌ ಅಗಲ ಹಾಗೂ ಒಂದು ಮೀಟರ್‌ ಆಳ ಇರಲಿದ್ದು, ಕಾಲುವೆಗೆ ಅಡ್ಡಲಾಗಿ ಸಾಲು ತೊಟ್ಟಿಗಳನ್ನು ನಿರ್ಮಿಸಲಾಗುತ್ತದೆ. ಆ ತೊಟ್ಟಿಗಳಲ್ಲಿ ಶೇಖರಣೆಯಾಗುವ ಹೂಳು ಹಾಗೂ ತ್ಯಾಜ್ಯವನ್ನು ಪಾಲಿಕೆ ಸಿಬ್ಬಂದಿ ಸುಲಭವಾಗಿ ತೆರವುಗೊಳಿಸಲಿದ್ದಾರೆ.

ಟ್ರ್ಯಾಶ್‌ ಬ್ಯಾರಿಯರ್‌ ಎಂದರೇನು?: ಟ್ರ್ಯಾಶ್‌ ಬ್ಯಾರಿಯರ್‌ ವ್ಯವಸ್ಥೆ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಕೂಡ ಆವ್ಯವಸ್ಥೇ ಅಳವಡಿಕೆಗೆ ಚಿಂತನೆ ನಡೆಸಿದೆ. ರಾಜಕಾಲುವೆಯ ನಿಗದಿತ ಸ್ಥಳದಲ್ಲಿ ಟ್ರ್ಯಾಶ್‌ ಬ್ಯಾರಿಯರ್‌ಗಳನ್ನು ಅಳವಡಿಸಲಾಗುತ್ತದೆ. ನೀರಿನಲ್ಲಿ ತೇಲಿಬರುವ ತ್ಯಾಜ್ಯವನ್ನು ಬ್ಯಾರಿಯರ್‌ಗಳು ತಡೆಯುತ್ತವೆ. ಹೀಗೆ ಒಂದು ಕಡೆ ಸಂಗ್ರಹವಾದ ತ್ಯಾಜ್ಯವನ್ನು ಪಾಲಿಕೆ ಸಿಬ್ಬಂದಿ ಎರಡು ದಿನಕ್ಕೊಮ್ಮೆ ತೆರವುಗೊಳಿಸುತ್ತಾರೆ.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಶೀತಗಾಳಿ ಸೇರಿದಂತೆ ಆಗಾಗ ಆಗುತ್ತಿರುವ ಹವಾಮಾನದ ಬದಲಾವಣೆ ಇದೀಗ ಹಾಪ್‌ಕಾಮ್ಸ್‌ನ ಹಣ್ಣು ತರಕಾರಿ ಮಾರಾಟದ ಮೇಲೆ ಪರಿಣಾಮ ಬೀರಿದೆ. ಹಾಪ್‌ಕಾಮ್ಸ್‌ನಲ್ಲಿ...

  • ಬೆಂಗಳೂರು: ಹೈದರಾಬಾದ್‌ ಸೇರಿ ಇತ್ತೀಚಿನ ದಿನಗಳಲ್ಲಿ ನಡೆದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬೆನ್ನಲ್ಲೇ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು...

  • ಬೆಂಗಳೂರು: ಸರ್ಕಾರವು ಜಲಮಂಡಳಿಯಲ್ಲಿ ಕಾಯಂ ನೌಕರರ ನೇಮಕಾತಿಗೆ ಮಂಜೂರಾತಿ ನೀಡದೆ ಬಹುಪಾಲು ಹೊರಗುತ್ತಿಗೆ ಪದ್ಧತಿಯನ್ನು ಪ್ರೋತ್ಸಾಹಿಸುತ್ತಿದೆ. ಆ ಮೂಲಕ ಭವಿಷ್ಯದಲ್ಲಿ...

  • ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಸ್ಥಳೀಯ ನೋಂದಣಿ ವಾಹನಗಳ ಕೊಡುಗೆ ಮಾತ್ರವಲ್ಲ; ನಿತ್ಯ ಬಂದು-ಹೋಗುವ ನೆರೆ ರಾಜ್ಯ ಹಾಗೂ ಜಿಲ್ಲೆ ವಾಹನಗಳ ಕೊಡುಗೆ ಕೂಡ ದೊಡ್ಡದಿದೆ. ಸಾರಿಗೆ...

  • ಬೆಂಗಳೂರು: ಒಂದೆಡೆ 95 ವರ್ಷದ ವೃದ್ಧೆ ಸ್ವತಃ ಸ್ಕೂಟರ್‌ ಓಡಿಸಿಕೊಂಡು ಬಂದು ಮತಚಲಾಯಿಸಿದರು. ಇನ್ನೊಂದೆಡೆ ಯುವಕರು ಮತಗಟ್ಟೆಯಿಂದ ದೂರ ಉಳಿದರು. ಕೆಲವರು ದೂರದ...

ಹೊಸ ಸೇರ್ಪಡೆ