ವೃಷಭಾವತಿ ಉಕ್ಕಿ ಹರಿದರೆ ದ್ವೀಪ ಸೃಷ್ಟಿ

ಮಳೆ ಬಂದರೆ ಗುಂಡಪ್ಪ ಬಡಾವಣೆ, ಭವಾನಿ ನಗರಕ್ಕೆ ನುಗ್ಗುವ ಕೊಳಕು ನೀರು

Team Udayavani, Oct 19, 2020, 12:26 PM IST

bng-tdy-2

ಬೆಂಗಳೂರು: ನಗರದ ವೃಷಭಾವತಿ ನಾಲೆ ಮಾರ್ಗದ ನಿರ್ವಹಣೆ ಹಾಗೂ ಅಭಿವೃದ್ಧಿಯಲ್ಲಿನ ಲೋಪದಿಂದ ದಾಸರಹಳ್ಳಿ ವಲಯ, ದಕ್ಷಿಣ ವಲಯ ಹಾಗೂ ರಾಜರಾಜೇಶ್ವರಿಯಲ್ಲಿ ಮಳೆ ಬಂದರೆ ಕೆಲವು ಬಡಾವಣೆಗಳು ಅಕ್ಷರಶಃ “ದ್ವೀಪ’ಗಳಂತಾಗುತ್ತವೆ.

ನಗರದಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ರಾಜಕಾಲುವೆ ವಿಸ್ತೀರ್ಣ ಸೇರಿ ಒಟ್ಟು 842 ಕಿ.ಮೀ ಉದ್ದವಿದ್ದು,ಈಪೈಕಿ ವೃಷಭಾವತಿ ನಾಲೆಯ ಮಾರ್ಗ ಒಟ್ಟು90 ಕಿ.ಮೀ .ಈನಾಲೆಗೆ 34 ದ್ವಿತೀಯ ಹಂತದಕಾಲುವೆಗಳು ಕೂಡಿಕೊಳ್ಳುತ್ತವೆ. ಮಳೆ ಬಂದು ನಾಲೆಯಲ್ಲಿ ನೀರು ಸರಾಗವಾಗಿಹರಿದುಹೋಗದೆ ಪ್ರವಾಹ ಉಂಟಾಗಿ, ನೀರು ಹಿಮ್ಮುಖವಾಗಿ ಹರಿದು ಮೊದಲು ದಾಸರಹಳ್ಳಿಯ ಚೊಕ್ಕ ಸಂದ್ರವಾರ್ಡ್‌ನ ಗುಂಡಪ್ಪಬಡಾವಣೆಯಲ್ಲಿ ನೀರು ತುಂಬಿ ಕೊಳ್ಳುತ್ತದೆ. ಅಂದರೆ ಅಲ್ಲಿನ ಜನತೆಗೆ ಅಂದು ಜಾಗರಣೆ. ಗುಂಡಪ್ಪ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಇರುವುದು, ತಡೆಗೋಡೆ ಒಡೆದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಜನ ಮಳೆ ಬಂದಾಗೆಲ್ಲ ಸಮಸ್ಯೆ ಎದುರಿಸುತ್ತಿದ್ದಾರೆ.

ಅಲ್ಲದೆ, ಮಳೆಯಿಂದ ನಾಲೆಯಲ್ಲಿನ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಇದರ ಜತೆಗೆ ರಸ್ತೆಯ ಕಸವೂ ಬರುವುದರಿಂದ ದುರ್ವಾಸ ಯಿಂದ ಜಾಗರಣೆ ಮಾಡುವುದರ ಜತೆಗೆ ಊಟವೂ ಸೇರುವುದಿಲ್ಲ ಎನ್ನುತ್ತಾರೆ ಸ್ಥಳೀಯರು.ಈ ಅವ್ಯವಸ್ಥೆಗಳ ವಿರುದ್ಧ ಹಲವಾರು ದಿನಗಳಿಂದ ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಲ್ಲೇ ಇದ್ದಾರೆ. ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಸಮಸ್ಯೆ ಪರಿಹಾರಕ್ಕೆ ಅನುದಾನದ ಕೊರತೆ ?: ಗುಂಡಪ್ಪ ಬಡಾವಣೆಯ ರಾಜಕಾಲುವೆಯ ಮಾರ್ಗ ಸರಿಪಡಿಸಲು ಹಾಗೂ ರಾಜಕಾಲುವೆ ಮಾರ್ಗ ಎತ್ತರಿಸುವ ಬಗ್ಗೆ ಪಾಲಿಕೆಯ ರಾಜಕಾಲುವೆ ವಿಭಾಗದ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯಾದರೂ, ಅನುದಾನ ಇಲ್ಲದೆ ಇರುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನುದಾನ ಬಿಡುಗಡೆಯಾದರೆ ಶೀಘ್ರ ಕಾಮಗಾರಿಆರಂಭಿಸುವುದಾರಿಅಧಿಕಾರಿಗಳುಹೇಳುತ್ತಾರೆ. ಚೊಕ್ಕಸಂದ್ರ ವಾರ್ಡ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ನೋಡಲ್‌ ಅಧಿಕಾರಿ ಎಚ್‌. ಶಿವಕುಮಾರ್‌ ಪ್ರಕಾರ, ರಾಜಕಾಲುವೆ ಹೂಳು ತೆಗೆಯಲಾಗಿದ್ದು, ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ವಾರ್ಡ್‌ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ.

ಗುಂಡಪ್ಪ ಬಡಾವಣೆಯಿಂದ ದೊಡ್ಡ ಬಿದರಕಲ್ಲುಕೆರೆಯ ವರೆಗೆ “ಯು’ ವಿನ್ಯಾಸದ ರಾಜಕಾಲುವೆ ಮಾರ್ಗ ನಿರ್ಮಾಣವಾಗಬೇಕಿದೆ. ಆದರೆ, ಇದಕ್ಕೆ ಇಲ್ಲಿಯವರೆಗೆ ಅನುದಾನ ಕೊರತೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ದಾಸರಹಳ್ಳಿ ಶಾಸಕರಾದ ಆರ್‌. ಮಂಜುನಾಥ್‌ ಅನುದಾನ ಒದಗಿಸುವುದಾಗಿ ತಿಳಿಸಿದ್ದಾರೆ. ಅನುದಾನ ಬಿಡುಗಡೆ ಯಾದ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು.

10 ಕೋಟಿ ರೂ. ವೆಚ್ಚದಲ್ಲಿ ತುರ್ತು ಕಾಮಗಾರಿ :  ದಾಸರಹಳ್ಳಿಯ ರಾಜಕಾಲುವೆ ಸಮಸ್ಯೆಗೆ ತಾರ್ಕಿಕ ಪರಿಹಾರಕಂಡುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸೂಚನೆ ನೀಡಿದ್ದಾರೆ ಎಂದು ಬಿಬಿಎಂಪಿಯ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎನ್‌.ಪ್ರಹ್ಲಾದ್‌ ತಿಳಿಸುತ್ತಾರೆ. ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಗುಂಡಪ್ಪ ಬಡಾವಣೆಯ ರಾಜಕಾಲುವೆಯ ಮಾರ್ಗ ಸರಿಪಡಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಳ್ಳುವಂತೆ ಹಾಗೂ ಅಂದಾಜು 10 ಕೋಟಿ ರೂ. ಅನುದಾನ ನೀಡುವುದಾಗಿಯೂ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರಕ್ರಿಯಾ ಯೋಜನೆ ರೂಪಿಸಿಕೊಳ್ಳಲಾಗುವುದು ಎಂದರು.

ದೊಡ್ಡಬಿದರ ಕಲ್ಲು ವಾರ್ಡ್‌ನಲ್ಲೂ ರಾಜಕಾಲುವೆ ಸಮಸ್ಯೆ :  ಚೊಕ್ಕಸಂದ್ರ ವಾರ್ಡ್‌ನ ಪಕ್ಕದ ವಾರ್ಡ್‌ ಆದ ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿಯೂ ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ದೊಡ್ಡಬಿದರಕಲ್ಲು ವಾರ್ಡ್‌ನ ಭವಾನಿ ನಗರ ಸೇರಿದಂತೆ ವಿವಿಧ ಪ್ರದೇಶದಲ್ಲಿ ನೀರು ಹರಿದು ಸೂಕ್ತ ಮಾರ್ಗವಿಲ್ಲ. ರಾಜಕಾಲುವೆ ಮಾರ್ಗದಲ್ಲಿ ಕೆಲವೆಡೆ ತಡೆಗೋಡೆಯೂ ಇಲ್ಲದಕಾರಣ ಕಳೆಗಿಡಗಳು ಬೆಳೆದಿವೆ.

ರಾಜಕಾಲುವೆ ನೀರು ಹಿಮ್ಮುಖ ಹರಿವಿಗೆಕಾರಣ :

  • ರಾಜಕಾಲುವೆ ನೀರು ಬಡಾವಣೆಯ ಮನೆಗಳಿಗೆ ಹಿಮ್ಮುಖವಾಗಿ ಹರಿದುಹೋಗು ವುದನ್ನು ತಪ್ಪಿಸಲು ರಿಟರ್ನಿಂಗ್‌ ವಾಲ್‌ ನಿರ್ಮಿಸಿಲ್ಲ
  • ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗಲು ‘ಯು’ ವಿನ್ಯಾಸದ ಬ್ಲಾಕ್‌ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸಿಲ್ಲ.
  • ರಾಜಕಾಲುವೆ ಮಾರ್ಗವಾಗಿ ಹರಿಯುವ ನೀರು ಸಮೀಪದ ದೊಡ್ಡಬಿದರಕಲ್ಲುಕೆರೆ ಸೇರುತ್ತದೆ. ಆದರೆ, ದೊಡ್ಡಬಿದರಕಲ್ಲುಕೆರೆ ಎತ್ತರದಲ್ಲಿದ್ದು, ರಾಜಕಾಲುವೆ ನೀರುಕೆರೆ ಸೇರುತ್ತಿಲ್ಲ
  • ರಾಜಕಾಲುವೆಯ ತಡೆಗೋಡೆಗಳ ಎತ್ತರವನ್ನೇ ಹೆಚ್ಚಿಸಲಿಲ್ಲ. ಹೀಗಾಗಿ, 10-20ಮಿ.ಮೀ ಮಳೆಯಾದರೂ, ಈ ಬಡಾವಣೆ ಜಲಾವೃತವಾಗುತ್ತಿದೆ.
  • ಗುಂಡಪ್ಪ ಬಡಾವಣೆಯ ರಾಜಕಾಲುವೆ ಮಾರ್ಗದಲ್ಲಿ 500 ಮೀ. ಒತ್ತುವರಿಯಾಗಿದ್ದು, ಒತ್ತುವರಿ ತೆರವು ಮಾಡುವ ಕೆಲಸವಾಗಿಲ್ಲ.

ದೊಡ್ಡಬಿದರಕಲ್ಲು ರಾಜಕಾಲುವೆ ಮಾರ್ಗ ರಚನೆ ಮಾಡುವ ಸಂಬಂಧ ಮಾಹಿತಿ ನೀಡುವಂತೆ ಕೇಳಲಾಗಿದೆ. ಈ ವರದಿಯ ಆಧಾರದ ಮೇಲೆ ಮುಂದಿನ ವಾರ್ಡ್‌ ಕಮಿಟಿಯಲ್ಲಿ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ದೊಡ್ಡಶಾನಯ್ಯ, ದೊಡ್ಡಬಿದರಕಲ್ಲು ವಾರ್ಡ್‌ ನೋಡಲ್‌ ಅಧಿಕಾರಿ

ಕಳೆದ 12ವರ್ಷ ಗಳಿಂದ ಗುಂಡಪ್ಪ ಬಡಾವಣೆಯಲ್ಲಿ ನೆಲೆಸಿದ್ದೇವೆ. ಪ್ರತಿ ಬಾರಿಯೂ ಮಳೆ ಬಂದಾಗ ಮನೆಗೆ ನೀರು ನುಗ್ಗಿ ಮನೆಯ ಎಲೆಕ್ಟ್ರಾನಿಕ್ಸ್‌ ವಸ್ತುಗಳುಹಾಗೂ ಪಿಠೊಪಕರಣಗಳುಹಾಳಾಗುತ್ತಿವೆ.ಈ ಸಮಸ್ಯೆಯಿಂದ ಮುಕ್ತಿಬೇಕು. ಅನುರಾಧ, ಗುಂಡಪ್ಪ ಬಡಾವಣೆ ನಿವಾಸಿ.

ಮಳೆ ಬಂದಾಗ ರಾಜಕಾಲುವೆ ಉಕ್ಕಿ ಹರಿದು ಒಳಚರಂಡಿ ನೀರು ಮನೆ ಹಾಗೂ ಸಂಪ್‌ ಸೇರುತ್ತದೆ. ಮಳೆ ಬಂದ ದಿನ ನಾವು ನಿದ್ದೆ ಮಾಡುವುದಿಲ್ಲ. ಭಾರೀ ಮಳೆಯಾದರಂತೂ ದೇವರೇಕಾಪಾಡಬೇಕು. ಸುಧಾ, ಗುಂಡಪ್ಪ ಬಡಾವಣೆ ನಿವಾಸಿ

ಹಿತೇಶ್‌ ವೈ

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.